ಬೆಂಗಳೂರು : ಜೊತೆಯಲ್ಲಿ ಕರೆದುಕೊಂಡು ಬಂದು ಈಗ ಬಿಟ್ಟು ಹೋಗುತ್ತೀರಾ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಸಿಎಂ ಬಿಎಸ್‌ವೈ ಅವರನ್ನು ಪ್ರಶ್ನಿಸಿದ ಪ್ರಸಂಗ ಭಾನುವಾರ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ನಡೆಯಿತು.
ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಪುತ್ರಿ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ ನಂತರ ಬಿಎಸ್‌ವೈ ಅವರೊಂದಿಗೆ ಹುಬ್ಬಳ್ಳಿಗೂ ವಿಶೇಷ ವಿಮಾನದಲ್ಲಿ ತೆರಳಲು ಅವಕಾಶ ಸಿಗದಿದ್ದ ಕಾರಣಕ್ಕೆ ಸಿಟ್ಟಾಗಿದ್ದರು. ಈ ಸಂದರ್ಭ ಶೋಭಾ ಅವರು, ಜೊತೆಯಲ್ಲಿ ಕರೆದುಕೊಂಡು ಬಂದು ಈಗ ಬಿಟ್ಟು ಹೋಗುತ್ತೀರಾ ಸಿಎಂ ಬಿಎಸ್‌ವೈ ಅವರನ್ನು ಮುಖಂಡರು ಹಾಗೂ ಅಧಿಕಾರಿಗಳ ಎದುರಲ್ಲಿ ಪ್ರಶ್ನಿಸಿದ್ದಾರೆ. ಪೊಲೀಸರಿಂದ ಗೌರವವಂದನೆ ಸ್ವೀಕರಿಸುವ ಸಂದರ್ಭ ನಡೆದ ಈ ಘಟನೆಯಿಂದ ಸಿಎಂ ಮುಜುಗರಕ್ಕೊಳಗಾಗಬೇಕಾಯಿತು.
ಮುಖ್ಯಮಂತ್ರಿ ಅವರಿಗೆ ತಮ್ಮೊಂದಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಕರೆದುಕೊಂಡು ಹೋಗುವ ಉದ್ದೇಶವಾಗಿತ್ತು.
ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ ಅವರು, ನನ್ನ ಬದಲು ನೀವೆ ವಿಮಾನದಲ್ಲಿ ಹೋಗಿ ಎಂದು ಹೇಳಿದ್ದರು.
ರವಿಕುಮಾರ್ ಕೊನೆಗೆ ಬೇರೊಂದು ವಿಮಾನದಲ್ಲಿ ಬೆಂಗಳೂರಿಗೆ ನಿರ್ಗಮಿಸಿದರು. ಸಿಎಂ ಜೊತೆ ವಿಶೇಷ ವಿಮಾನದಲ್ಲಿ ಶೋಭಾ, ಬೊಮ್ಮಾಯಿ ಹುಬ್ಬಳ್ಳಿಗೆ ಪ್ರಯಾಣಿಸಿದರು.
Click this button or press Ctrl+G to toggle between Kannada and English