ಏಕ್ ಭಾರತ್, ಶ್ರೇಷ್ಠ ಭಾರತ್: ಧರ್ಮಸ್ಥಳದಲ್ಲಿ ಭಾರತೀಯ ಲೋಕ ಉತ್ಸವ

10:07 PM, Tuesday, March 10th, 2020
Share
1 Star2 Stars3 Stars4 Stars5 Stars
(No Ratings Yet)
Loading...

Bharatiya loka utsavaಉಜಿರೆ: ಧರ್ಮ ಮತ್ತು ಸಂಸ್ಕೃತಿಯಲ್ಲಿ ವಿವಿಧತೆಯಲಿ ಏಕತೆಯನ್ನು ಸಾಧಿಸಿರುವುದು ಭಾರತದ ವೈಶಿಷ್ಟ್ಯವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಧೀನದ ತಂಜಾವೂರಿನ ದಕ್ಷಿಣ ವಲಯ ಸಂಸ್ಕೃತಿ ಕೇಂದ್ರದ ಆಶ್ರಯದಲ್ಲಿ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ಭಾರತೀಯ ಲೋಕ ಉತ್ಸವ, ಧರ್ಮಸ್ಥಳ – ೨೦೨೦ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅವರು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ದೀಪ ಬೆಳಗಿಸಿ, ಡೋಲು ಬಾರಿಸಿ ಭಾರತ್ ಮಾತಾ ಕಿ ಜೈ ಎಂಬ ಘೋಷಣೆಯೊಂದಿಗೆ ಉದ್ಘಾಟನಾ ಭಾಷಣವನ್ನು ಪ್ರಾರಂಭಿಸಿದ ಹೆಗ್ಗಡೆಯವರು, ಭೌಗೋಳಿಕವಾಗಿ, ಧಾರ್ಮಿಕ ನಂಬಿಕ, ನಡವಳಿಕೆ, ಆಚಾರ- ವಿಚಾರ, ಬಳಸುವ ಭಾಷೆಯಲ್ಲಿ ನಾವು ವಿಭಿನ್ನವಾಗಿದ್ದರೂ, ಧರ್ಮ ಮತ್ತು ಸಂಸ್ಕೃತಿಯ ನೆಲೆಯಲ್ಲಿ ನಾವೆಲ್ಲರೂ ಭಾವನಾತ್ಮಕವಾಗಿಒಂದೇಆಗಿದ್ದೇವೆ.

ಹೂ ಮಾಲೆಯಲ್ಲಿ ವಿವಿಧ ಬಣ್ಣದ ಹಾಗೂ ಜಾತಿಯ ಹೂಗಳನ್ನು ಪೋಣಿಸಿದರೂ ಮಾಲೆಆಕರ್ಷಕ ವಾಗಿರುತ್ತದೆ. ಗಾಂಧೀಜೀಯವರು ಕೂಡಾ ಧರ್ಮದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ಪ್ರಯತ್ನಿಸಿದರು.

ಧರ್ಮಸ್ಥಳದಲ್ಲಿರುವ ಯಕ್ಷಗಾನ ಮಂಡಳಿಗೆ 200 ವರ್ಷಗಳ ಭವ್ಯ ಇತಿಹಾಸವಿದ್ದು ಧರ್ಮ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆಗೆಅದು ಶ್ರಮಿಸುತ್ತಿದೆ ಎಂದು ಹೆಗ್ಗಡೆಯವರು ಹೇಳಿದರು.

ಬೇರೆ ರಾಜ್ಯಗಳಿಂದ ಬಂದವರಿಗೆ ನಮ್ಮರಾಜ್ಯದ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ನೀಡಲಾಗುವುದು. ಇಲ್ಲಿನ ಭಾಷೆ, ಸಂಸ್ಕೃತಿ ಹಾಗೂ ಆಚಾರ- ವಿಚಾರಗಳನ್ನು ಇತರರಾಜ್ಯದವರು ಪರಿಚಯ ಮಾಡಿಕೊಳ್ಳಬೇಕು ಎಂದುಅವರು ಸಲಹೆ ನೀಡಿದರು.

ತಂಜಾವೂರಿನದಕ್ಷಿಣ ವಲಯ ಸಂಸ್ಕೃತಿಕೇಂದ್ರದ ನಿರ್ದೇಶಕ ಪ್ರೊ.ಬಾಲಸುಹ್ಮಣ್ಯಮ್‌ಮಾತನಾಡಿಯುವಜನತೆದೇಶದಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು ನಮ್ಮ ಸನಾತನಧರ್ಮ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ ಹೊಣೆಗಾರಿಕೆಅವರಿಗಿದೆ.ಆದುದರಿಂದಲೇಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಗ್ರಾಮೀಣ ಪ್ರದೇಶದಜನರು ಹಾಗೂ ಯುವಜನತೆಕಾರ್ಯಕ್ರಮದ ಸದುಪಯೋಗ ಪಡೆದು ಏಕ್ ಭಾರತ್, ಶ್ರೇಷ್ಠ ಭಾರತ್ ಎಂದು ಸಾಧಿಸಿ ತೋರಿಸಬೇಕುಎಂದುಅವರು ಸಲಹೆ ನೀಡಿದರು.

ಧರ್ಮ ಮತ್ತು ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದ್ದುಇದನ್ನು ಉಳಿಸಿ ಬೆಳೆಸುವುದು ಹಾಗೂ ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆಎಂದುಅವರುಅಭಿಪ್ರಾಯಪಟ್ಟರು.

ಉಜಿರೆಯಎಸ್.ಡಿ.ಎಮ್. ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಸತೀಶ್ವಂದ್ರ ಸ್ವಾಗತಿಸಿದರು.ಪ್ರೊ.ಸುನಿಲ್ ಪಂಡಿತ್‌ಕಾರ್ಯಕ್ರಮ ನಿರ್ವಹಿಸಿದರು.
ಅಸ್ಸಾಮಿನಜಾನಪದ ಬಹೂ ನೃತ್ಯ ಪ್ರದರ್ಶನಎಲ್ಲರಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಕಾಶ್ಮೀರ, ಕೇರಳ, ಮಿಜೋರಾಂ ಮತ್ತುಕರ್ನಾಟಕದಜಾನಪದ ನೃತ್ಯಗಳ ಪ್ರದರ್ಶನ ನಡೆಯಿತು.

ಉಜಿರೆಯಲ್ಲಿಎರಡು ದಿನ ಕಾರ್ಯಕ್ರಮ :ಉಜಿರೆಯಲ್ಲಿರುವ ವನರಂಗ ಬಯಲು ಮಂದಿರದಲ್ಲಿ ಬುಧವಾರ ಮತ್ತುಗುರುವಾರ (ದಿನಾಂಕ: 11 ಮತ್ತು 12) ಸಂಜೆಗಂಟೆ 6.30  ರಿಂದ 8.30  ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ಆಯೋಜಿಸಿದ್ದು ಆಸಕ್ತರಿಗೆ ವೀಕ್ಷಿಸಲು ಮುಕ್ತ ಅವಕಾಶವಿದೆಎಂದು ಸಂಘಟಕರು ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English