ಕೆ.ಎ. ನೆಟ್ಟಕಲಪ್ಪ ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ಎಸ್ .ಜಗದೀಶ್ಚಂದ್ರ ಅಂಚನ್

9:33 PM, Wednesday, March 4th, 2020
Share
1 Star2 Stars3 Stars4 Stars5 Stars
(No Ratings Yet)
Loading...

jagadishchandraಮಂಗಳೂರು : ಸುಮಾರು 30 ವರ್ಷಗಳಿಂದ ಕ್ರೀಡಾ ಲೇಖನಗಳ ಮೂಲಕ ರಾಜ್ಯ , ಅಂತರ್ ರಾಜ್ಯ ಮಟ್ಟದ ದಿನ ಪತ್ರಿಕೆಗಳಲ್ಲಿ ಗುರುತಿಸಿಕೊಂಡಿರುವ ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್ ಪೇಟೆ ಇವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ 2018ನೇ ಸಾಲಿನ ಪ್ರತಿಷ್ಠಿತ ಕೆ.ಎ. ನೆಟ್ಟಕಲಪ್ಪ ರಾಜ್ಯ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ .

ತನ್ನ 18ನೇ ವರ್ಷದಲ್ಲಿ ಆಗಿನ ” ಮುಂಗಾರು ” ದಿನ ಪತ್ರಿಕೆಯಲ್ಲಿ ಕ್ರೀಡಾ ಲೇಖನಗಳನ್ನು ಬರೆಯುವ ಮೂಲಕ ಕ್ರೀಡಾ ಬರವಣಿಗೆಯ ಹವ್ಯಾಸವನ್ನು ಆರಂಭಿಸಿದ ಇವರು 30 ವರ್ಷಗಳಲ್ಲಿ ಬರೆದ ಸುಮಾರು 4000ಕ್ಕೂ ಮಿಕ್ಕಿ ಕ್ರೀಡಾಲೇಖನಗಳು ರಾಜ್ಯ , ಅಂತರ್ ರಾಜ್ಯ ಮಟ್ಟದ ವಿವಿಧ ದಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ . ಮುಂಗಾರು ; ಉದಯವಾಣಿ ; ಕರಾವಳಿ ಅಲೆ ; ಕನ್ನಡ ಜನಾಂತರಂಗ ; ವಿಜಯಕರ್ನಾಟಕ; ಹೊಸದಿಂಗತ ; ಸಂಯುಕ್ತ ಕರ್ನಾಟಕ ; ಮಂಗಳೂರು ಮಿತ್ರ; ಕರ್ನಾಟಕ ಮಲ್ಲ , ವಾರ್ತಾಭಾರತಿ ; ವಿಜಯ ವಾಣಿ ಕನ್ನಡ ದಿನಪತ್ರಿಕೆಗಳು ; ಕ್ರೀಡಾ ಪತ್ರಿಕೆಗಳಾದ ರಾಜು ಪತ್ರಿಕೆ ; ಕ್ರಿಕೆಟ್ ; ಕ್ರೀಡಾ ಸಮಯ ಹಾಗೂ ಮಂಗಳ , ತರಂಗ ವಾರಪತ್ರಿಕೆಗಳಲ್ಲೂ ಇವರ ಕ್ರೀಡಾ ಲೇಖನ ಪ್ರಕಟಗೊಂಡಿದೆ . ಇವರು “ವಿಶ್ವಕಪ್ ಕ್ರಿಕೆಟ್ ಸಮರ ” ಎಂಬ ಕ್ರಿಕೆಟ್ ಪುಸ್ತಕವನ್ನು ಬರೆದು ಪ್ರಕಟಿಸಿದ್ದಾರೆ .

ಪ್ರಶಸ್ತಿಗಳು : 2010ರಲ್ಲಿ ಮುಂಡಾಲ ಮಹಾಸಭಾದಿಂದ ‘ ಸಾಧಕ ‘ ಪ್ರಶಸ್ತಿ ; 2013ರ ಸೌಹಾರ್ದ ಸಂಗಮದಲ್ಲಿ ‘ ಮೀಡಿಯಾ ಅವಾರ್ಡ್ ‘ ; 2014ರಲ್ಲಿ ಅಖಿಲ ಭಾರತ ವಚನ ಸಾಹಿತ್ಯ ಸಮ್ಮೇಳನದಲ್ಲಿ ‘ ಸಮಾಜ ರತ್ನ ‘ ರಾಜ್ಯ ಪ್ರಶಸ್ತಿ ; ಕ್ರೀಡಾ ಬರವಣಿಗೆಗಾಗಿ 2016ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ; ಲಯನ್ಸ್ ರಾಜ್ಯೋತ್ಸವ ಪ್ರಶಸ್ತಿ ; 2017ರಲ್ಲಿ ಕರ್ನಾಟಕ ಜಾನಪದ ಪರಿಷತ್ ಪ್ರಶಸ್ತಿ; 2018ರಲ್ಲಿ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ; 2019ರಲ್ಲಿ ಜಾನಪದ ಲೋಕ ರಾಜ್ಯ ಪ್ರಶಸ್ತಿ ; 2019ರಲ್ಲಿ ನಮ್ಮ ಕುಡ್ಲ ಸಾಧಕ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಹಾಗೂ ಸನ್ಮಾನ ಪುರಸ್ಕಾರವನ್ನು ಪಡೆದಿದ್ದಾರೆ .

ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆಯುವ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಎಸ್ ಜಗದೀಶ್ಚಂದ್ರ ಅಂಚನ್ ಅವರು ನೆಟ್ಟಕಲಪ್ಪ ರಾಜ್ಯ ಪ್ರಶಸ್ತಿಯನ್ನು ಸ್ವೀಕರಿಸಲಿರುವರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English