ಮಂಗಳೂರು : ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ದ.ಕ ಜಿಲ್ಲಾ ಶಾಖೆ ಮತ್ತು ಮಂಗಳೂರು ವತಿಯಿಂದ 05 ದಿನಗಳ ಯುವ ರೆಡ್‌ಕ್ರಾಸ್ ಪುನಶ್ಚೇತನ ಮತ್ತು ನಾಯಕತ್ವ ಶಿಬಿರವನ್ನು ದಿನಾಂಕ 29.02.2020 ರಂದು ಡಾ. ಶಿವರಾಮ ಕಾರಂತ ಪಿಲಿಕುಲ ನಿಸರ್ಗಧಾಮ, ವಾಮಂಜೂರು, ಮಂಗಳೂರು ಇಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಾಸ್ತವಿಕ ಮತ್ತು ಸ್ವಾಗತ ಭಾಷಣವನ್ನು ಶ್ರೀ. ಸಚೇತ್ ಸುವರ್ಣ, ಜಿಲ್ಲಾ ಯುವ ರೆಡ್‌ಕ್ರಾಸ್ ಕೋ-ಆಡಿನೇಟರ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಇವರು ನಿರ್ವಹಿಸಿದರು. ಅಧ್ಯಕ್ಷತೆಯನ್ನು ರೆಡ್‌ಕ್ರಾಸ್ ಸಂಸ್ಥೆಯ ಚೇರ್‌ಮೆನ್ ಶ್ರೀ. ಸಿಎ. ಶಾಂತರಾಮ ಶೆಟ್ಟಿ ವಹಿಸಿಕೊಂಡಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಮೇಘನಾ ಆರ್ ಕೆ.ಎ.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು, ಡಾ. ಶಿವರಾಮ ಕಾರಂತ ಪಿಲಿಕುಲ ನಿಸರ್ಗಧಾಮ ಇವರು ಜ್ಯೋತಿ ಬೆಳಗುವುದರೊಂದಿಗೆ ಉದ್ಘಾಟಿಸಿ, ಉದ್ಘಾಟನಾ ಭಾಷಣ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಐರಿನ್ ಆರತಿ, ಮಾನವೀಯ ವೃತ್ತಿಪರ ಐಸಿಆರ್ಸಿ, ಐಎಫ್ಆರ್ಸಿ, ಐಆರ್ಸಿಎಸ್ ಮತ್ತು ಡಬ್ಲ್ಯೂಹೆಚ್ಒ, ಡಾ. ಕೆ.ವಿ ರಾವ್, ನಿರ್ದೇಶಕರು, ಪ್ರಾದೇಶಿಕ ವಿಜ್ಞಾನ ಕೇಂದ್ರ, ಡಾ. ಶಿವರಾಮ ಕಾರಂತ ಪಿಲಿಕುಲ ನಿಸರ್ಗಧಾಮ, ಶ್ರೀ. ಎಸ್.ಎ ಪ್ರಭಾಕರ ಶರ್ಮ.,ಕೆ.ಎ.ಎಸ್(ನಿ) ಗೌ. ಕಾರ್ಯದರ್ಶಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಶ್ರೀ. ಆರ್ಚಿಬಾಲ್ಡ್ ಹೆರ್ಮನ್ ಜಾರ್ಜ್ ಮೆನೇಜಸ್ ಗೌ. ಖಚಾಂಚಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮತ್ತು ಶ್ರೀ. ಆಶೋಕ್ ಕುಮಾರ್ ಶೆಟ್ಟಿ, ಮಾಜಿ ಪ್ರಧಾನ ಕಾರ್ಯದರ್ಶಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ಕಾಲೇಜುಗಳಿಂದ ಒಟ್ಟು 110 ವಿದ್ಯಾರ್ಥಿ / ವಿದ್ಯಾರ್ಥಿನಿಯರು ಭಾಗವಹಿಸಿದ್ದು ವಿಶೇಷ.
ಡಾ. ನಾಗರತ್ನ, ಎನ್.ಎಸ್.ಎಸ್ ನೋಡಲ್ ಆಫೀಸರ್, ಮಂಗಳೂರು ವಿಶ್ವವಿದ್ಯಾನಿಲಯ ಇವರು ವಂದನಾರ್ಪಣೆ ನೆರವೇರಿಸಿದರು. ಮಂಗಳೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿನಿಯಾದ ಕುಮಾರಿ. ಶ್ರುತಿ ಕಾರ್ಯಕ್ರಮ ನಿರೂಪಣೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಪ್ರವೀಣ್‌ಕುಮಾರ್ ರೆಡ್‌ಕ್ರಾಸ್ ಕೋ-ಆಡಿನೇಟರ್ ಇವರು ಸಹಕರಿಸಿದರು.
Click this button or press Ctrl+G to toggle between Kannada and English