ಮಂಗಳೂರು : ವಿದೇಶಿ ಪ್ರವಾಸಿ ಹಡಗಿಗೆ ನವಮಂಗಳೂರು ಬಂದರು ಪ್ರವೇಶಿಸಲು ಕೊನೆಯ ಕ್ಷಣದಲ್ಲಿ ಅನುಮತಿ ನಿರಾಕರಿಸಲಾಗಿದೆ.
ಪ್ರವಾಸಿಗರನ್ನು ಹೊತ್ತ ಹಡಗು ಶನಿವಾರ ಮುಂಜಾನೆ 6 ಗಂಟೆಗೆ ಬಂದರು ಪ್ರವೇಶಿಸಬೇಕಿತ್ತು. ಆದರೆ ಹಡಗು ಕೊರೋನಾ ಪೀಡಿತ ದೇಶಗಳ ಪ್ರದೇಶಗಳಿಗೆ ಭೇಟಿ ನೀಡಿ ಬರುತ್ತಿರುವುದರಿಂದ ಸರಕಾರ ಅನುಮತಿ ನಿರಾಕರಿಸಿದೆ.
ಹಡಗಿನಲ್ಲಿರುವ ಪ್ರವಾಸಿಗರಲ್ಲಿ ಕೊರೊನಾ ಸೋಂಕು ಬಾಧಿತರು ಯಾರು ಇಲ್ಲ ಎಂದು ತಪಾಸಣೆಯಿಂದ ದೃಢಪಟ್ಟಿದೆ ಎಂದು ಹಡಗಿನ ನಿರ್ವಹಣೆ ತಂಡ ಸಮಜಾಯಿಷಿ ನೀಡಿದ್ದರೂ ಕೂಡಾ ಸರ್ಕಾರ ಅನುಮತಿ ನೀಡಿಲ್ಲ.
ಹಡಗಿನಲ್ಲಿ ಆಗಮಿಸಲಿದ್ದ ವಿದೇಶಿ ಪ್ರವಾಸಿಗರ ವೈದ್ಯಕೀಯ ತಪಾಸಣೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಎನ್ಎಂಪಿಟಿ ಆಡಳಿತ ವ್ಯವಸ್ಥೆ ಎಲ್ಲಾ ಸಿದ್ಧತೆ ನಡೆಸಿದ್ದು ಶುಕ್ರವಾರ ರಾತ್ರಿ ಹಡಗಿನ ಪ್ರಯಾಣ ರದ್ದುಕೊಂಡಿರುವ ಕುರಿತು ಅವರಿಗೆ ಮಾಹಿತಿ ಬಂದಿದೆ . ಬಂದರಿನಲ್ಲಿ ಹಡಗಿನಲ್ಲಿ ಆಗಮಿಸಲಿದ್ದು ಪ್ರವಾಸಿಗರು ಮಂಗಳೂರು ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಉದ್ದೇಶಿಸಿದ್ದರು
Click this button or press Ctrl+G to toggle between Kannada and English