ಮೈಸೂರು : ಕೊರೋನ ಸೋಂಕು ಇಲ್ಲ, ಹಕ್ಕಿ ಜ್ವರವೂ ಇಲ್ಲ, ಯಾವುದೇ ಆತಂಕ ಬೇಡ; ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್

10:42 AM, Saturday, March 14th, 2020
Share
1 Star2 Stars3 Stars4 Stars5 Stars
(No Ratings Yet)
Loading...

mysuru

ಮೈಸೂರು : ಮೈಸೂರಿನಲ್ಲಿ ಕೊರೋನ ಸೋಂಕು ಇಲ್ಲ. ಹಕ್ಕಿ ಜ್ವರವೂ ಇಲ್ಲ, ಸದ್ಯ ಜಿಲ್ಲೆಯಲ್ಲಿ ಕೊರೋನ ವೈರಸ್ ಬಗ್ಗೆ ಯಾವುದೇ ಆತಂಕ ಬೇಡ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇದುವರೆಗೂ 100ಕ್ಕೂ ಹೆಚ್ಚು ಜನರನ್ನು ತಪಾಸಣೆ ಮಾಡಲಾಗಿದೆ. ಯಾರಿಗೂ ಕೊರೋನ ವೈರಸ್ ಕಂಡುಬಂದಿಲ್ಲ. ಸೋಂಕಿತ ಅಥವಾ ಶಂಕಿತ ಪ್ರಕರಣ ಅಂತ ಯಾವುದೂ ಇಲ್ಲ. ಸಾರ್ವಜನಿಕರು ನಮ್ಮೊಟ್ಟಿಗೆ ಸಹಕಾರ ನೀಡಬೇಕು. ಕೊರೋನಾ ಭೀತಿ ಹಿನ್ನೆಲೆ ಅರಮನೆ, ಮೃಗಾಲಯ ಮುಚ್ಚುವ ಬಗ್ಗೆ ತೀರ್ಮಾನ ಮಾಡಿಲ್ಲ. ಇದುವರೆಗೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಒಂದು ವೇಳೆ ಮುಚ್ಚುವ ಅಗತ್ಯ ಬಂದರೆ ಮುಂಚಿತವಾಗಿ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ಪ್ರಯಾಣ ಮುಗಿಸಿದ ಪ್ರಯಾಣಿಕರನ್ನ ತಪಾಸಣೆ ಮಾಡಲಾಗುತ್ತಿದೆ. ಓರ್ವ ಶಂಕಿತನನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇಟ್ಟು ತಪಾಸಣೆ ಮಾಡಲಾಗುತ್ತಿದೆ. ಈವರೆಗೆ ಮೂವರು ಶಂಕಿತರ ಸ್ಯಾಂಪಲ್ ಸಂಗ್ರಹ ಮಾಡಲಾಗಿದೆ. ಇಬ್ಬರ ಸ್ಯಾಂಪಲ್ ವರದಿ ನೆಗೆಟಿವ್ ಎಂದು ಬಂದಿದೆ. 28 ದಿನಗಳ ಅಬ್ಸರ್ವೇಷನ್ ಮುಗಿಸಿದ ಪ್ರಯಾಣಿಕರ ಸಂಖ್ಯೆ 70. ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಿ ನಿಗಾ ಇಡಲಾಗಿದ್ದ ವ್ಯಕ್ತಿಗಳ ಸಂಖ್ಯೆ 69 ಇದೆ. ಪ್ರಸ್ತುತ ಇಬ್ಬರನ್ನ ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಿ ನಿಗಾ ಇಡಲಾಗಿದೆ. ಸದ್ಯ ಜಿಲ್ಲೆಯಲ್ಲಿ ಕೊರೋನ ವೈರಸ್ ಬಗ್ಗೆ ಯಾವುದೇ ಆತಂಕ ಇಲ್ಲ. ಇಲ್ಲಿವರೆಗೆ ಯಾರೊಬ್ಬರ ಸ್ಯಾಂಪಲ್ ಪರೀಕ್ಷೆ ಮಾದರಿ ಪಾಸಿಟಿವ್ ಬಂದಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಜಿ,ಪಂ ಸಿಇಓ ಕೆ.ಜ್ಯೋತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English