ಧರ್ಮಸ್ಥಳ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಇತಿಹಾಸ ವಿಭಾಗದ ಸಹಯೋಗದೊಂದಿಗೆ ಏರ್ಪಟ್ಟ ಭಾರತೀಯ ಪುರಾಭಿಲೇಖ ಸಂಸ್ಥೆಯ 45ನೇ ವಾರ್ಷಿಕ ಅಧಿವೇಶನ ಮತ್ತು ಭಾರತೀಯ ಸ್ಥಳನಾಮ ಸಂಸ್ಥೆಯ 39ನೇ ವಾರ್ಷಿಕ ಸಮಾವೇಶದ ಎರಡು ದಿನಗಳ ಜಂಟಿ ಅಧಿವೇಶನ ಪ್ರಯುಕ್ತ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಆಯೋಜಿಸಿದ್ದ ವಸ್ತುಪ್ರದರ್ಶನವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೆಂದ್ರ ಹೆಗ್ಗಡೆ ಉದ್ಘಾಟಿಸಿ ವೀಕ್ಷಿಸಿದರು.
ವಸ್ತು ಪ್ರದರ್ಶನದಲ್ಲಿ ದೇಶದ ಅತ್ಯಂತ ಪ್ರಾಚೀನ ಶಾಸನ, ಅಶೋಕ ಶಾಸನ, ಹಿಂದಿನ ಕಾಲದಿಂದ ಪ್ರಸ್ತುತದ ವರೆಗಿನ ಶಾಸನ, ಉದ್ದರಣೆ ಸಾಹಿತ್ಯ, ಪ್ರಾಚೀನ ಭಾರತದ ಲಿಪಿಗಳು, ನಾಣ್ಯಗಳು, ಭಾರತೀಯ ಮಹಾಕಾವ್ಯಗಳು ಕಂಚಿ ಶಾಸನ, ಗುಹಾ ಶಾಸನದ ಛಾಯಚಿತ್ರಗಳನ್ನು ಪ್ರದರ್ಶಿಸಲಾಯಿತು.
ಈ ಸಂದರ್ಭದ್ದಲ್ಲಿ ಎ ಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಯಶೋವರ್ಮ, ಎಸ್.ಡಿ.ಎಂಕಾಲೇಜಿನ ಪ್ರಾಂಶುಪಾಲರಾದ ಡಾ.ಸತೀಶ್ಚಂದ್ರ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English