ಗಂಡ ಮಗುವನ್ನು ಬಿಟ್ಟು ಪರಾರಿಯಾಗಿದ್ದ ಯುವತಿ ಪ್ರಿಯಕರನ ಮನೆಯಲ್ಲಿ ಆತ್ಮಹತ್ಯೆ

9:26 PM, Friday, March 13th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Jayaಕಾಸರಗೋಡು : ಮೂರು ವರ್ಷದ ಹಿಂದೆ ವೆಳ್ಳಿಕೋತ್‌‌ನ ಯುವಕನ ಜೊತೆ ವಿವಾಹವಾಗಿದ್ದ ಯುವತಿ  ಪತಿ ಮತ್ತು ಮಗುವನ್ನು ತೊರೆದು ಪ್ರಿಯಕರನ ಜೊತೆ ಪರಾರಿಯಾಗಿ, ಮೂರು ತಿಂಗಳ ಬಳಿಕ  ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬೆಳಿಗ್ಗೆನಡೆದಿದೆ .

ಪ್ರೇಮಿಗಳು ಪರವನಡ್ಕದಲ್ಲಿರುವ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಉದುಮ ಪಾಕ್ಯಾರಿನ ಜಿಶಾಂತ್ (33) ಮತ್ತು ಪತ್ನಿ ಜಯ (24) ಮೃತಪಟ್ಟವರು.

ಮೂರು ತಿಂಗಳ ಹಿಂದೆಯಷ್ಟೇ ಪ್ರೀತಿಸಿ ವಿವಾಹವಾಗಿದ್ದರು.

ಮೂರು ವರ್ಷದ ಹಿಂದೆ ವೆಳ್ಳಿಕೋತ್‌‌ನ ಯುವಕನ ಜೊತೆ ವಿವಾಹವಾಗಿದ್ದ ಜಯ, ಪಾಕ್ಯಾರಿನ ಜಿಶಾಂತ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದು, ಮೂರು ತಿಂಗಳ ಹಿಂದೆ ಪತಿ ಹಾಗೂ ಎರಡು ವರ್ಷದ ಮಗುವನ್ನು ಬಿಟ್ಟು ಪರಾರಿಯಾಗಿದ್ದು, ಈ ಬಗ್ಗೆ ಹೊಸದುರ್ಗ ಪೊಲೀಸರಿಗೆ ದೂರು ನೀಡಲಾಗಿತ್ತು .

ಪೊಲೀಸರು ಜಯಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಸ್ವಂತ ಇಷ್ಟದಂತೆ ತೆರಳಲು ತಿಳಿಸಲಾಗಿತ್ತು. ಬಳಿಕ ಜಿಶಾಂತ್‌‌ ಅನ್ನು ವಿವಾಹವಾಗಿ ಪರವನಡ್ಕದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಜಯ ಕುಂಬ್ಡಾಜೆ ಚೇಕೂಡ್ಲು ನಿವಾಸಿಯಾಗಿದ್ದರು.

ಎರಡು ದಿನಗಳಿಂದ ಇಬ್ಬರು ಮನೆಯಿಂದ ಹೊರಗಡೆ ಕಾಣದಿರುವುದರಿಂದ ಪರಿಸರವಾಸಿಗಳು ಗಮನಿಸಿದಾಗ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಡುಗೆ ಕೋಣೆಯ ಬಾಗಿಲು ತೆರೆದ ಸ್ಥಿತಿಯಲ್ಲಿತ್ತು .

ಮೇಲ್ಪರಂಬ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದರು. ಜಿಶಾಂತ್‌‌ನ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಗಿದೆ. ಆದರೆ ಜಯಳ ಮೃತದೇಹವನ್ನು ಪಡೆಯಲು ಕುಟುಂಬಸ್ಥರು ನಿರಾಕರಿಸಿದ್ದು , ಹಾಗಾಗಿ ಜಯಳ ಮೃತದೇಹವು ಕಾಸರಗೋಡು ಜನರಲ್ ಆಸ್ಪತ್ರೆ ಶವಗಾರದಲ್ಲಿದೆ.

ಕುಟುಂಬಸ್ಥರು ಮೃತದೇಹ ಪಡೆಯದಿದ್ದಲ್ಲಿ ಪೊಲೀಸರು ಸಾರ್ವಜನಿಕ ಸ್ಮಶಾನದಲ್ಲಿ ಆತ್ಯಸಂಸ್ಕಾರ ಮಾಡುವ ಸಾಧ್ಯತೆ ಇದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English