ತೀಯಾ ಸಮಾಜ ಪಶ್ಚಿಮ ವಲಯದ ವತಿಯಿಂದ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ

10:52 AM, Monday, March 2nd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

pooje

ಮುಂಬಯಿ : ತೀಯಾ ಸಮಾಜ ಮುಂಬಯಿಯ ಪಶ್ಚಿಮ ವಲಯ ಸಮಿತಿಯು 18ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟಿದ್ದು ಇದೀಗ ಹದಿನೆಂಟನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯನ್ನು ಆಚರಿಸುತ್ತಿರುವುದು ಅಭಿನಂದನೀಯ. ಸಮಾಜದಲ್ಲಿ ಹೆಚ್ಚಿನ ಮಟ್ಟದಲ್ಲಿ ಸಮಾಜ ಬಾಂಧವರು ಕ್ರೀಯಾಶೀಲರಾಗಲು ನಾವು ವಲಯ ಸಮಿತಿಗಳನ್ನು ಆಗ ರಚಿಸಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುದರೊಂದಿಗೆ ಸಮಾಜ ಬಾಂಧವರನ್ನು ಒಂದೆಡೆ ತರುವ ಕೆಲಸವನ್ನು ಮಾಡುತ್ತಿರುವೆವು. ಸಮಾಜದ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯರುಗಳಿಗೆ ಭಿನ್ನಾಭಿಪ್ರಾಯವಾದಲ್ಲಿ ಅವರ ಸಮಸ್ಯೆಯನ್ನು ಬಗೆಯರಿಸಲು ನಮ್ಮ ಸಮಾಜದ ಉನ್ನತ ಪದವಿಯನ್ನಲಂಕರಿಸಿದ ಸಮಾಜದ ಟ್ರಷ್ಠಿಗಳು ಈ ಬಗ್ಗೆ ಕ್ರೀಯಾಶೀಲಾರಾಗಿ ಸಮಸ್ಯೆಯನ್ನು ಬಗೆಯರಿಸಬೇಕು ಎಂದು ತೀಯಾ ಸಮಾಜ ಮುಂಬಯಿಯ ಮಾಜಿ ಅಧ್ಯಕ್ಷ, ಉಧ್ಯಮಿ ಚಂದ್ರಶೇಖರ ಆರ್ ಬೆಳ್ಚಡ ಅಭಿಪ್ರಾಯ ಪಟ್ಟರು.

ತೀಯಾ ಸಮಾಜ ಮುಂಬಯಿಯ ಪಶ್ಚಿಮ ವಲಯ ದ ವತಿಯಿಂದ 18 ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯು ರವಿವಾರ, ಮಾರ್ಚ್ 1 ರಂದು ಬೆಳಿಗ್ಗೆ ಶ್ರೀ ಅದಮಾರು ಮಠ, ಎಸ್. ವಿ. ರೋಡ್, ಫಯರ್ ಬ್ರಿಗೇಡ್ ಹತ್ತಿರ, ಅಂಧೇರಿ ಪಶ್ಚಿಮ, ಮುಂಬಯಿ 400058 ಇಲ್ಲಿ ರಘವೇಂದ್ರ ಭಟ್ ಅವರ ಪೌರೋಹಿತ್ಯದಲ್ಲಿ ಜರಗಿದ್ದು ಈ ಸಂದರ್ಭದಲ್ಲಿ ಚಂದ್ರಶೇಖರ ಆರ್ ಬೆಳ್ಚಡ ಅವರು ಮಾತನಾಡುತ್ತಾ ೭೫ ವರ್ಷಗಳ ಹಿಂದೆ ಹಿರಿಯರು ಸ್ಥಾಪಿಸಿದ ನಮ್ಮ ಸಮಾಜವನ್ನು ಉನ್ನತ ಮಟ್ಟಕ್ಕೇರಿಸೋಣ ಎಂದರು. ಪೂಜೆಯಲ್ಲಿ ಮೋಹನ್ ದಾಸ್ ಸುವರ್ಣ ಮತ್ತು ಮಹಿಳಾ ವಿಭಾಗದ ಮಾಜಿ ಕಾರ್ಯಧ್ಯಕ್ಷೆ ಚಂದ್ರ ಎಂ. ಸುವರ್ಣ ಪಾಲ್ಗೊಂಡಿದ್ದರು.

pooje

ಮಹಾಪೂಜೆ ಮಂಗಳಾರತಿಯ ನಂತರ ಸಮಾಜಕ್ಕೆ ವಿವಿಧ ರೀತಿಯಲ್ಲಿ ಸಹಕರಿಸಿದ ದಾನಿಗಳಾದ ಬೋರ್ಡ್ ಆಪ್ ಟ್ರಷ್ಟ ನ ಕಾರ್ಯಾಧ್ಯಕ್ಷ, ರೋಹಿದಾಸ ಬಂಗೇರ, ಉದ್ಯಮಿ ಕೃಷ್ಣ ಎನ್ ಉಚ್ಚಿಲ್, ಟ್ರಷ್ಠಿ ಜಯ ಸಾಲ್ಯಾನ್, ಮಾಜಿ ಅಧ್ಯಕ್ಷರುಗಳಾದ ಕೆ. ಪಿ. ಅರವಿಂದ್, ಚಂದ್ರಶೇಖರ ಆರ್. ಬೆಳ್ಚಡ, ಪ್ರಕಾಶ್ ಸುವರ್ಣ, ಸುಕುಮಾರ್ ಕರ್ಕೇರ, ಮನೀಷ್ ಪ್ರಾಪ್ತಿ ಇವರನ್ನು ಪಶ್ಚಿಮ ವಲಯದ ಕಾರ್ಯಾಧ್ಯಕ್ಷರಾದ ಸುಧಾಕರ ಉಚ್ಚಿಲ್ ಸನ್ಮಾನಿಸಿದರು. ತೀಯಾ ಸಮಾಜದ ಕಾರ್ಯಕಾರಿ ಸಮಿತಿಯ ಪರವಾಗಿ ಕೋಶಾಧಿಕಾರಿ ಅಶ್ವಿನ್ ಬಂಗೇರ, ಟ್ರಷ್ಟಿಗಳಾದ ಟಿ. ಬಾಬು ಬಂಗೇರ ಮತ್ತು ಅಪ್ಪುನ್ಹಿ ಬಂಗೇರ, ಪಶ್ಚಿಮ ವಲಯ ಮಹಿಳಾ ವಿಭಾಗದ ಕಾರ್ಯದರ್ಶಿ ಶಶಿಪ್ರಭಾ ಬಂಗೇರ, ತೀಯಾ ಬೆಳಕು ಮಾಸಿಕದ ಸಂಪಾದಕ ಈಶ್ವರ ಎಂ. ಐಲ್, ಆರೋಗ್ಯ ನಿಧಿಯ ಕಾರ್ಯಾಧ್ಯಕ್ಷರಾದ ತಿಮ್ಮಪ್ಪ ಬಂಗೇರ, ಪೂರ್ವ ವಲಯ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ್ ಬಂಗೇರ ಇವರನ್ನು ಗೌರವಿಸಲಯಿತು.

ಕಳೆದ ಹಲವಾರು ವರ್ಷಗಳಿಂದ ತೀಯಾ ಸಮಾಜ ಪಶ್ಚಿಮ ವಲಯದಲ್ಲಿ ವಿವಿಧ ರೀತಿಯಲ್ಲಿ ಸೇವೆ ಮಾಡುತ್ತಾ ಬಂದಿರುವ ಪಶ್ಚಿಮ ವಲಯದ ಸ್ಥಾಪಕ ಕಾರ್ಯಾಧ್ಯಕ್ಷ ಐಲ್ ಬಾಬು, ಮಾಜಿ ಕಾರ್ಯಾಧ್ಯಕ್ಷರುಗಳಾದ ನಾರಾಯಣ ಸಾಲ್ಯಾನ್, ಗಂಗಾಧರ ಕಲ್ಲಾಡಿ ಮತ್ತು ಬಾಬು ಕೋಟ್ಯಾನ್ ಹಾಗೂ ಬಾಬು ಅಮೀನ್, ಸುಂದರ್ ಐಲ್, ಶೇಖರ ಸುವರ್ಣ, ಕೃಷ್ಣ ಸಾಲ್ಯಾನ್, ತಿಮ್ಮಪ್ಪ ಬಂಗೇರ, ಮೋತಿಲಾಲ್ ಬಂಗೇರ, ಕಾರ್ಯದರ್ಶಿ ಪದ್ಮನಾಭ ಸುವರ್ಣ, ಗಣೇಶ್ ಉಚ್ಚಿಲ್, ಚಂದ್ರಶೇಖರ ಸಾಲ್ಯಾನ್, ಅಶೋಕ್ ಸುವರ್ಣ, ರಾಜೇಂದ್ರ ಸುವರ್ಣ, ವಿಠಲ ಬಂಗೇರ, ಕೋಶಾಧಿಕಾರಿ ರಾಮಚಂದ್ರ ಎನ್ ಕೋಟ್ಯಾನ್ ಮತ್ತು ದಿವ್ಯಾ ಕೋಟ್ಯಾನ್ ದಂಪತಿಯನ್ನು ಸನ್ಮಾನಿಸಲಾಯಿತು, ಎರಡನೇ ಬಾರಿ ಪಶ್ಚಿಮ ವಲಯದ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಸುಧಾಕರ ಉಚ್ಚಿಲ್ ಮತ್ತು ಸುಜಾತ್ ಉಚ್ಚಿಲ್ ದಂಪತಿಯನ್ನು ರೋಹಿದಾಸ ಬಂಗೇರ ಹಾಗೂ ಸಮಾಜದ ಟ್ರಷ್ಟಿಗಳು ಮತ್ತು ಮಾಜಿ ಅಧ್ಯಕ್ಷರುಗಳು ಸನ್ಮಾನಿಸಿದರು.

pooje

ನೂತನ ವಧೂವರರುಗಳಾದ ಶಿವಕುಮಾರ ಮತ್ತು ಪದ್ಮಾವತಿ, ರಾಜೇಶ್ ಕರ್ಕೇರ ಮತ್ತು ಹರ್ಷಿತ, ಐಯ್ಯಪ್ಪನ್ ಮತ್ತು ಶಶಿಕಲ ಇವರನ್ನು ಚಂದ್ರಶೇಖರ ಕೆ.ಬಿ. ದಂಪತಿ, ಚಂದ್ರಶೇಖರ ಬೆಳ್ಚಡ ಮತ್ತು ದಿವಿಜ ಚಂದ್ರಶೇಖರ್ ಸನ್ಮಾನಿಸಿದರು.

ಪೂಜೆಯ ನಂತರ ಪ್ರಸಾದ ವಿತರಣೆ ಹಾಗೂ ಅನ್ನ ಪ್ರಸಾದವನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ಈಶ್ವರ ಎಂ. ಐಲ್ ನಿರ್ವಹಿಸಿ ಧನ್ಯವಾದವಿತ್ತರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English