ಕಲಬುರ್ಗಿ : ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಹತ್ಯೆಗೈದಿದ್ದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಕಲಬುರ್ಗಿಯ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಯಾಕಾಪುರದ ಯಲ್ಲಾಲಿಂಗ(35) ಮರಣದಂಡನೆಗೆ ಗುರಿಯಾದ ಆರೋಪಿ. ನೊಂದ ಬಾಲಕಿಯ ಕುಟುಂಬಕ್ಕೆ ಜಿಲ್ಲಾ ಕಾನೂನು ನೆರವು ಸಮಿತಿಯಿಂದ 10 ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ ನೀಡಿದೆ.
ಚಾಕಲೆಟ್ ಕೊಡಿಸುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿ, ಹತ್ಯೆಗೈದಿದ್ದ ಆರೋಪಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. ಗಲ್ಲು ಶಿಕ್ಷೆಗೆ ಗುರಿಯಾದ ಆರೋಪಿಯನ್ನು ಚಿಂಚೋಳಿ ತಾಲೂಕಿನ ಯಾಕಾಪುರದ ಯಲ್ಲಾಲಿಂಗ. ಎರಡನೆಯ ತರಗತಿಯಲ್ಲಿ ಓದುತ್ತಿದ್ದ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ ಯಲ್ಲಾಲಿಂಗ, ಬಾಲಕಿಯ ಮತ್ತು ತನ್ನ ಬಟ್ಟೆಗಳನ್ನು ಮುಚ್ಚಿಟ್ಟು, ಎಸ್ಕೇಪ್ ಆಗಲು ಪ್ಲಾನ್ ಮಾಡಿದ್ದ. ಸಂಜೆಯಿಂದ ಬಾಲಕಿ ಕಾಣದೇ ಇದ್ದಾಗ ಪೋಷಕರು ಹುಡುಕಾಟ ನಡೆಸಿದಾಗ, ಅಂಗನವಾಡಿಯ ಸಮೀಪ ಶವ ಪತ್ತೆಯಾಗಿತ್ತು.
ಯಲ್ಲಾಲಿಂಗನೊಂದಿಗೆ ಬಾಲಕಿ ಹೋಗುತ್ತಿದ್ದುದನ್ನು ನೋಡಿದ್ದ ಸ್ಥಳೀಯರು, ಪೋಷಕರಿಗೆ ಮಾಹಿತಿ ನೀಡಿದ್ದರು.
ಇದರಿಂದ ಕುಪಿತಗೊಂಡ ಪೋಷಕರು, ಯಲ್ಲಾಲಿಂಗನ ಮನೆಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿದ್ದರು. ಕುಡಿದ ಮತ್ತಿನಲ್ಲಿ ತೇಲುತ್ತಿದ್ದ ಯಲ್ಲಾಲಿಂಗನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಿದ್ದರು. ಡಿಸೆಂಬರ್ 03 ರಂದು ಸುಲೇಪೇಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.
ಸಿಪಿಐ ಶಂಕರಗೌಡ ಪಾಟೀಲ ತ್ವರಿತಗತಿಯಲ್ಲಿ ತನಿಖೆ ಪೂರೈಸಿ, ನ್ಯಾಯಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ತ್ವರಿಗತತಿಯಲ್ಲಿ ವಿಚಾರಣೆ ನಡೆಸಿದ ಪೋಕ್ಸೋ ನ್ಯಾಯಾಲಯ, ಇಂದು ತೀರ್ಪು ಪ್ರಕಟಿಸಿದೆ. ಮರಣ ದಂಡನೆ ಮತ್ತು 17 ವರ್ಷ ಜೈಲು ಶಿಕ್ಷೆಯ ಜೊತೆಗೆ 1 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿ ತೀರ್ಪು ನೀಡಲಾಗಿದೆ. 2ನೇ ಜಿಲ್ಲಾ ಮತ್ತು ಸತ್ರ ನ್ಯಯಾಧೀಶ ಎಸ್.ಗೋಪಾಲಪ್ಪ ತೀರ್ಪು ನೀಡಿದ್ದಾರೆ ಎಂದು ಸರ್ಕಾರಿ ಅಭಿಯೋಜಕ ಎನ್.ವಿ.ಚಟ್ನಾಳಕರ್ ಮಾಹಿತಿ ನೀಡಿದ್ದಾರೆ.
ಎಂಟು ವರ್ಷದ ಹಸುಕಂದಮ್ಮನ ವಿರುದ್ಧ ಪೈಶಾಚಿಕ ಕೃತ್ಯ ಎಸಗಿದ್ದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿರೋದಕ್ಕೆ ಬಾಲಕಿಯ ಕುಟುಂಬದ ಸದಸ್ಯರು ಸ್ವಾಗತಿಸಿದ್ದಾರೆ. ತ್ವರಿತಗತಿಯಲ್ಲಿ ನಮಗೆ ನ್ಯಾಯ ಸಿಕ್ಕಿದೆ. ಅದೇ ರೀತಿಯ ತ್ವರಿತಗತಿಯಲ್ಲಿ ಶಿಕ್ಷೆ ಜಾರಿಗೆ ತರುವ ಮೂಲ ತಮ್ಮ ಮಗಳ ಸಾವಿಗೆ ನಿಜವಾದ ನ್ಯಾಯ ದೊರಕಿಸಿಕೊಡೇಕೆಂದು ಬಾಲಕಿಯ ತಂದೆ ಅಖ್ತರ್ ಮನವಿ ಮಾಡಿಕೊಂಡಿದ್ದಾನೆ.
ಬಾಲಕಿಯ ಕುಟುಂಬಕ್ಕೆ ಜಿಲ್ಲಾ ಕಾನೂನು ನೆರವು ಸಮಿತಿಯಿಂದ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಧೀಶರು ಆದೇಶಿಸಿದ್ದಾರೆ. ಅಪ್ರಾಪ್ತ ಬಾಲಕಿಯ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಪ್ರಕರಣ ಕಲ್ಯಾಣ ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಿತ್ತು. ವಿದ್ಯಾರ್ಥಿಗಳು, ಹಲವಾರು ಸಂಘಟನೆಗಳು ಖಟನೆ ಖಂಡಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದವು. ತ್ವರಿತಗತಿಯಲ್ಲಿ ನ್ಯಾಯದಾನವಾಗಿರೋದನ್ನು ಸಂಘಟನೆಗಳು ಸ್ವಾಗತಿಸಿವೆ.
Click this button or press Ctrl+G to toggle between Kannada and English
March 16th, 2020 at 06:53:27
Nice
March 14th, 2020 at 21:56:16
ಬರವಣಿಗೆ ಚೆನ್ನಾಗಿ ಬರೆದಿರ ಸರ್ , ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ವ್ಯಕ್ತಿಗೆ , ಕಾನೂನು ಅಡಿಯಲ್ಲಿ ಸರಿಯಾಗಿನೇ ಶಿಕ್ಷೆ ಆಗಿದೆ. ಆದರೆ ಅನ್ಯಾಯ ಆದವರಿಗೆ ತ್ವರಿತಗತಿಯಲ್ಲಿ ನ್ಯಾಯ ಕೊಡಸಿದ ನ್ಯಾಯಾಧೀಶರಿಗೆ ನನ್ನ ಕಡೆಯಿಂದ ಧನ್ಯವಾದಗಳು.