ಮಂಗಳೂರಿನಲ್ಲಿ ನೂತನ ಮಲ್ಟಿ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ

4:29 PM, Thursday, November 15th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Instute of Anchologyಮಂಗಳೂರು :ಮಂಗಳೂರಿನ ಪಂಪ್ ವೆಲ್ ವೃತ್ತದ ಬಳಿ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಅಂಕೋಲಜಿ ಆಸ್ಪತ್ರೆ ಯನ್ನು ನಿರ್ಮಿಸಲಾಗಿದ್ದು ಇದರ ಉದ್ಗಾಟನೆಯು ನವೆಂಬರ್ 18 ರಂದು ನಡೆಯಲಿದೆ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ನಿರ್ದೇಶಕರಾದ ಡಾ.ಸುರೇಶ್ ರಾವ್ ತಿಳಿಸಿದರು.

ಕ್ಯಾನ್ಸರ್ ರೋಗವು ಮಾರಣಾಂತಿಕವಾಗಿದ್ದು ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಈ ರೋಗ ಚಿಕಿತ್ಸೆಗಾಗಿ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಸರಿಯಾದ ಆಸ್ಪತ್ರೆಗಳಿಲ್ಲದೆ ಇಲ್ಲಿನ ಜನರು ದೂರದ ಮುಂಬಯಿ ಹಾಗೂ ಇನ್ನಿತರ ನಗರಗಳಿಗೆ ತೆರಳುತ್ತಿದ್ದಾರೆ ಇದನ್ನು ಮನಗಂಡು ಮಂಗಳೂರಿನ ಪ್ರಸಿದ್ದ 7 ಜನ ಕ್ಯಾನ್ಸರ್ ತಜ್ಙರು ಜತೆ ಸೇರಿ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಅಂಕೋಲಜಿ ಆಸ್ಪತ್ರೆಯನ್ನು ಸ್ಥಾಪಿಸಿದ್ದು ಇದು ಕ್ಯಾನ್ಸರ್ ಚಿಕಿತ್ಸೆಗಾಗಿಯೇ ಸ್ಥಾಪಿತಗೊಂಡ ಆಸ್ಪತ್ರೆಯಾಗಿದೆ ಎಂದವರು ಹೇಳಿದರು.

ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಅಂಕೋಲಜಿ ಆಸ್ಪತ್ರೆಯು ರಾಪಿಡ್ ಆರ್ಕ್ ಚಿಕಿತ್ಸೆ ಸೌಲಭ್ಯವನ್ನು ಹೊಂದಿದ್ದು, ಇದು ಭಾರತದಲ್ಲೇ ಈ ಸೌಲಭ್ಯವನ್ನು ಹೊಂದಿರುವ ಎರಡನೇ ಆಸ್ಪತ್ರೆಯಾಗಿದ್ದು ಕರಾವಳಿ ಹಾಗೂ ಸುತ್ತ ಮುತ್ತಲಿನ ಕ್ಯಾನ್ಸರ್ ಪೀಡಿತ ಜನರಿಗೆ ಪ್ರಪಂಚದಲ್ಲಿ ಲಭ್ಯವಿರುವ ಅತ್ಯುತ್ತಮ ಸೌಲಭ್ಯವನ್ನು ಒದಗಿಸುವುದು ಈ ಆಸ್ಪತ್ರೆಯ ಪ್ರಮುಖ ಉದ್ದೇಶವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ಇತರೆ ನಿರ್ದೇಶಕರುಗಳಾದ ಮೆಡಿಕಲ್ ಅಂಕೋಲಾಜಿಸ್ಟ್ ಡಾ.ಕೃಷ್ಣಪ್ರಸಾದ್, ರೇಡಿಯೇಷನ್ ಅಂಕೋಲಾಜಿಸ್ಟ್ ಡಾ.ಸನತ್ ಹೆಗ್ಡೆ ಹಾಗೂ ಪೈನ್ ಮತ್ತು ಪ್ಯಾಲೆಟಿವ್ ಸರ್ಜನ್ ಡಾ.ನವೀನ್ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English