ಯೆಸ್ ಬ್ಯಾಂಕ್ ಹೂಡಿಕೆದಾರರ ಹಣ ಸುರಕ್ಷಿತವಾಗಿದೆ : ಆತಂಕ ಬೇಡ; ನಿರ್ಮಲಾ ಸೀತಾರಾಮನ್ ಭರವಸೆ

4:40 PM, Friday, March 6th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

nirmala-seetharaman

ನವದೆಹಲಿ : ಸಂಕಷ್ಟಕ್ಕೆ ಸಿಲುಕಿರುವ ಯೆಸ್ ಬ್ಯಾಂಕ್ ಹೂಡಿಕೆದಾರರ ಹಣ ಸುರಕ್ಷಿತವಾಗಿ. ಇದರಿಂದ ಯಾವ ಹೂಡಿಕೆದಾರರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ಈ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸುವುದಾಗಿ ಆರ್ಬಿಐ ಗವರ್ನರ್ ನನಗೆ ಹೇಳಿದ್ದಾರೆ. ಆರ್ಬಿಐ ಮತ್ತು ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ. ಆರ್ಬಿಐ ಜೊತೆಗೆ ನಾನು ನಿರಂತರ ಸಂಪರ್ಕದಲ್ಲಿದ್ದು, ಮುಂದಿನ ಕೆಲವು ತಿಂಗಳುಗಳ ಕಾಲ ನಾನೇ ಖುದ್ದಾಗಿ ಆರ್ಬಿಐ ಜೊತೆಗೆ ಪರಿಸ್ಥಿತಿಯನ್ನು ನಿಭಾಯಿಸುತ್ತೇನೆ. ಗ್ರಾಹಕರು ಭಯಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಆರ್ಥಿಕ ಸಂಕಷ್ಟಕ್ಕೆ ತುತ್ತಾದ ಯೆಸ್ ಬ್ಯಾಂಕ್ ವಹಿವಾಟಿನ ಮೇಲೆ ಆರ್ಬಿಐ ಗುರುವಾರ ರಾತ್ರಿ ನಿಷೇಧ ಹೇರಿತ್ತು. ಮತ್ತು ಹೂಡಿಕೆದಾರರು ತಿಂಗಳಿಗೆ 50 ಸಾವಿರ ಹಣವನ್ನು ಮಾತ್ರ ಹಿಂಪಡೆಯಬಹುದು ಎಂದು ಮಿತಿ ಹೇರಿ, ಬ್ಯಾಂಕ್ ಆಡಳಿತ ಮಂಡಳಿಯನ್ನು ಸೂಪರ್ಸೀಡ್ ಮಾಡಿದ ಮರುದಿನ ವಿತ್ತ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಬ್ಯಾಂಕ್ನ ಎಲ್ಲ ವಹಿವಾಟು ಸದ್ಯಕ್ಕೆ ನಿಷ್ಕ್ರಿಯಗೊಂಡಿವೆ. ಯಾವುದೇ ಹೊಸ ಸಾಲ, ಗ್ರಾಂಟ್, ಹೂಡಿಕೆ ಸೇರಿ ಯಾವುದೇ ವಹಿವಾಟನ್ನು ನಡೆಸುವಂತಿಲ್ಲ. ಮುಂದಿನ ತಿಂಗಳವರೆಗೆ ಆರ್ಬಿಐ ನೇಮಿಸಿರುವ ಎಸ್ಬಿಐ ಮಾಜಿ ಹಣಕಾಸು ಮುಖ್ಯ ಅಧಿಕಾರಿ ಪ್ರಶಾಂತ್ ಕುಮಾರ್ ಅವರ ನೇತೃತ್ವದಲ್ಲಿ ಮುಂದುವರೆಯಲಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English