ಉಪ್ಪಿನಂಗಡಿ : ಬೈಕ್ ಕಳವು ಪ್ರಕರಣ; ಆರೋಪಿ ಬಂಧನ

10:57 AM, Tuesday, March 3rd, 2020
Share
1 Star2 Stars3 Stars4 Stars5 Stars
(No Ratings Yet)
Loading...

uppinangady

ಉಪ್ಪಿನಂಗಡಿ : ಬೈಕ್ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದು, ಆತನಿಂದ ಕಳವು ಗೈಯಲಾದ ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಕೌಕ್ರಾಡಿ ಗ್ರಾಮದ ಮೂಡಬೈಲು ಬರಮೇಲು ಮನೆ ನಿವಾಸಿ ವಿನಯ (25)ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಕಲ್ಲೇರಿ ಪೇಟೆಯಲ್ಲಿ ಸತೀಶ್ ಗೌಡ ಎಂಬವರು ಫೆ.28ರಂದು ತನ್ನ ಬೈಕ್ ಅನ್ನು ನಿಲ್ಲಿಸಿ ಮಂಗಳೂರಿಗೆ ತೆರಳಿದ್ದು, ಫೆ.29ರಂದು ಸಂಜೆ ಬಂದು ನೋಡಿದಾಗ ಬೈಕ್ ಕಳವಾಗಿತ್ತು. ಈ ಬಗ್ಗೆ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಆರೋಪಿಯ ಸಹಿತ ಕಳವುಗೈಯಲಾದ ಬೈಕ್ ಅನ್ನು 34ನೇ ನೆಕ್ಕಿಲಾಡಿ ಜಂಕ್ಷನ್‍ನಲ್ಲಿ ವಶಕ್ಕೆ ಪಡೆದುಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English