ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನಿಂದ ಕಲಾವಿದರಿಗೆ ಆಸರೆ : ಎ ಕೆ ಜಯರಾಮ ಶೇಖ

10:00 AM, Friday, March 13th, 2020
Share
1 Star2 Stars3 Stars4 Stars5 Stars
(No Ratings Yet)
Loading...

patla

ಮಂಗಳೂರು : ಕೇವಲ ಐದು ವರ್ಷದ ಹಿಂದೆ ಯಕ್ಷಗಾನ ಕಲಾವಿ ದರಿಗಾಗಿ ಸ್ಥಾಪನೆಯಾದ ಪಟ್ಲ ಫೌಂಡೇಶನ್, ಐದು ಕೋಟಿ ರೂಪಾಯಿಯ ಸೇವಾ ಕಾರ್ಯಗಳನ್ನು ಮಾಡಿರುವುದು ಅಧ್ಬುತ ಸಾಧನೆಯಾ ಗಿದೆಯೆಂದು ಮಹೇಶ್ ಮೋಟಾರ್ಸ್ ಮಾಲಕರಾದ ಎ ಕೆ ಜಯರಾಮ ಶೇಖ ಅವರು ಯಕ್ಷಧ್ರುವ ಪಟ್ಲ ಮಂಗಳೂರು ನಗರ ಘಟಕದವರ ತೃತೀಯ ವಾರ್ಷಿಕ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದರು.

ನಗರ ಘಟಕದ ಅಧ್ಯಕ್ಷರಾದ ಪ್ರದೀಪ್ ಆಳ್ವ ಕದ್ರಿ ಅವರು ಮಾರ್ಚ್ 19ರಂದು ಪುರಭವನದಲ್ಲಿ ಜರಗುವ ಕಾರ್ಯಕ್ರಮದ ವಿವರಗಳನ್ನು ನೀಡಿದರು. ಈ ಸಂದರ್ಭದಲ್ಲಿ ಇಬ್ಬರು ಯಕ್ಷಗಾನ ಕಲಾವಿದರನ್ನು ಅಥವಾ ನೇಪಥ್ಯ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಕ ಧನದೊಂದಿಗೆ ಗೌರವಿಸಲಾಗುವುದೆಂದರು.

ವೇದಿಕೆಯಲ್ಲಿ ಘಟಕದ ಗೌರವ ಸಂಚಾಲಕರಾದ ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಕೇಂದ್ರೀಯ ಸಮಿತಿಯ ಉಪಾಧ್ಯಕ್ಷರಾದ ಪ್ರೋಫೆಸರ್ ಡಾ! ಮನು ರಾವ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಮಹಿಳಾ ಘಟಕದ ಗೌರವಾಧ್ಯಕ್ಷರಾದ ಆರತಿ ಆಳ್ವ ಉಪಸ್ಥಿತರಿದ್ದರು. ಘಟಕದ ಕಾರ್ಯದರ್ಶಿ ಎ ಕೃಷ್ಣ ಶೆಟ್ಟಿ ತಾರೆ ಮಾರ್ ಸ್ವಾಗತಿಸಿದರು. ಕೋಶಾಧಿ ಕಾರಿ ರವಿ ಶೆಟ್ಟಿ ಅಶೋಕನಗರ ವಂದಿಸಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English