ಮಂಗಳೂರು : ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ದ.ಕ ಜಿಲ್ಲಾ ಶಾಖೆ ಮತ್ತು ಮಂಗಳೂರು ವತಿಯಿಂದ ದಿನಾಂಕ 20.02.2020 ರಿಂದ 04.03.2020 ರವರೆಗೆ 5 ದಿನಗಳ ಜಿಲ್ಲಾ ಮಟ್ಟದ ಯುವ ರೆಡ್‌ಕ್ರಾಸ್ ಪುನಶ್ಚೇತನ ಮತ್ತು ನಾಯಕತ್ವ ಶಿಬಿರವನ್ನು ಡಾ. ಶಿವರಾಮ ಕಾರಂತ ಪಿಲಿಕುಲ ನಿಸರ್ಗಧಾಮದಲ್ಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮದ ಸಮಾರೋಪ ಸಮಾರಂಭವು ದಿನಾಂಕ 04.03.2020 ರಂದು ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಲಾಗಿತ್ತು.
ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ. ಸಿಎ. ಶಾಂತರಾಮ ಶೆಟ್ಟಿ, ಚೇರ್‌ಮೆನ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ದ.ಕ ಜಿಲ್ಲಾ ಶಾಖೆ ಇವರು ವಹಿಸಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಶತಮಾನೋತ್ಸವ ಸಂಭ್ರಮದ ಆಚರಣೆಯ ಈ ವರ್ಷದಲ್ಲಿ ರಾಷ್ಟ್ರಮಟ್ಟದ ಯುವ ರೆಡ್‌ಕ್ರಾಸ್ ಶಿಬಿರ ನಡೆಸಲು ತೀರ್ಮಾನಿಸಲಾಗಿದೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಡಾ. ಕೆ.ವಿ ರಾವ್, ನಿರ್ದೇಶಕರು, ಪ್ರಾದೇಶಿಕ ವಿಜ್ಞಾನ ಕೇಂದ್ರ, ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ, ಶ್ರೀ. ಎಸ್.ಎ ಪ್ರಭಾಕರ ಶರ್ಮ.,ಕೆ.ಎ.ಎಸ್(ನಿ) ಗೌ. ಕಾರ್ಯದರ್ಶಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಶ್ರೀ. ಬಿ. ನಿತ್ಯಾನಂದ ಶೆಟ್ಟಿ, ವೈಸ್-ಚೇರ್‌ಮೆನ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಶ್ರೀ. ಯತೀಶ್ ಬೈಕಂಪಾಡಿ, ಆಡಳಿತ ಮಂಡಳಿ ಸದಸ್ಯರು, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಡಾ.ಗಣಪತಿ ಗೌಡ, ನೋಡಲ್ ಅಫೀಸರ್, ಯುವ ರೆಡ್‌ಕ್ರಾಸ್, ಮಂಗಳೂರು ವಿಶ್ವವಿದ್ಯಾನಿಲಯ, ಶ್ರೀ. ಸಚೇತ್ ಸುವರ್ಣ, ಜಿಲ್ಲಾ ಯುವ ರೆಡ್‌ಕ್ರಾಸ್ ಕೋ-ಆಡಿನೇಟರ್, ಶ್ರೀಮತಿ ಶ್ರೀಲತಾ, ಸಹಾಯಕ ಆಡಳಿತ ಅಧಿಕಾರಿ ಸಹ್ಯಾದ್ರಿ ಕಾಲೇಜು ಮಂಗಳೂರು, ಶ್ರೀಮತಿ ಮಿಲನ್ ಮಂದಣ್ಣ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English