ಖೇಲೋ ಇಂಡಿಯಾ ಕ್ರೀಡಾಕೂಟ : ಮಂಗಳೂರು ವಿವಿಯ ಪುರುಷ ಹಾಗೂ ಮಹಿಳಾ ತಂಡಕ್ಕೆ ಸಮಗ್ರ ಚಾಂಪಿಯನ್ ಪಟ್ಟ

10:38 AM, Monday, March 2nd, 2020
Share
1 Star2 Stars3 Stars4 Stars5 Stars
(No Ratings Yet)
Loading...

khelo-india

ಮೂಡುಬಿದಿರೆ : ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ ಅಖಿಲ ಭಾರತಅಂತರ್ ವಿ.ವಿ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಪುರುಷ ತಂಡ 64 ಅಂಕಗಳೊಂದಿಗೆ ಹಾಗೂ ಮಹಿಳಾ ತಂಡ 51 ಅಂಕಗಳೊಂದಿಗೆ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ಮಂಗಳೂರು ವಿವಿ ಒಟ್ಟು 115 ಅಂಕಗಳೊಂದಿಗೆ ಸಮಗ್ರ ಚಾಂಪಿಯನ್ನಾಗಿ ಹೊರಹೊಮ್ಮಿತು.

ಮಂಗಳೂರು ವಿವಿಯ ಒಟ್ಟು 7 ಚಿನ್ನ, 6ಬೆಳ್ಳಿ ಹಾಗೂ5 ಕಂಚಿನ ಪದಕದೊಂದಿಗೆ ಚಾಂಪಿಯನ್ನ ಪಟ್ಟವನ್ನು ತನ್ನಾದಾಗಿಸಿಕೊಂಡಿತು. ಮಂಗಳೂರು ವಿವಿಯನ್ನು ಪ್ರತಿನಿಧಿಸಿದ 32 ವಿದ್ಯಾರ್ಥಿಗಳ ತಂಡದಲ್ಲಿ 30 ವಿದ್ಯಾರ್ಥಿಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಾಗಿದ್ದರು. ಗಳಿಸಿದ ಒಟ್ಟು 18 ಪದಕಗಳಲ್ಲಿ 17ಪದಕಗಳು ಆಳ್ವಾಸ್ ವಿದ್ಯಾರ್ಥಿಗಳ ಪಾಲಾಗಿದ್ದವು. ಬೆಳ್ಳಿ ಪದಕ ಪಡೆದ 4*100 ರಿಲೇಯ 4 ಜನರ ತಂಡದಲ್ಲಿ ಇಬ್ಬರು ಆಳ್ವಾಸ್‌ನ ವಿದ್ಯಾರ್ಥಿಗಳಾಗಿದ್ದು, ಉಳಿದಿಬ್ಬರೂ ಉಡುಪಿಯ ಎಂಜಿಎಂ ಕಾಲೇಜು ಹಾಗೂ ಗೋಣಿಕೊಪ್ಪದ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.

ಮಂಗಳೂರು ವಿವಿಯ ಪುರುಷರ ಪದಕ ಪಟ್ಟಿ
ಚಿನ್ನ- 4
ಬೆಳ್ಳಿ-3
ಕಂಚು- 4
ಮಂಗಳೂರು ವಿವಿಯ ಮಹಿಳೆಯರ ಪದಕ ಪಟ್ಟಿ
ಚಿನ್ನ- 3
ಬೆಳ್ಳಿ-3
ಕಂಚು- 1
ಮಂಗಳೂರು ವಿವಿಯ ತಂಡದ ಸಂಖ್ಯೆ
ಒಟ್ಟು_ 32
ಪುರುಷರು-17
ಮಹಿಳೆಯರು- 15

(ಆಳ್ವಾಸ್ ನ ವಿದ್ಯಾರ್ಥಿಗಳು- 30, ಉಡುಪಿಯ ಎಂಜಿಎಂ ಕಾಲೇಜು-01 ಗೋಣಿಕೊಪ್ಪದ ಕಾವೇರಿ ಕಾಲೇಜು -01)

ಸಮಗ್ರ ತಂಡಗಳ ಅಂಕ
ಮಂಗಳೂರು ವಿವಿ-115
ಮಹಾತ್ಮಗಾಂಧಿ ವಿವಿ-94
ಮದ್ರಾಸ್ ವಿವಿ-59

ಇಂದಿನ ಪಂದ್ಯಗಳಲ್ಲಿ ಮಂಗಳೂರು ವಿವಿಯ ಪದಕಗಳು
ಮಹಿಳಾ ವಿಭಾಗದ 100 ಮೀಟರ‍್ಸ್‌ಡ್ಯಾಶ್‌ನ್ನು 11.99ಸೆಕೆಂಡ್‌ಗಳಲ್ಲಿ ಪೂರೈಸಿದ
ಆಳ್ವಾಸ್ ಕಾಲೇಜಿನ ವರ್ಷಾಗೆ ಹ್ಯಾಮರ್‌ಥ್ರೋನಲ್ಲಿ 51.80ಮೀಟರ್ ಎಸೆತದೊಂದಿಗೆ ಚಿನ್ನದ ಪದಕ, ಎತ್ತರಜಿಗಿತದಲ್ಲಿ 1.74 ಮೀಟರ್‌ಎತ್ತರಕ್ಕೆ ಹಾರಿದಎಸ್. ಬಿ ಸುಪ್ರಿಯಾ ಚಿನ್ನದ ಪದಕವನ್ನು ತಮ್ಮದಾಗಿಸಿ ಕೊಂಡಿದ್ದಾರೆ.

ಟ್ರಿಪಲ್‌ ಜಂಪ್ ವಿಭಾಗದಲ್ಲಿ 12.78ಮೀಟರ್ ಹಾರಿದ ಐಶ್ವರ್ಯಾಬಿ.ಗೆ ಚಿನ್ನದ ಪದಕ ಮತ್ತು 12.10 ಮೀಟರ್ ಹಾರಿದ ಅನುಷಾ ಜಿ. ಗೆ ಕಂಚಿನ ಪದಕ ಲಭಿಸಿದೆ.ಪುರುಷರ ವಿಭಾಗದ 200ಮೀಟರ್‌ಡ್ಯಾಶ್ ವಿಭಾಗವನ್ನು 21.75 ಸೆಕೆಂಡ್‌ಗಳಲ್ಲಿ ಮುಗಿಸಿದ ವಿಘ್ನೇಶ್ ಎ. ಗೆ ಕಂಚಿನ ಪದಕ ಲಭಿಸಿದೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ಮ್ಯಾನೇಜ್ ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English