ಮಂಗಳೂರು : ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಬಿಜೆಪಿಯ ಹಿರಿಯ ಸದಸ್ಯ ದಿವಾಕರ ಪಾಂಡೇಶ್ವರ ಅವರು ಆಯ್ಕೆಯಾಗಿದ್ದಾರೆ. ದಿವಾಕರ ಅವರು 46ನೇ ಕಂಟೋನ್ಮೆಂಟ್ ವಾರ್ಡ್‌ನಿಂದ ನಿರಂತರವಾಗಿ ಮೂರು ಬಾರಿ ಆಯ್ಕೆಯಾಗಿರುವ ಕ್ರಿಯಾಶೀಲ ಹಾಗೂ ಜನಸ್ನೇಹಿ ಕಾರ್ಪೊರೇಟರ್ ಎಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಒಂದು ವರ್ಷದಿಂದ ಮಹಾನಗರ ಪಾಲಿಕೆಯ ಮೇಯರ್ ಹುದ್ದೆ ತೆರವಾಗಿದ್ದು, ಇದೀಗ ನೂತನ ಮೇಯರ್ ಆಗಿ ದಿವಾಕರ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.
ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖೀಸಿದಂತೆ ಶೀಘ್ರದಲ್ಲಿ ಸಂಸದರು, ಶಾಸಕರ ಹಾಗೂ ಪಕ್ಷದ ಪ್ರಮುಖರ ಜತೆಗೆ ಮಾತುಕತೆ ನಡೆಸಿ, ನಾಗರಿಕರ ಸಲಹೆ ಪಡೆದು ಎಲ್ಲಾ ವಾರ್ಡ್ ಗಳ ಅಭಿವೃದ್ಧಿ ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
ನಗರದ 7-8 ವಾರ್ಡ್‌ಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ನಡೆಯುತ್ತಿದ್ದು, ಅದು ಪೂರ್ಣವಾಗಿ ಸಾಕಾರಗೊಂಡರೆ ಈ ಎಲ್ಲ ವಾರ್ಡ್‌ಗಳು ಅತ್ಯಪೂರ್ವವಾಗಿ ಅಭಿವೃದ್ಧಿಯಾಗಲಿವೆ. ಆದರೆ ಉಳಿದ ವಾರ್ಡ್‌ಗಳಿಗೆ ಈ ಅವಕಾಶ ಇಲ್ಲ ಎಂಬುದು ಆ ವಾರ್ಡ್‌ನವರ ಆಕ್ಷೇಪ. ಹೀಗಾಗಿ ಸ್ಮಾರ್ಟ್‌ಸಿಟಿ ಸ್ವರೂಪವನ್ನು ನಗರದ ಎಲ್ಲ ವಾರ್ಡ್‌ಗಳಿಗೂ ವಿಸ್ತರಿಸುವ ಅಗತ್ಯವಿದೆ. ಇದಕ್ಕಾಗಿ ಸರಕಾರದಿಂದ ಬರುವ ಬೇರೆ ಬೇರೆ ಅನುದಾನವನ್ನು ಸ್ಮಾರ್ಟ್‌ಸಿಟಿ ಇರುವ ವಾರ್ಡ್ ಹೊರತುಪಡಿಸಿ, ಉಳಿದ ವಾರ್ಡ್‌ಗಳಿಗೆ ಮುಖ್ಯ ಆದ್ಯತೆಯಲ್ಲಿ ಹಂಚಿಕೆಗೆ ಪ್ರಾಮುಖ್ಯ ನೀಡಲಾಗುವುದು ಎಂದು ದಿವಾಕರ್ ಹೇಳಿದ್ದಾರೆ.
Click this button or press Ctrl+G to toggle between Kannada and English