‘ಕೊರೋನಾ’ದಂತಹ ರೋಗಾಣುಗಳ ಸೋಂಕನ್ನು ತಡೆಗಟ್ಟಲು ನಿತ್ಯ ಅಗ್ನಿಹೋತ್ರ ಮಾಡಿ !

9:33 AM, Wednesday, March 11th, 2020
Share
1 Star2 Stars3 Stars4 Stars5 Stars
(No Ratings Yet)
Loading...

coronavirus

ಮಂಗಳೂರು : ಭಾರತದಲ್ಲಿ ವೇದಕಾಲದಿಂದಲೂ ಯಜ್ಞಕರ್ಮಗಳನ್ನು ಮಾಡಲಾಗುತ್ತಿತ್ತು. ಭಾರತೀಯ ಸಂಸ್ಕೃತಿಯಲ್ಲಿರುವ ಯಜ್ಞಯಾಗಗಳಿಂದ ಆಧ್ಯಾತ್ಮಿಕ ಲಾಭ ಇರುವುದರೊಂದಿಗೆ ವೈಜ್ಞಾನಿಕ ಸ್ತರದಲ್ಲಿಯೂ ಅನೇಕ ಲಾಭಗಳಿವೆ, ಎಂಬುದು ಇಂದು ವಿಜ್ಞಾನದಲ್ಲಿ ಸಾಬೀತಾಗುತ್ತಿದೆ. ಇದರಲ್ಲಿ ಒಂದು ಸುಲಭ ಹಾಗೂ ಪ್ರತಿದಿನ ಮಾಡುವ ಯಜ್ಞ ಎಂದರೆ ‘ಅಗ್ನಿಹೋತ್ರ’! ಹಿಂದೂ ಧರ್ಮವು ಮನುಕುಲಕ್ಕೆ ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಅಗ್ನಿಹೋತ್ರವನ್ನು ನಿಯಮಿತವಾಗಿ ಮಾಡಿದರೆ ದೊಡ್ಡಪ್ರಮಾಣದಲ್ಲಿ ವಾತಾವರಣದ ಶುದ್ಧೀಯಾಗುತ್ತದೆ. ಅಲ್ಲದೇ ಅದನ್ನು ಮಾಡುವ ವ್ಯಕ್ತಿಯ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿಯೂ ಶುದ್ಧಿಯಾಗುತ್ತದೆ. ಇದರೊಂದಿಗೆ ವಾಸ್ತು ಹಾಗೂ ವಾತಾವರಣದ ರಕ್ಷಣೆಯೂ ಆಗುತ್ತದೆ. ಅಗ್ನಿಹೋತ್ರದಿಂದಾಗಿ ನಿರ್ಮಾಣವಾಗುವ ಔಷಧಿಯುಕ್ತ ವಾತಾವರಣದಿಂದಾಗಿ ರೋಗಕಾರಿ ಜಂತುಗಳು ಹೆಚ್ಚಳ ನಿಲ್ಲುತ್ತದೆ, ಅದೇರೀತಿ ಅದರ ಅಸ್ತಿತ್ವ ನಾಶವಾಗಲು ಸಹಾಯವಾಗುತ್ತದೆ. ಆದ್ದರಿಂದ ಪ್ರಸಕ್ತ ಜಗತ್ತಿನಾದ್ಯಂತ ಹಾಹಾಕಾರವೆಬ್ಬಿಸಿದ ‘ಕೊರೋನಾ ವೈರಸ್’ನ ಸಂಕಟಕ್ಕೆ ‘ಅಗ್ನಿಹೋತ್ರ’ ಇದು ರಾಮಬಾಣದಂತಹ ಉಪಾಯವಾಗಿ ಪರಿಣಮಿಸಬಹುದು.

ಮಾರ್ಚ್ 12 ರಂದು ‘ವಿಶ್ವ ಅಗ್ನಿಹೋತ್ರ ದಿನ’ವಾಗಿದೆ. ಈ ಹಿನ್ನಲೆಯಲ್ಲಿ ಎಲ್ಲ ಹಿಂದೂ ಬಾಂಧವರು ‘ಕೊರೋನಾ ವೈರಸ್’ನ ಹಾವಳಿಯನ್ನು ತಡೆಗಟ್ಟಲು ಹಾಗೂ ಸಮಾಜದ ಉತ್ತಮ ಆರೋಗ್ಯ ಹಾಗೂ ಸುರಕ್ಷಿತ ಜೀವನಕ್ಕಾಗಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ‘ಅಗ್ನಿಹೋತ್ರ’ ಮಾಡಿರಿ, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಕರೆ ನೀಡಿದ್ದಾರೆ.

ಅಗ್ನಿಹೋತ್ರ ಮಾಡಲು ಪುರೋಹಿತರನ್ನು ಕರೆಯುವುದು, ದಾನಧರ್ಮ ಮಾಡುವುದು ಇತ್ಯಾದಿ ಏನೂ ಮಾಡುವ ಆವಶ್ಯಕತೆ ಇಲ್ಲ. ಅದಕ್ಕೆ ಯಾವುದೇ ನಿಬಂಧನೆಗಳಿಲ್ಲ. ಸಾಮಾನ್ಯ ವ್ಯಕ್ತಿಯೂ ಈ ವಿಧಿಯನ್ನು ಮನೆಯಲ್ಲಿ, ಕಾರ್ಯಾಲಯದಲ್ಲಿ ಕೇವಲ 10 ನಿಮಿಷಗಳಲ್ಲಿ ಎಲ್ಲಿಬೇಕಾದರೂ ಮಾಡಬಹುದು. ಇದಕ್ಕೆ ಖರ್ಚು ಕೂಡಾ ಕಡಿಮೆ ಇದೆ. ಅಗ್ನಿಹೋತ್ರ ನಿಯಮಿತವಾಗಿ ಮಾಡಿದರೆ ಧರ್ಮಾಚರಣೆಯಾಗುತ್ತದೆ ಹಾಗೂ ವಾತಾವರಣದೊಂದಿಗೆ ಸಮಾಜದ ರಕ್ಷಣೆಯೂ ಆಗುತ್ತದೆ.

‘ಅಗ್ನಿಹೋತ್ರ’ ಇದರ ಬಗ್ಗೆ ಅನೇಕ ವೈಜ್ಞಾನಿಕ ಪ್ರಯೋಗಗಳನ್ನು ಮಾಡಲಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಂಟರನೆಟ್‌ನ ಮಾಧ್ಯಮದಿಂದ ನಾವು ಪಡೆದುಕೊಳ್ಳಬಹುದು. ಫ್ರಾನ್ಸ್‌ನಲ್ಲಿ ಟ್ರೆಲ್ ಎಂಬ ವಿಜ್ಞಾನಿಯು ಹವನದ ಬಗ್ಗೆ ಮಾಡಿದ ಶೋಧನೆಯಲ್ಲಿ ಹವನ ಮಾಡುವುದರಿಂದ ವಾತಾರಣದಲ್ಲಿಯ ಶೇ. 93 ರಷ್ಟು ಮಾರಕ ರೋಗಾಣು ಹಾಗೂ ಜಂತುಗಳು ಕಡಿಮೆಯಾಗಿರುವುದು ಕಂಡುಬಂದಿದೆ. ಅದರ ಬಗ್ಗೆ ‘ಎಂಥೋಫಾರ್ಮಾಕೊಲಾಜಿ 2007’ ಈ ಜರ್ನಲ್‌ದಲ್ಲಿ ಶೋಧನಿಬಂಧ ಪ್ರಕಾಶಿಸಲಾಗಿತ್ತು. ‘ನ್ಯಾಶನಲ್ ಕೆಮಿಕಲ್ ಲ್ಯಾಬೋರೆಟರಿ’ ಈ ಸಂಸ್ಥೆಯ ಮಾಜಿ ಹಿರಿಯ ವಿಜ್ಞಾನಿ ಡಾ. ಪ್ರಮೋದ ಮೊಘೆ ಇವರು ಮಾಡಿದ ಶೋಧನೆಗನುಸಾರ ಅಗ್ನಿಹೋತ್ರದಿಂದಾಗಿ ವಾತಾವರಣದಲ್ಲಿ ಸೂಕ್ಷ್ಮ ಜಂತುವಿನ ಹೆಚ್ಚಳದ ಪ್ರಮಾಣವು ಶೇ.90 ರಷ್ಟು ನಿಂತಿತು; ಕಲುಷಿತ ಗಾಳಿಯಲ್ಲಿನ ಮಾರಕ ಸಲ್ಫರ್‌ಡೈ ಆಸ್ಕೈಡ್‌ನ ಪ್ರಮಾಣ 10 ಪಟ್ಟು ಕಡಿಮೆಯಾಗುತ್ತದೆ. ವೃಕ್ಷಗಳು ನಿತ್ಯಕ್ಕಿಂತಲೂ ವೇಗವಾಗಿ ಬೆಳವಣಿಗೆಯಾಗುತ್ತದೆ. ಅಗ್ನಿಹೋತ್ರದ ವಿಭೂತಿಯು ಜಂತುನಾಶಕವಾಗಿದ್ದರಿಂದ ಗಾಯ, ಚರ್ಮರೋಗ ಇತ್ಯಾದಿಗಳಿಗಾಗಿ ಅತ್ಯಂತ ಉಪಯುಕ್ತವಾಗಿದೆ. ನೀರಿನಲ್ಲಿಯ ಜಂತು ಹಾಗೂ ಕ್ಷಾರದ ಪ್ರಮಾಣ ಶೇ. 80 ರಿಂದ 90 ರಷ್ಟು ಕಡಿಮೆಯಾಗುತ್ತದೆ. ಆದ್ದರಿಂದ ಅಮೇರಿಕ, ಇಂಗ್ಲೆಂಡ್, ಫ್ರಾನ್ಸ್‌ನಂತಹ 70 ದೇಶಗಳು ಅಗ್ನಿಹೋತ್ರವನ್ನು ಅಂಗೀಕರಿಸಿದ್ದು ಅವರು ವಿವಿಧ ವೈಜ್ಞಾನಿಕ ಪುಸ್ತಕಗಳಲ್ಲಿ ಅದರ ನಿಷ್ಕರ್ಷ ಪ್ರಕಾಶಿಸಿದೆ. ಆದ್ದರಿಂದ ವೈಜ್ಞಾನಿಕ ದೃಷ್ಟಿಯಲ್ಲಿ ಸಾಬಿತಾದ ಈ ವಿಧಿಯನ್ನು ಎಲ್ಲ ನಾಗರಿಕರು ಮನಃಪೂರ್ವಕವಾಗಿ ಮಾಡಬೇಕು, ಎಂದು ಶ್ರೀ. ಶಿಂದೆಯವರು ಕರೆ ನೀಡಿದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English