“ಜಯಲಕ್ಷ್ಮಿ” ಫ್ಯಾಮಿಲಿ ಫ್ಯಾಶನ್ ಸ್ಟೋರ್ ಮಂಗಳೂರಿನಲ್ಲಿ ಮಾರ್ಚ್ 12 ರಂದು ಶುಭಾರಂಭ

8:16 PM, Monday, March 9th, 2020
Share
1 Star2 Stars3 Stars4 Stars5 Stars
(No Ratings Yet)
Loading...

jayalakshmiಮಂಗಳೂರು  : ದಕ್ಷಿಣ ಭಾರತದ ನೆಚ್ಚಿನ ಫ್ಯಾಮಿಲಿ ಫ್ಯಾಶನ್ ಸ್ಟೋರ್ ಜಯಲಕ್ಷ್ಮಿ ತನ್ನ ಮೆಗಾ ಶೋ ರೂಂಅನ್ನು ಮಂಗಳೂರಿನ ಬಿಜೈನಲ್ಲಿ ಮಾರ್ಚ್ 12,2020 ರಂದು ಪ್ರಾರಂಭಿಸುತ್ತಿದೆ.

ಶಿಕ್ಷಣ ಸಂಸ್ಥೆಗಳು, ವ್ಯಾಪಾರ ಕೇಂದ್ರಗಳು ಮತ್ತು ಐಟಿ ಹಬ್‌ಗಳನ್ನು ಹೊಂದಿರುವ ಮಂಗಳೂರನ್ನು ಯುವಜನರ, ವೈವಿಧ್ಯ ಮತ್ತು ವರ್ಣಮಯ ನಗರವೆಂದು ಕರೆಯಲಾಗುತ್ತದೆ. ಮಂಗಳೂರಿನವರು ಫ್ಯಾಷನ್ ಮತ್ತು ಸ್ಟೈಲ್‌ಗೆ ಮನ್ನಣೆಕೊಡುತ್ತಾರೆ ಮತ್ತು ಯಾವಾಗಲೂ ಉತ್ತಮ ಗುಣಮಟ್ಟದ ಯಾವುದೆ ವಸ್ತುಗಳನ್ನಾದರೂ ಮೆಚ್ಚುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಇಂದು ಪ್ರೀಮಿಯಂ ಉಡುಪುಗಳು ಮತ್ತು ನವವಧುವಿನ ಉಡುಗೆತೊಡುಗೆ ಗಳ ಸಂಗ್ರಹಗಳ ಮಳಿಗೆ “ಜಯಲಕ್ಷ್ಮಿ” ತನ್ನ 5ನೇ ಶೋ ರೂಂಅನ್ನು ಈ ಐತಿಹಾಸಿಕ ನಗರ ಮಂಗಳೂರಿನ ಹೃದಯಭಾಗವಾದ ಬಿಜೈನಲ್ಲಿ ಪ್ರಾರಂಭಿಸಲು ಉತ್ಸುಕವಾಗಿದೆ.

ಒಟ್ಟು 1ಲಕ್ಷ ಚ. ಅಡಿ ವಿಸ್ತೀರ್ಣವನ್ನು ಹೊಂದಿರುವ ಹೊಸ ಮೆಗಾ ಶೋ ರೂಂ, ಕರ್ನಾಟಕದಲ್ಲೆ ಅತಿದೊಡ್ಡ ಶೋ ರೂಂ ಆಗಿ ಗುರುತಿಸಲ್ಪಪಡಲಿದೆ. 4 ಮಹಡಿಗಳ ಬೃಹತ್ ಶಾಪಿಂಗ್ ಮಾಲ್‌ನಲ್ಲಿಅತ್ಯುತ್ತಮವಾದ ಉಡುಪುಗಳು ಮತ್ತು ವಧುವಿನ ಉಡುಗೆಗಳ ಬೃಹತ್ ಸಂಗ್ರಹವಿದೆ.ವಧುವಿನ ಸೀರೆಗಳು, ಡಿಸೈನರ್ ವೇರ್, ಜಂಟ್ಸ್‌ಕಲೆಕ್ಷನ್ಸ್‌ನಿಂದ ಮಕ್ಕಳ ಉಡುಗೆಗಳವರೆಗೆ, ಅತ್ಯುತ್ತಮ ಮತ್ತು ನೂತ ಕಲೆಕ್ಷನ್ ಜಯಲಕ್ಷ್ಮಿ ಫ್ಯಾಷನ್‌ನಲ್ಲಿ ಲಭ್ಯವಿದೆ.
ಬಹುಮಹಡಿ ಕಟ್ಟಡದಲ್ಲಿ ಚೂಡಿದಾರ್, ಚೂಡಿದಾರ್ ಮೆಟೀರಿಯಲ್ಸ್‌ಗಳು, ಡ್ರೆಸ್ ಮೆಟೀರಿಯಲ್ಸ್‌ಗಳು, ಎತ್ನಿಕ್ ವೇರ್‌ಗಳು, (ನೆಲ ಮಹಡಿಯಲ್ಲಿ), ಮಕ್ಕಳ ಉಡುಗೆ ತೊಡುಗೆಗಳು, ಪಾಶ್ಚಿಮಾತ್ಯ ಉಡುಗೆ (1ನೇ ಮಹಡಿಯಲ್ಲಿ), ಪುರುಷರಉಡುಗೆ ತೊಡುಗೆಗಳು, ಬ್ಲೌಸ್ ಮೆಟೀರಿಯಲ್ಸ್, ಒಳ ಉಡುಪುಗಳು (2ನೇ ಮಹಡಿಯಲ್ಲಿ) ಲೆಹೆಂಗಾ ಮತ್ತು ಸೀರೆಗಳ ಸಂಗ್ರಹ (3ನೇ ಮಹಡಿಯಲ್ಲಿ).

ಕಾರ್ ಪಾರ್ಕಿಂಗ್‌ಗಾಗಿ ನೆಲಮಾಳಿಗೆಯಲ್ಲಿರುವ ೨ ಮಹಡಿಗಳನ್ನು ಕಾಯ್ದಿರಿಸಿದ್ದು ಇಲ್ಲಿ ಸುಮಾರು ೨೫೦ ವಾಹನಗಳ ಪಾರ್ಕಿಂಗ್ ಮಾಡುವ ಅವಕಾಶ ಕಲ್ಪಿಸಲಾಗಿದೆ.

ಪುಟ್ಟ ಮಕ್ಕಳಿಗಾಗಿ ಮೋಜನ್ನು ನೀಡುವ ಸಲುವಾಗಿ ಮಕ್ಕಳ ಆಟದ ಸ್ಥಳವನ್ನು ಮೀಸಲಿರಿಲಾಗಿದೆ. ವ್ಯಾಪಕ ಸಂಗ್ರಹದ, ಅತ್ಯುತ್ತಮ ಗುಣಮಟ್ಟದ ಉತ್ತಮ ಶ್ರೇಣಿಯಯಾವುದಕ್ಕೂ ಸಾಟಿಯಿಲ್ಲದ ಜಯಲಕ್ಷ್ಮಿ, ಪ್ರತಿದಿನವು ಶಾಪಿಂಗ್ ಮಾಡುವ ಭರವಸೆಯನ್ನ ನೀಡುತ್ತದೆ. ಜವಳಿ ಕ್ಷೇತ್ರದಲ್ಲಿ ತನ್ನ7 ದಶಕಗಳ ಪರಿಣತಿ ಹೊಂದಿರುವ ಜಯಲಕ್ಷ್ಮಿ ಭಾರತೀಯ, ಸಾಂಪ್ರದಾಯಿಕ ಮತ್ತು ಪಾಶ್ಚಾತ್ಯ, ಫ್ಯಾಷನ್ ವಸ್ತ್ರೋದ್ಯಮದಲ್ಲಿ ಅಪಾರ ಅನುಭವ ಹೊಂದಿದ್ದು, ಪ್ರತಿಯೊಂದು ವಿಭಾಗದ ಜನರ ಅಭಿರುಚಿಯನ್ನು ಪೂರೈಸಲು ಸಜ್ಜಾಗಿದೆ. ನವ ವಿನ್ಯಾಸದೊಂದಿಗೆ ನೂತನಕಲ್ಪನೆಯೊಂದಿಗೆ ವಿನ್ಯಾಸಗೊಳಿಸಲಾದ ವಿಶಾಲವಾದ ಶೋ ರೂಂ, ಪ್ರತಿಯೊಬ್ಬ ಗ್ರಾಹಕರ ಕಾಳಜಿ ವಹಿಸಲು ೫೦೦ಕ್ಕೂ ಹೆಚ್ಚು ಹರ್ಷ ಚಿತ್ತದ ಉತ್ಸಾಹಿ ಸಿಬ್ಬಂದಿಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಪ್ರಕ್ರಿಯೆಗಳು ಗ್ರಾಹಕರಿಗೆ ಅಂತರರಾಷ್ಟ್ರೀಯ ಶಾಪಿಂಗ್ ಅನುಭವವನ್ನು ನೀಡುತ್ತದೆ.

“ಜಯಲಕ್ಷ್ಮಿ” ಬಗ್ಗೆ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾರ್ಯ ನಿರ್ವಾಹಕ ನಿರ್ದೇಶಕ ಸುಜೀತ್‌ಕಾಮತ್ ಜಯಲಕ್ಷ್ಮಿ ಮಳಿಗೆಯನ್ನು 1947 ರಲ್ಲಿ ಕೊಚ್ಚಿನ್‌ನ ಕ್ಲೋತ್ ಬಜಾರ್‌ ರಸ್ತೆಯಲ್ಲಿ ದಿವಂಗತ ಶ್ರೀ ಆರ್. ನರಸಿಂಹ ಕಾಮತ್‌ಅವರು ಸ್ಥಾಪಿಸಿದರು. ಪ್ರಾರಂಭದಲ್ಲಿ 200  ಚದರ ಅಡಿ ಅಳತೆಯ ಸಣ್ಣ ಅಂಗಡಿಯೊಂದಿಗೆ ವ್ಯವಹಾರವು ಪ್ರಾರಂಭಗೊಂಡಿತು ಎಂದರು.

1997 ರಲ್ಲಿ, ದಿವಂಗತ ಶ್ರೀ ಆರ್ ನರಸಿಂಹ ಕಾಮತ್‌ರವರ ಮೂವರು ಪುತ್ರರು.ಶ್ರೀ ಎನ್. ನಾರಾಯಣಕಾಮತ್, ಶ್ರೀ ಎನ್. ಗೋವಿಂದ್‌ಕಾಮತ್ ಮತ್ತು ಶ್ರೀ ಎನ್. ಸತೀಶ್‌ಕಾಮತ್, ಎಂಜಿರೋಡ್‌ಕೊಚ್ಚಿನ್‌ನಲ್ಲಿ 60,000 ಚದರ ಅಡಿ ಅತ್ಯಾಧುನಿಕ ಶೋ ರೂಂಅನ್ನುತೆರೆದರು. ಗ್ರಾಹಕರಿಗೆ ಉತ್ತಮ ಗುಣಮಟ್ಟ ಮತ್ತು ಫ್ಯಾಶನ್ ಉಡುಪುಗಳನ್ನು ಒದಗಿಸುವ ದೃಢ ಸಂಕಲ್ಪ ಮತ್ತು ಕಠಿಣ ಪರಿಶ್ರಮ ಉತ್ತಮ ದೃಷ್ಟಿ ಕೋನದೊಂದಿಗೆ ತಮ್ಮ ಸಂಸ್ಥೆಯ ಬೆಳವಣಿಗೆಯ ಕಥೆಯನ್ನು ಪ್ರಾರಂಭಿಸಿದರು.

ಜಯಲಕ್ಷ್ಮಿ ಬ್ರಾಂಡ್
15 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ, ಜಯಲಕ್ಷ್ಮಿ ಬ್ರಾಂಡ್ ಕೇರಳದಾದ್ಯಂತ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತು. ಅಲ್ಲದೆ ತಿರುವನಂತಪುರ, ತ್ರಿಶೂರ್ ಮತ್ತು ಕ್ಯಾಲಿಕಟ್‌ನಲ್ಲಿ ಭವ್ಯವಾದ ಶೋ ರೂಂಗಳನ್ನು ತೆರೆಯಿತು. ಇಂದು ಜಯಲಕ್ಷ್ಮಿ ಬ್ರ್ಯಾಂಡ್‌ ತನ್ನ ಗುಣಮಟ್ಟದ ಉತ್ಪನ್ನಗಳು, ಅತೀ ಅದ್ಭುತ ಸಂಗ್ರಹಗಳು ಮತ್ತುಉತ್ಕೃಷ್ಟ ಸೇವೆಗೆ ಹೆಸರುವಾಸಿಯಾಗಿದೆ.

ಕಳೆದ 7 ದಶಕಗಳಲ್ಲಿ ಲಕ್ಷಾಂತರ ನಿಷ್ಠಾವಂತಗ್ರಾಹಕರಿಗೆ ಸೇವೆ ಸಲ್ಲಿಸಿದ ಜಯಲಕ್ಷ್ಮಿ ಬ್ರ್ಯಾಂಡ್ ಮದುವೆಯ ರೇಷ್ಮೆ ಸೀರೆಗಳ ಬೃಹತ ಸಂಗ್ರಹಗಳ ಮಧ್ಯೆ ’ವಧುವಿನ ಶೃಂಗಾರದ ಉಡುಪುಗಳ ಸಂಗ್ರಹತಾಣ’ (Bridal destination) ಎಂಬ ಟ್ಯಾಗ್‌ನ್ನು ಹೊಂದಿದೆ. “ಜಯಲಕ್ಷ್ಮಿ” ಮೆಗಾ ಶೋರೂಂ ಮಂಗಳೂರಿಗೆ ಆಗಮಿಸಿರುವುದಕ್ಕೆ ಜನತುಂಬಾ ಸಂತೋಷಪಡುತ್ತಿದ್ದಾರೆ ಮತ್ತು ಈ ಸುಂದರ ನಗರದ ಮತ್ತುಇಲ್ಲಿನ ಜನರೊಂದಿಗೆ ಶಾಶ್ವತ ಸಂಬಂಧವನ್ನು ಹೊಂದಲು ಎದುರು ನೋಡುತ್ತಿದ್ದಾರೆ ಎಂದು ತಿಳಿಸಿದರು .

ಪತ್ರಿಕಾಗೋಷ್ಠಿಯಲ್ಲಿ ನಾರಾಯಣಕಾಮತ್(ಚೇರ್‌ಮ್ಯಾನ್), ಸತೀಶ್‌ಕಾಮತ್, ಗೋವಿಂದಕಾಮತ್ (ಜಂಟಿ ಆಡಳಿತ ನಿರ್ದೇಶಕರು) ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English