ಮಡಿಕೇರಿ : ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಇರುವ ಭಯವನ್ನ ಮನಸಿನಿಂದ ಹೋಗಲಾಡಿಸಬೇಕು. ಭಯ ನಿಮ್ಮಲ್ಲಿದ್ದರೆ ಪರೀಕ್ಷೆ ಬರೆಯಲು ಕ?ವಾಗುತ್ತದೆ ಮತ್ತು ಓದಿದ ಪಾಠಗಳು ಮರೆತು ಹೋಗುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ತಿಳಿಸಿದರು.
ಕೊಡಗು ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾಗಳ ಕಚೇರಿ ಮಡಿಕೇರಿ ತಾಲೂಕು ಮತ್ತು ಕೊಡಗು ವಿಕಸನ ಇವರ ಸಂಯುಕ್ತಾಶ್ರಯದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳೊಂದಿಗೆ ನಗರದ ಸಂತ ಜೋಸೆಫರ ಶಾಲೆಯಲ್ಲಿ ಶನಿವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿ ಮಾತನಾಡಿದರು.
ಪರೀಕ್ಷೆ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಈ ನಿಟ್ಟಿನಲ್ಲಿ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಸಹ ನಡೆಸಲಾಗಿತ್ತು. ಉತ್ತಮ ರೀತಿಯಲ್ಲಿ ಪರೀಕ್ಷೆ ಎದುರಿಸಿ. ಪರೀಕ್ಷೆ ಬಗ್ಗೆ ಇರುವ ಭಯವನ್ನ ಮನಸಿನಿಂದ ಹೋಗಲಾಡಿಸಬೇಕು. ಭಯ ನಿಮ್ಮಲ್ಲಿದ್ದರೆ ಪರೀಕ್ಷೆ ಬರೆಯಲು ಕ?ವಾಗುತ್ತದೆ ಮತ್ತು ಓದಿದ ಪಾಠಗಳು ಮರೆತು ಹೋಗುವ ಸಾಧ್ಯತೆಗಳಿದೆ ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆ ಎಂಬುದು ಎಂದಿಗೂ ಜೀವನದ ಕೊನೆಯ ಪರೀಕ್ಷೆಯಲ್ಲ. ಶಿಕ್ಷಣ ಸಚಿವನಾಗಿದ್ದರೂ ಸಹ ನಾನೂ ಪ್ರತಿದಿನ ಪರೀಕ್ಷೆಗಳನ್ನು ಎದುರಿಸುತ್ತಿದ್ದೇನೆ. ಜೀವನ ದೊಡ್ಡದು. ಬದುಕಿನಲ್ಲಿ ಇನ್ನು ಮುಂದೆಯೂ ನೂರರು ಪರೀಕ್ಷೆಗಳಿರುತ್ತದೆ ಎಂದರು. ಪರೀಕ್ಷೆ ಎದುರಿಸಲು ನಿಮ್ಮ ಮನಸ್ಥಿಯನ್ನು ಗಟ್ಟಿಗೊಳಿಸಿಕೊಳ್ಳಿ. “ನಾನಲ್ಲದೆ ಈ ಪ್ರಶ್ನೆಗೆ ಉತ್ತರ ಯಾರು ಬರೆಯುತ್ತಾರೆ” ಎಂಬ ಆತ್ಮವಿಶ್ವಾಸದ ಸಾಲುಗಳು ನಿಮ್ಮ ಮನಸಿನಲ್ಲಿರಲಿ.
ಇನ್ನು ಉಳಿದಿರುವ ದಿನಗಳನ್ನು ಓದು ಮತ್ತು ವಿಶ್ರಾಂತಿಗಾಗಿ ಮಾತ್ರವೇ ಮೀಸಲಿರಿಸಿ. ಪರೀಕ್ಷಾ ಹಾಲ್ ಆಟದ ಮೈದಾನ ಎಂಬ ಭಾವನೆ ವಿದ್ಯಾರ್ಥಿಗಳಾದ ನಿಮ್ಮ ಮನದಲ್ಲಿರಬೇಕು ಎಂದರು.
ಪರೀಕ್ಷೆಗೆ ಕೆಲವೇ ದಿನಗಳಿರುವುದರಿಂದ ಹೊರಗಿನ ಆಹಾರ ಪದಾರ್ಥಗಳನ್ನು ತ್ಯಜಿಸಿ, ಮನೆಯಲ್ಲಿಯೇ ತಯಾರಿಸುವ ಆಹಾರ ಸೇವಿಸಿ. ಈ ಸಂಧರ್ಭಗಳಲ್ಲಿ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಪ್ರಶ್ನೆ ಪತ್ರಿಕೆಯನ್ನು ನಿಮಗೆ ನಿಮಗೆ ನೀಡಿದ ನಂತರ ಅದನ್ನು ಪೂರ್ಣವಾಗಿ ಓದಿ. ನಂತರ ಬಹಳ ಸುಲಭದ ಪ್ರಶ್ನೆಗೆ ಮೊದಲು ಉತ್ತರ ಬರೆಯಿರಿ. ಮೊದಲನೇ ಪ್ರಶ್ನೆಗೆ ಉತ್ತರ ಬರೆಯಬೇಕೆಂದು ಯಾವುದೇ ನಿಯಮವಿಲ್ಲ. ಹಾಗಾಗಿ ಸುಲಭದ ಪ್ರಶ್ನೆಗಳಿಗೆ ಮೊದಲು ಉತ್ತರ ಬರೆಯುತ್ತಾ ಹೋಗಿ. ಅತ್ಯಂತ ಕ?ದ ಪ್ರಶ್ನೆಗಳಿಗೆ ಕೊನೆಯಲ್ಲಿ ಉತ್ತರ ಬರೆಯಿರಿ ಎಂದರು.
ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಮೊದಲ ಬಾರಿಗೆ ಮಕ್ಕಳ ಮನದಲ್ಲಿ ಬರಬಹುದಾದ ಸುಮಾರು ೨೫ ರಿಂದ ೩೦ ಪ್ರಶ್ನೆಗಳನ್ನು ಆಲೋಚಿಸಿ ಯುಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ನಿಮ್ಮ ಸೇಹಿತರೊಂದಿಗೆ ಕುಳಿತು ಆ ವೀಡಿಯೋ ವೀಕ್ಷಿಸಿ ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕೋರಿದರು. ಇದಕ್ಕೆ ಉತ್ತರಿಸಿದ ಸಚಿವರು ಈಗಾಗಲೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು ಪಾಸ್ ಹೊಂದಿರುವ ವಿದ್ಯಾರ್ಥಿಗಳಿಗೆ ಬೇರೆ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳಿದ್ದರೆ ಆ ಮಾರ್ಗದಲ್ಲಿ ಬಸ್ ಸಂಚಾರಕ್ಕೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಂಚರಿಸಲು ಅವಕಾಶ ನೀಡುವಂತೆ ತಿಳಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂತಜೋಸೆಫರ ಶಾಲೆಯ ಸಿಸ್ಟರ್ ಅಂಥೋಣಿಯಮ್ಮ, ಉಪ ವಿಭಾಗಾಧಿಕಾರಿಗಳಾದ ಜವರೇಗೌಡ, ಡಿಡಿಪಿಐ ಮಚ್ಚಾಡೋ, ಕೊಡಗು ವಿಕಸನ ಸಂಸ್ಥೆಯ ಸತ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಾಯತ್ರಿ, ಡಯಟ್ ಪ್ರಾಂಶುಪಾಲರಾದ ಶ್ರೀಧರ್ ಸೇರಿದಂತೆ ಇತರರು ಹಾಜರಿದ್ದರು.
Click this button or press Ctrl+G to toggle between Kannada and English