ಕರ್ನಾಟಕ ಬಜೆಟ್ 2020 : ಇಂದು ರಾಜ್ಯ ಬಜೆಟ್ ಮಂಡನೆ

10:57 AM, Thursday, March 5th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

budjet

ಬೆಂಗಳೂರು : ಇದುವರೆಗೂ ಆರು ಬಜೆಟ್ಗಳನ್ನು ಮಂಡನೆ ಮಾಡಿರುವ ಬಿ.ಎಸ್.ಯಡಿಯೂರಪ್ಪ ಅವರು ಇಂದು ಏಳನೇ ಆಯವ್ಯಯ ಮಂಡಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಿಎಸ್ವೈ ಸದನದಲ್ಲಿ ಬಜೆಟ್ ಪ್ರತಿ ಓದಲಿದ್ದಾರೆ.

ಈ ಬಾರಿ ಬಜೆಟ್ ಗಾತ್ರ 2.50 ಲಕ್ಷ ಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ. ಆರ್ಥಿಕ ಸಂಕಷ್ಟ, ರಾಜ್ಯ ಸರ್ಕಾರ ಮೇಲಿನ ಸಾಲ, ಕೇಂದ್ರದ ಜಿಎಸ್ಟಿ ಪರಿಹಾರ ಸಕಾಲಕ್ಕೆ ಬಾರದಿರುವುದು.. ಈ ಎಲ್ಲಾ ಸಂಕಷ್ಟಗಳ ನಡುವೆ ಬಿಎಸ್ವೈ ಬಹುನಿರೀಕ್ಷೆಯ ಬಜೆಟ್ ಮಂಡಿಸಲಿದ್ದಾರೆ.

ಬಿಎಸ್ವೈ ಅವರ ಹಿಂದಿನ ಆರು ಬಜೆಟ್ಗಳನ್ನು ಗಮನಿಸಿದಾಗ ಅವರ ಪ್ರತಿ ಬಜೆಟ್ನಲ್ಲೂ ವಿಶಿಷ್ಟ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದು ಕೃಷಿಗಾಗಿ ಪ್ರತ್ಯೇಕ ಬಜೆಟ್ ಹೊರಡಿಸುವ ಮೂಲಕ ತಾವು ಅಪ್ಪಟ ರೈನ ನಾಯಕ ಎಂದು ತೋರಿಸಿಕೊಟ್ಟಿದ್ದರು. ಅದಾದ ಬಳಿಕ ಹೈಸ್ಕೂಲ್ ಮಕ್ಕಳಿಗೆ ಉಚಿತ ಸೈಕಲ್ ವಿತರಣೆ, ಭಾಗ್ಯಲಕ್ಷ್ಮೀ ಬಾಂಡ್, ಸಂಧ್ಯಾ ಸುರಕ್ಷಾ ಯೋಜನೆ ಸೇರಿದಂತೆ ಮಠಗಳಿಗೆ ಅನುದಾನವನ್ನು ಬಜೆಟ್ನಲ್ಲಿ ಮೊದಲ ಬಾರಿಗೆ ಮೀಸಲಿಟ್ಟ ಹೆಗ್ಗಳಿಕೆ ಬಿಎಸ್ವೈ ಅವರಿಗೆ ಸಲ್ಲುತ್ತದೆ. ಈ ಹಿಂದಿನ ಬಜೆಟ್ಗಳಂತೆ ಈ ಬಾರಿಯೂ ಬಿಎಸ್ವೈ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಬಜೆಟ್ ನೀಡುತ್ತಾರೆ ಎಂದು ಹಲವರು ನಿರೀಕ್ಷಿಸುತ್ತಿರಬಹುದು. ಆದರೆ, ರಾಜ್ಯದ ಇಂದಿನ ಆರ್ಥಿಕ ಸ್ಥಿತಿಗತಿಗಳನ್ನು ನೋಡಿ ಹೇಳುವುದಾದರೆ ಈ ಬಾರಿಯ ಬಜೆಟ್ ವೆಚ್ಚ ಕಡಿತದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲಿದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.

ಬಿ.ಎಸ್.ಯಡಿಯೂರಪ್ಪ ಅವರು ಕಳೆದ ವರ್ಷ ಜುಲೈ 26ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಇದೇ ಮೊದಲನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ಬಿಎಸ್ವೈ ಸಿಎಂ ಆಗುವುದಕ್ಕೂ ಮುನ್ನ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ್ದ ಬಜೆಟ್ಅನ್ನೇ ಮುಂದುವರೆಸಿದ್ದರು. ಅದಾಗಲೇ 2019-20ರ ಒಂದನೇ ತ್ರೈಮಾಸಿಕ ಪೂರ್ಣಗೊಂಡಿದ್ದರಿಂದ ಹೊಸ ಬಜೆಟ್ ಮಂಡನೆ ಸಾಧ್ಯತೆ ಇರಲಿಲ್ಲ. ಆರ್ಥಿಕ ಸಂಕಟ, ಪ್ರವಾಹ, ಹೆಚ್ಚಾದ ಸಾಲ ಪ್ರಮಾಣಗಳ ನಡುವೆ ಇಂದು ಸಿಎಂ ಬಿಎಸ್ವೈ ಮಂಡಿಸುವ ಬಜೆಟ್ ಮೇಲೆ ಭಾರೀ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.

ಫಸಲ್ ಬಿಮಾ ಯೋಜನೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಆದ್ಯತೆ, ರೈತರ ಆದಾಯ ದುಪ್ಪಟ್ಟು ಮಾಡುವ ಪ್ರಧಾನಿ ಆಶಯಕ್ಕೆ ತಕ್ಕಂತೆ ಕಾರ್ಯಕ್ರಮಗಳು, ಪ್ರವಾಹಪೀಡಿತ ಜಿಲ್ಲೆಗಳಲ್ಲಿನ ಕೃಷಿ ಭೂಮಿಯನ್ನು ಸುಸ್ಥಿತಿಗೆ ತರಲು ಯೋಜನೆ, ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಇಳುವರಿಯಲ್ಲಿ ಆಗುವ ಕುಸಿತ, ನಷ್ಟ ತಪ್ಪಿಸಲು ಹೊಸ ಚಿಂತನೆ, ರೈತರ ಹೊಲಗಳಿಗೆ ಕೃಷಿ ಇಲಾಖೆ ಅಧಿಕಾರಿಗಳನ್ನು ಕಳಿಸಿ, ಮಾರ್ಗದರ್ಶನ ನೀಡುವ ವ್ಯವಸ್ಥೆ, ಕೃಷಿ ಭಾಗ್ಯ ಯೋಜನೆಯಲ್ಲಿನ ದೋಷಗಳನ್ನು ಸರಿಪಡಿಸಲು ಬಿಎಸ್ವೈ ತಮ್ಮ ಬಜೆಟ್ನಲ್ಲಿ ಆದ್ಯತೆ ನೀಡುವ ಸಾಧ್ಯತೆ ಇದೆ. ಇದರ ಜೊತೆಗೆ ಹೊಸದಾಗಿ ಮಕ್ಕಳ ಬಜೆಟ್ ಮಂಡಿಸುವ ಸಾಧ್ಯತೆ ಇದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English