ನೆರೆ ಪರಿಹಾರಕ್ಕೆ ಹೆಚ್ಚುವರಿ 5400 ಕೋಟಿ ರೂ.‌ : ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಭರವಸೆ

2:43 PM, Monday, March 9th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

sadananda-gowda

ಬೆಂಗಳೂರು : ಕರ್ನಾಟಕಕ್ಕೆ ನೆರೆ ಪರಿಹಾರಕ್ಕೆ ಹೆಚ್ಚುವರಿ 5400 ಕೋಟಿ ರೂ.‌ ನೀಡಬಹುದು ಎಂದು ಹಣಕಾಸು‌ ಆಯೋಗ ಅಭಿಪ್ರಾಯ ಪಟ್ಟಿದೆ. ಈ ಅಂಶವನ್ನು ಸಿಎಂ ನನ್ನ ಗಮನಕ್ಕೆ ತಂದಿದ್ದಾರೆ. ಸಚಿವೆ ನಿರ್ಮಲಾ‌ ಸೀತಾರಾಮನ್‌ ಜತೆ ಚರ್ಚಿಸಿ ಹಣ‌ ಬಿಡುಗಡೆ ಮಾಡುವಂತೆ ಮನವಿ ಮಾಡುವೆ ಎಂದು‌ ಕೇಂದ್ರ ಸಚಿವ ಡಿವಿ ಸದಾನಂದಗೌಡ ತಿಳಿಸಿದರು.

ವಿವಿ ಟವರ್ ನಲ್ಲಿ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು. ಮಾ.15 ರಂದು ನಂದಿನಿ‌ ಲೇಔಟ್ನ ಎಸ್ . ಜಿ ಇಂಟರ್ ನ್ಯಾಷನಲ್‌ ಪಬ್ಲಿಕ್ ಶಾಲೆಯಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ಉದ್ಯೋಗ ಮೇಳ ನಡೆಯಲಿದೆ. 500 ಯುವಜನರಿಗೆ ಉದ್ಯೋಗ ನೀಡುವ ಗುರಿಯೊಂದಿಗೆ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಹೇಳಿದರು.

ವಿಧಾನಸಭೆಯಲ್ಲಿ ಮಾಧ್ಯಮಗಳ ಮೇಲಿನ ನಿರ್ಬಂಧ ಕುರಿತು ಮಾತನಾಡಿ, ವಿಧಾನಸಭೆಯ ತೀರ್ಮಾನಗಳು‌ ಸ್ಪೀಕರ್ ಗೆ ಬಿಟ್ಟಿದ್ದು. ಆದರೆ ಪ್ರಜಾಪ್ರಭುತ್ವ ದಲ್ಲಿ ಮಾಧ್ಯಮ ಗಳನ್ನು ದೂರ‌ ಇಡುವುದು ಸರಿಯಲ್ಲ. ಕೆಲ ಮಾಧ್ಯಮಗಳು ಎಲ್ಲೆ‌ ಮೀರಿವೆ. ಹಾಗೆಂದು ಎಲ್ಲ ಮಾಧ್ಯಮ ಸರಿ ಇಲ್ಲ ಎಂದು ತೀರ್ಮಾನಿಸಬಾರದು ಎಂದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English