ಸ್ಮಾರ್ಟ್ ಸಿಟಿ ಯೋಜನೆಯಡಿ ಸ್ಮಾರ್ಟ್ ಕಸಾಯಿಖಾನೆ ನಿರ್ಮಾಣಕ್ಕೆ ವಿರೋಧ, ಯೋಜನೆ ರದ್ದುಗೊಳಿಸಲು ಆಗ್ರಹ

10:00 AM, Monday, March 2nd, 2020
Share
1 Star2 Stars3 Stars4 Stars5 Stars
(No Ratings Yet)
Loading...

vishwa-hindu

ಮಂಗಳೂರು : ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರಿನ ಕುದ್ರೋಳಿ ಕಸಾಯಿಖಾನೆಯನ್ನು ಹೊಸ ಸ್ಮಾರ್ಟ್ ಕಸಾಯಿಖಾನೆಯನ್ನಾಗಿ ನಿರ್ಮಾಣ ಮಾಡಲು ನಿರ್ಧರಿಸಿದ್ದು, ಈಗಾಗಲೇ ಡಿಪಿಆರ್ (ವಿವರವಾದ ಯೋಜನೆ ವರದಿ) ತಯಾರಿಸಿದ್ದನ್ನು ವಿಶ್ವಹಿಂದೂ ಪರಿಷದ್ ಮತ್ತು ಬಜರಂಗದಳ ತೀವ್ರವಾಗಿ ವಿರೋಧಿಸುತ್ತದೆ,

ಈ ಕಸಾಯಿಖಾನೆಯೂ ಅವೈಜ್ಞಾನಿಕ, ಕಾನೂನು ಬಾಹಿರವಾಗಿದ್ದು. ಈ ಕಸಾಯಿಖಾನೆಯಲ್ಲಿ ನಿರಂತರ ಗೋಹತ್ಯೆಯಾಗುತ್ತಿದ್ದು, ಜಿಲ್ಲೆಯಲ್ಲಿ ಹಲವಾರು ಗಲಭೆ ಕೂಡ ಕಾರಣವಾಗಿದೆ ಅದರಿಂದ ಈ ಕಸಾಯಿಖಾನೆಯನ್ನು ವಿರೋಧಿಸಿ ಈಗಾಗಲೇ ಮಾನ್ಯ ನಗರಾಭಿವೃದ್ಧಿ ಸಚಿವರಾದ ಶ್ರೀ ಬೈರಟ್ಟಿ ಬಸವರಾಜ್ ರವರಿಗೆ ಮನವಿಪತ್ರ ನೀಡಲಾಗಿದ್ದು, ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್, ಜಿಲ್ಲಾ ಬಜರಂಗದಳ ಸಂಯೋಜಕ್ ಪುನೀತ್ ಅತ್ತಾವರ್, ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಪ್ರದೀಪ್ ಸರಿಪಲ್ಲ, ಜಿಲ್ಲಾ ಸೇವಾ ಪ್ರಮುಖ್ ಪ್ರವೀಣ್ ಕುತ್ತಾರ್, ಜಿಲ್ಲಾ ಗೋರಕ್ಷ ಪ್ರಮುಖ್ ಗುರುಪ್ರಸಾದ್ ಉಳ್ಳಾಲ್ ಉಪಸ್ಥಿತಿ ಇದ್ದರು, ದಕ್ಷಿಣಕನ್ನಡ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಶ್ರೀ ವೇದವ್ಯಾಸ ಕಾಮತ್, ಸ್ಮಾರ್ಟ್ ಸಿಟಿ ಚೇರ್ ಮ್ಯಾನ್ ಆದ ಶ್ರೀ ಪೊನ್ನುರಾಜ್ ಇವರುಗಳಿಗೆ ಮನವಿಪತ್ರ ನೀಡಲಾಗಿದ್ದು ತಕ್ಷಣ ಪ್ರಸ್ತಾವಿತ ಈ ಯೋಜನೆಯನ್ನು ಕೈಬಿಡಬೇಕೆಂದು ವಿಶ್ವಹಿಂದೂ ಪರಿಷದ್ ಮತ್ತು ಬಜರಂಗದಳ ಆಗ್ರಹಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English