ವಿಶ್ವಾಸದ ಸ್ವಾವಲಂಬಿ ಬದುಕಿನೊಂದಿಗೆ ಸಾಧಕರಾಗೋಣ : ಕಲ್ಕೂರ

5:37 PM, Friday, March 6th, 2020
Share
1 Star2 Stars3 Stars4 Stars5 Stars
(No Ratings Yet)
Loading...

kalkura

ಮಂಗಳೂರು : ಬದುಕಿನ ಎಲ್ಲ ನೆಲೆಯಲ್ಲೂ ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ಧಾರ್ಮಿಕವಾಗಿ ಸರ್ವರೀತಿಯಲ್ಲೂ ಸ್ವಾತಂತ್ರ್ಯ ಹೊಂದಿರುವ ವಿಶಿಷ್ಠವಾದ ದೇಶ ನಮ್ಮದು. ಆದುದರಿಂದ ವಿಶ್ವಾಸದಿಂದ ಸ್ವಾವಲಂಬಿ ಬದುಕನ್ನು ನಡೆಸುತ್ತಾಯಾವ ಸ್ತರದಲ್ಲೂ ಇಲ್ಲಿ ಓರ್ವ ಮಹಿಳೆಯೂ ಸಾಧಕಿಯಾಗಲು ಸಾಧ್ಯವಿದೆ ಎಂದು ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಹೇಳಿದರು.

ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಲ್ಮಠ ಇದರ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ಜ್ಞಾನ ಸಂಪಾದಿಸುವುದರ ಜೊತೆ ಜೊತೆಗೆ ಜೀವನಾನುಭವವನ್ನು ಮೈಗೂಡಿಸಿಕೊಂಡು ಸಮಾಜಮುಖಿ ಹಾಗೂ ರಾಷ್ಟ್ರಮುಖಿ ಸಂಕಲ್ಪದೊಂದಿಗೆ ಕೀರ್ತಿವಂತರಾಗಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇಸ್ಕಾನ್‌ ಅಕ್ಷಯಪಾತ್ರೆ ಫೌಂಡೇಶನ್, ಮಂಗಳೂರು ಇದರ ಅಧ್ಯಕ್ಷ ಶ್ರೀ ಕಾರುಣ್ಯ ಸಾಗರ್‌ ದಾಸ್‌ಅವರ ಉಪಸ್ಥಿತಿಯಲ್ಲಿ ಜರಗಿದ ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೋ. ಪಿ.ಎಸ್. ಯಡಪಡಿತ್ತಾಯ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಜಗದೀಶ ಬಾಳ ಹಾಗೂ ವಿದ್ಯಾರ್ಥಿ ಮುಖಂಡರು ಉಪಸ್ಥಿತರಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English