ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಗೆ ಕರ್ಣಾಟಕ ಬ್ಯಾಂಕ್ ವತಿಯಿಂದ ಸರಕು ಸಾಗಾಟದ ಘನ ವಾಹನ ಕೊಡುಗೆ

5:58 PM, Saturday, March 14th, 2020
Share
1 Star2 Stars3 Stars4 Stars5 Stars
(No Ratings Yet)
Loading...

ujire

ಉಜಿರೆ : ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಗೆ ಶನಿವಾರ ಧರ್ಮಸ್ಥಳದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕರ್ಣಾಟಕ ಬ್ಯಾಂಕ್ ವತಿಯಿಂದ ಸರಕು ಸಾಗಾಟದ ಘನ ವಾಹನವನ್ನು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಮಹಾಬಲೇಶ್ವರಎಂ.ಎಸ್. ಕೊಡುಗೆಯಾಗಿ ನೀಡಿ ಶುಭ ಹಾರೈಸಿದರು.

ujire

ಹೆಗ್ಗಡೆಯವರ ನಿವಾಸ ಬೀಡಿನಲ್ಲಿ ನಡೆದ ಸರಳ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ದಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ರಾಷ್ಟ್ರಪಿತ ಮಹಾತ್ಮಾಗಾಂಧೀಜಿಯವರು ಗ್ರಾಮೀಣ ಗುಡಿಕೈಗಾರಿಕೆ ಮತ್ತು ಗೃಹ ಕೈಗಾರಿಕೆಗೆ ಪ್ರೋತ್ಸಾಹ ನೀಡಿದಂತೆ, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮೂಲಕ ಸ್ವ-ಸಹಾಯ ಸಂಘಗಳನ್ನು ರಚಿಸಿ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಕಚ್ಛಾ ವಸ್ತುಗಳನ್ನು ಒದಗಿಸಿ, ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಿ ಆರ್ಥಿಕ ಸ್ವಾವಲಂಬನೆಗೆ ಪ್ರೇರಣೆ ನೀಡಲಾಗಿದೆ. ಅವರು ತಯಾರಿಸಿದ ಆಹಾರೋತ್ಪನ್ನಗಳು, ಸಿದ್ಧ ಉಡುಪುಗಳು, ಹಾಳೆತಟ್ಟೆ, ಅಗರಬತ್ತಿ, ರೆಕ್ಸಿನ್, ಶುಚಿಕಾರಕಗಳ ಸಾಗಾಟ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಸಿರಿ ಸಂಸ್ಥೆಯ ಮೂಲಕ ಮಾಡಲಾಗುತ್ತದೆ.

ರಾಜ್ಯದಲ್ಲಿ 29 5ಗ್ರಾಮಗಳಲ್ಲಿ ಐದು ಸಾವಿರಕ್ಕೂ ಮಿಕ್ಕಿ ಮಹಿಳೆಯರು ಸಿರಿ ಸಂಸ್ಥೆಯ ನೇತೃತ್ವದಲ್ಲಿ ಆರ್ಥಿಕ ಸಬಲೀಕರಣಗೊಂಡು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಿರಿ ಉತ್ಪನ್ನಗಳು ಶ್ರೇಷ್ಠ ಗುಣಮಟ್ಟವನ್ನು ಹೊಂದಿದ್ದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ. ಕರ್ಣಾಟಕ ಬ್ಯಾಂಕ್‌ಗೂ ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದ್ದುತಾವು ಹಾಗೂ ಸಹೋದರರಾದ ಡಿ. ಸುರೇಂದ್ರಕುಮಾರ್ ಮತ್ತು ಡಿ. ಹರ್ಷೇಂದ್ರ ಕುಮಾರ್ ಬ್ಯಾಂಕಿನ ನಿರ್ದೇಶಕರಾಗಿ ಸಹಕರಿಸಿರುವುದಾಗಿ ಹೇಳಿದರು.

ರಾಷ್ಟ್ರಮಟ್ಟದಲ್ಲಿ ಸಿರಿ ಉತ್ಪನ್ನಗಳು ಜನಪ್ರಿಯವಾಗಿಗ್ರಾಹಕರ ಪ್ರಶಂಸೆಗೆ ಪಾತ್ರವಾಗಲಿ ಎಂದು ಹೆಗ್ಗಡೆಯವರು ಶುಭ ಹಾರೈಸಿದರು.

ujire

ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಮಹಾಬಲೇಶ್ವರಎಂ.ಎಸ್. ಮಾತನಾಡಿ, ದೇಶದಲ್ಲಿ ೮೫೦ ಶಾಖೆಗಳಲ್ಲಿ 8500 ಮಂದಿ ಸಿಬ್ಬಂದಿ ಕರ್ಣಾಟಕ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದು ನಾಗರಿಕ ಪ್ರಜ್ಞೆಯೊಂದಿಗೆ ದೇಶದ ಆರ್ಥಿಕತೆ ಹೆಚ್ಚಿಸುವ ಜವಾಬ್ಧಾರಿಯೊಂದಿಗೆ ಬ್ಯಾಂಕ್‌ ಕಾರ್ಯನಿರ್ವಹಿಸುತ್ತಿದೆ. ಕೇವಲ ಲಾಭ ಗಳಿಸುವುದಷ್ಟೆ ಬ್ಯಾಂಕಿನ ಉದ್ದೇಶವಲ್ಲ. ಶಿಸ್ತು, ಬದ್ಧತೆ, ಹಾಗೂ ಗ್ರಾಹಕರಿಗೆ ಉತ್ತಮಗುಣ ಮಟ್ಟದ ಸೇವೆ ನೀಡುವಲ್ಲಿ ಕರ್ಣಾಟಕ ಬ್ಯಾಂಕ್ ಮುಂಚೂಣಿಯಲ್ಲದೆ. ಗ್ರಾಹಕರಿಗೆಉ ತ್ತಮ ಸೇವೆಯೊಂದಿಗೆ ಪ್ರತಿ ವರ್ಷವೂ ತಮ್ಮ ಬ್ಯಾಂಕ್ ಲಾಭದ ಹಾದಿಯಲ್ಲಿ ಮುನ್ನಡೆಯುತ್ತಿದ್ದು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ ಎಂದರು.

ಎಸ್. ಬ್ಯಾಂಕಿಂಗ್ ಬಗ್ಯೆ ಟಿ.ವಿ. ವಾಹಿನಿಯೊಂದರಲ್ಲಿ ಪ್ರಕಟವಾದತಪ್ಪು ಮಾಹಿತಿಯಿಂದಾಗಿಗ್ರಾಹಕರು ಬ್ಯಾಂಕ್‌ಗಳ ವಿಶ್ವಾಸ ಕಳೆದುಕೊಳ್ಳುವ ಆತಂಕಇದೆ. ಆದರೆ ಗ್ರಾಹಕರು ಯಾವುದೇ ಬ್ಯಾಂಕಿನ ವ್ಯವಹಾರದ ಬಗ್ಯೆಆತಂಕ ಪಡಬೇಕಾಗಿಲ್ಲ ಎಂದುಅವರು ಸೃಷ್ಠೀಕರಣ ನೀಡಿದರು.

ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಕಾರ್ಯನಿವಾಹಕ ನಿರ್ದೇಶಕಕೆ.ಎನ್. ಜನಾರ್ದನ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಪ್ರಗತಿ-ಸಾಧನೆಯ ಪಕ್ಷಿನೋಟ ನೀಡಿದರು.

ಕರ್ಣಾಟಕ ಬ್ಯಾಂಕ್‌ನ ಮಹಾ ಪ್ರಬಂಧಕ ಚಂದ್ರಶೇಖರರಾವ್, ಉಪ ಮಹಾಪ್ರಬಂಧಕ ಚಂದ್ರಶೇಖರ್, ಡಿ, ಹರ್ಷೇಂದ್ರ ಕುಮಾರ್, ಮುಖ್ಯ ಪ್ರಬಂಧಕಿ ಮಲ್ಲಿಕಾ, ಉಜಿರೆ ಕರ್ಣಾಟಕ ಬ್ಯಾಂಕ್ ಶಾಖೆಯ ಪ್ರಬಂಧಕ ಅರವಿಂದ ಭಂಡಾರ್ಕರ್, ಟಾಟಾ ಮೋಟಾರ‍್ಸ್‌ನ ಉದಯ ಮತ್ತು ಅರವಿಂದ ಉಪಸ್ಥಿತರಿದ್ದರು.
ಸಿರಿ ಸಂಸ್ಥೆಯ ಜೀವನ್‌ ಧನ್ಯವಾದವಿತ್ತರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English