ಹುಬ್ಬಳ್ಳಿ: ಸೋಮವಾರ ರಾತ್ರಿ ನಿಧನರಾದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರ ಪಾರ್ಥಿವ ಶರೀರವನ್ನು ವಿಶ್ವೇಶ್ವರ ನಗರದ ಅವರ ನಿವಾಸ ‘ಪ್ರಪಂಚ’ ದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದೆ.
ಬೆಳಿಗ್ಗೆ 9:3೦ ಗಂಟೆ ಸುಮಾರಿಗೆ ಕಿಮ್ಸ್ ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನು ನಿವಾಸಕ್ಕೆ ತರಲಾಯಿತು.
ಸಂಪ್ರದಾಯದ ವಿಧಿ ವಿಧಾನ ನಂತರ ಜಿಲ್ಲಾಡಳಿತದಿಂದ ಪಾರ್ಥಿವ ಶರೀರದ ಪೆಟ್ಟಿಗೆ ಮೇಲೆ ರಾಷ್ಟ್ರಧ್ವಜ ಹಾಕಲಾಯಿತು. ಜಿಲ್ಲಾಧಿಕಾರಿ ದೀಪಾ ಚೋಳನ್ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.
ಮಹಾನಗರ ಪೊಲೀಸ್ ಆಯುಕ್ತ ಆರ್. ದಿಲೀಪ್, ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ತಹಶೀಲ್ದಾರ ಶಶಿಧರ ಮಾಡ್ಯಾಳ ಹಾಗೂ ಪಾಟೀಲ ಪುಟ್ಟಪ್ಪ ಅವರ ಕುಟುಂಬ ಸದಸ್ಯರು ಇದ್ದರು.
ನಂತರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಅವರ ಹುಟ್ಟೂರಾದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿಯಲ್ಲಿ ನೇರೆವೇರಲಿದೆ ಎಂದು ಅವರು ಹೇಳಿದರು.
Click this button or press Ctrl+G to toggle between Kannada and English