ಬೋಂಬೆ ಬಂಟ್ಸ್ ಅಸೋಸಿಯೇಷನ್ ಮಹಿಳಾ ವಿಭಾಗದ ಆಶ್ರಯದಲ್ಲಿ ನಾರಿ ಉತ್ಸವ

9:50 AM, Wednesday, March 18th, 2020
Share
1 Star2 Stars3 Stars4 Stars5 Stars
(No Ratings Yet)
Loading...

bomboy

ಮುಂಬಯಿ : ಗಂಡಸರು ಜೀವನಪೂರ್ತಿ ಮನೆ ಕುಟುಂಬವನ್ನು ನೋಡುವುದರೊಂದಿಗೆ ಉದ್ಯೋಗ ವ್ಯವಹಾರವನ್ನು ನಿರ್ವಹಿಸುತ್ತಾನೆ ಆತನ ಯಶಸ್ವಿಯಾಗಿದೆ ಮಹಿಳೆಯು ಸದಾ ಸಹ ಭಾಗಿಯಾಗುತ್ತಾರೆ ಪ್ರತಿ ಪುರುಷನ ಯಶಸ್ವಿ ಹಿಂದೆ ಮಹಿಳೆ ವಿವಿಧ ರೂಪದಲ್ಲಿ ಬೆಂಬಲವಾಗಿ ಇರುವುದರಿಂದ ಸಂಸಾರ ಒಳ್ಳೆಯ ರೀತಿಯಲ್ಲಿ ನಡೆಯಲು ಸಾಧ್ಯವಾಗುತ್ತಿದೆ ಈ ಬಾರಿಯ ಜವಾಬ್ದಾರಿಯನ್ನು ವಹಿಸಿರುವ ಮಹಿಳಾ ವಿಭಾಗದ ಲತಾ ಜಿ ಶೆಟ್ಟಿ ತಂಡ ಸಮುದಾಯದ ಎಲ್ಲಾ ಮಹಿಳೆಯರನ್ನು ಒಗ್ಗೂಡಿಸಿ ನಾರಿ ಉತ್ಸವವನ್ನು ನಡೆಸಿದೆ ಇದು ಮಹಿಳೆಯರ ಒಗ್ಗಟ್ಟಿಗೆ ಸಾಕ್ಷಿಯಾಗಿದೆ ಎಂದು ಬೋಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಮುರಳಿ ಕೆ ಶೆಟ್ಟಿ ನುಡಿದರು.

ಮಾರ್ಚ್ 14ರಂದು ನವಿ ಮುಂಬೈಯ ಜೋಯಿ ನಗರದ ಬಂಟ್ಸ್ ಸೆಂಟರ್ ನಲ್ಲಿ ಬಾಂಬೆ ಪಾಂಡ್ಸ್ ಅಸೋಸಿಯೇಷನಿನ ಮಹಿಳಾ ವಿಭಾಗ ಆಯೋಜಿಸಿದ ನಾರಿ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಅಸೋಸಿಯೇಷನ್ ಮಹಿಳಾ ವಿಭಾಗದ ಕಾರ್ಯ ಅಧ್ಯಕ್ಷೆ ಲತಾ ಗೋಪಾಲ್ ಶೆಟ್ಟಿ ಪಾಲ್ಗೊಂಡ ಎಲ್ಲರನ್ನೂ ಸ್ವಾಗತಿಸಿ ನಾರಿ ಉತ್ಸವದ ಬಗ್ಗೆ ತಿಳಿಸುತ್ತಾ ಅದೇ ಭಯಾನಕ ರೋಗದ ಭೀತಿ ಇದ್ದರೂ ಕೂಡ ಸಮುದಾಯದ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ಸಿಗೆ ಸಹಕಾರ ಆಗಿದ್ದಾರೆ ಅಸೋಸಿಯೇಷನ್ ನ ಪದಾಧಿಕಾರಿಗಳು ಎಲ್ಲರ ಸಹಕಾರದಿಂದ ಈ ಕಾರ್ಯಕ್ರಮ ರೂಪಗೊಂಡಿದೆ ನಿಮ್ಮೆಲ್ಲರ ಸಹಕಾರ ನಮ್ಮ ಬೋಂಬೆ ಬಂಟ್ಸ್ ಅಸೋಸಿಯೇಷನ್ ನ ಮೇಲಿರಲಿ ಎಂದು ನುಡಿದರು.

bomboy

ಕಾರ್ಯಕ್ರಮವನ್ನು ಅಸೋಸಿಯೇಷನ್ ಅಧ್ಯಕ್ಷ ಮುರಳಿ ಕೆ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಮುಂಬಯಿ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ರಂಜನಿ ಸುಧಾಕರ್ ಹೆಗಡೆ ಕರ್ನಾಟಕ ಸರಕಾರದ ಮಕ್ಕಳ ರಕ್ಷಣಾ ಇಲಾಖೆಯ ಮಾಜಿ ಕಾರ್ಯಾಧ್ಯಕ್ಷೆ ಡಾ ಕೃಪಾ ಅಮರ್ ಆಳ್ವ ಅಂದೇರಿ ವಿಜಯನಗರದ ಅಂಧೇರಿ ವಿಜಯನಗರದ ಲ್ಯಾನ್ಸ್ ಕ್ಲಬ್ ಆಫ್ ಮುಂಬೈ ಇದರ ಮಾಜಿ ಅಧ್ಯಕ್ಷೆ ಶೋಭಾ ಶಂಕರ್ ಬೋಂಬೆ ಬಂಟ್ಸ್ ಬೋಂಬೆ ಬಂಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಸಿಎ ಸುರೇಂದ್ರ ಶೆಟ್ಟಿ ಗೌರವ ಪ್ರಧಾನ ಕಾರ್ಯದರ್ಶಿ ಸುನಿಲ್ ಶೆಟ್ಟಿ ಗೌರವ ಕೋಶಾಧಿಕಾರಿ ಸಿಎ ವಿಶ್ವನಾಥ್ ಶೆಟ್ಟಿ ಜೊತೆ ಕಾರ್ಯದರ್ಶಿ ಶಂಕರ ಶೆಟ್ಟಿ ಕೋಶಾಧಿಕಾರಿ ಶಾಮಸುಂದರ ಶೆಟ್ಟಿ ಯುವ ವಿಭಾಗದ ಕಾರ್ಯಧ್ಯಕ್ಷ ಶಶಿಕಾಂತ್ ರೈ ಉಪಸ್ಥರಿದ್ದರು.

ಈ ಸಂದರ್ಭದಲ್ಲಿ ಮಹಿಳಾ ವಿಭಾಗದ ಮಾಜಿ ಕಾರ್ಯ ಅಧ್ಯಕ್ಷರುಗಳಾದ ಹೇಮಾ ಶೆಟ್ಟಿ, ಹೀರಾ ಆರ್ ಶೆಟ್ಟಿ, ಹರುಷ ಶೆಟ್ಟಿ, ಶೈಲಜಾ ಶೆಟ್ಟಿ ಮತ್ತು ಸುಶೀಲಾ ಸಿ ಶೆಟ್ಟಿ ನಿವೃತ್ತ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಮುಂಬೈ ಇವರನ್ನು ಸನ್ಮಾನಿಸಲಾಯಿತು.

ಸನ್ಮಾನಿತರನ್ನು ಕ್ರಿಷ್ಣ ಮುರಳಿ ಶೆಟ್ಟಿ ಉಷಾ ಶೆಟ್ಟಿ ಶರಣ ಶೆಟ್ಟಿ ತೇಜಕ್ಷಿ ಶೆಟ್ಟಿ ಸಹನೆ ಶೆಟ್ಟಿ ಪರಿಚಯಿಸಿದರು ಅತಿಥಿಗಳನ್ನು ಗುಣವತಿ ಶೆಟ್ಟಿ ಲಲಿತ ಬಿ ಶೆಟ್ಟಿ ತೇಜಕ್ಷಿ ಶೆಟ್ಟಿ ಪರಿಚಯಿಸಿದರು ಸುಮತಿ ಶೆಟ್ಟಿ ಅವರಿಂದ ಪ್ರಾರ್ಥನೆ ನಡೆದವು ಕಾರ್ಯಕ್ರಮವನ್ನು ಅಕ್ಷಯ್ ಶೆಟ್ಟಿ ಮತ್ತು ನಿವೇದಿತ ಶೆಟ್ಟಿ ನಿರೂಪಿಸಿದರು ಕೊನೆಯಲ್ಲಿ ತೇಜಕ್ಷಿ ಶೆಟ್ಟಿ ಸಭಾ ಕಾರ್ಯಕ್ರಮದ ಮೊದಲು ಮತ್ತು ನಂತರ ವಿವಿಧ ಸಮಾಜದ ಮಹಿಳೆಯರಿಂದ ನೃತ್ಯ ಕಾರ್ಯಕ್ರಮಗಳು ಕಿರುನಾಟಕ ಸಮಾಜಕ್ಕೆ ಸಂದೇಶ ನೀಡುವ ರೂಪಕಗಳು ಸಾದರ ಗೊಂಡಿದ್ದರು ಮಹಾನಗರದ ವಿವಿಧ ಜಾತಿಯ ಸಂಘಟನೆಯ ಮಹಿಳಾ ವಿಭಾಗದ ಸದಸ್ಯರು ತಮ್ಮ ನೃತ್ಯ ಗಳನ್ನು ಉತ್ಸವದ ಭವ್ಯ ವೇದಿಕೆಯಲ್ಲಿ ಸಾದರಪಡಿಸಿದರು ಪಾಲ್ಗೊಂಡ ಎಲ್ಲರಿಗೂ ವಿಶೇಷ ಉಡುಗೊರೆಯನ್ನು ನೀಡಿದ್ದರು ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ನ ಹಿರಿಯ ಸದಸ್ಯರು ಮಾಜಿ ಅಧ್ಯಕ್ಷರುಗಳು ಅಧ್ಯಕ್ಷರುಗಳು ವಿವಿಧ ಉಪ ಸಮಿತಿಯ ಪದಾಧಿಕಾರಿಗಳು ಪರಿಸರದ ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು ಕೋರೋಣ ಎಂಬ ಮಾರಕ ರೋಗ ಭೀತಿ ಜನರಲ್ಲಿ ತುಂಬಿಕೊಂಡಿದ್ದರು ಕೂಡ ಅಸೋಸಿಯೇಷನ್ನ ಮಹಿಳಾ ವಿಭಾಗದ ಅರ್ಜಿಸಿದ ನಾರಿ ಉತ್ಸವ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಸಮಾಜಬಾಂಧವರು ಪಾಲ್ಗೊಂಡಿದ್ದರು.
ಮಹಿಳೆಯ ಯಶಸ್ವಿವಿ ಹಿಂದೆ ಮಹಿಳೆ ಇರಬೇಕು – ಡಾ ಕೃಪಾ ಆಳ್ವ (ಕರ್ನಾಟಕ ರಾಜ್ಯ ಕಮಿಷನರ್ ಫಾರ್ ಪ್ರೊಟೆಕ್ಷನ್ ಆಫ್ ಚೈಲ್ಡ್ ರೈಟ್ಸ್ ಇದರ ಕಾರ್ಯಧ್ಯಕ್ಷರು)
ಪ್ರತೀ ದಿನವೂ ಮಹಿಳೆಯರ ದಿನವಾಗಿದೆ. ಹೋಳಿ ಹಬ್ಬವು ಮುಗಿದಿದ್ದರೂ ಇಲ್ಲಿನ ಮಹಿಳೆಯರ ವರ್ಣರಂಚಿತ ಉಡುಪುಗಳನ್ನು ನೋಡುವಾಗ ಬಂಟ್ಸ್ ಅಶೋಷಿಯೇಶನ್ ಇನ್ನು ಹೋಳಿ ಮುಗಿದಿಲ್ಲ. ಎನ್ನುವಂತೆ ಭಾಸವಾಗುತ್ತದೆ . ಚಿಟ್ಟೆಗೆ ತನ್ನ ಸುಂದರವಾದ ರೆಕ್ಕೆ ಕಾಣುದಿಲ್ಲ ಅಂತೆಯೇ ನಮ್ಮ ಮಹಿಳೆಯರು. ಎಲ್ಲಾ ಕ್ಷೇತ್ರದಲ್ಲಿ ಯಶಸ್ವಿಯಾದವರು ಅವರಿಗೆ ಯಶಸ್ವಿನ ಅರಿವು ಆಗುತ್ತಿಲ್ಲ ನಮ್ಮನ್ನು ನಾವು ಅರಿತುಕೊಳ್ಳಬೇಕಾಗಿದೆ. ನಮ್ಮ ಬಂಟರು ಸಮುದಾಯದಲ್ಲಿ ಮಹಿಳೆಯರಿಗೆ ತುಂಬಾ ಮಹತ್ವವಿದೆ. ನಮಗೆ ಗಂಡಸರು ಎಷ್ಟೇ ಹಣ ಕೊಟ್ಟರು ಮನೆಯನ್ನು ನಡೆಸುವ ಶಕ್ತಿ ಮಹಿಳೆಯರಿಗಿದೆ. ಆಪತ್ಕಾಲದಲ್ಲಿ ತಾಯಿ ತನ್ನ ಮಗುವನ್ನು ರಕ್ಷಿಸಲು ಯಾವತ್ತೂ ಹಿಂಜರಿಯುದಿಲ್ಲ. ಮೊದಲಿನ ಕಾಲದಲ್ಲಿ ಅಪಘಾತದಿಂದ ವ್ಯಕ್ತಿಯೊರ್ವ ರಸ್ತೆಯಲ್ಲಿ ನರಳುತ್ತಿದ್ದತೆ ಆತನನ್ನು ರಕ್ಷಿಸಲು ಜನರು ಮುಂದಾಗುತ್ತಿದ್ದರು. ಆದರೆ ಈಗ ಮೊಬೈಲ್ ನ ಕಾಲವಾಗಿದ್ದು ಜನರು ಅಂತಹ ವ್ಯಕ್ತಿಯನ್ನು ರಕ್ಷಿಸುವ ಬದಲು ವಿಡಿಯೋ ತೆಗೆಯಲು ಮುಂದಾಗುತ್ತಿದ್ದಾರೆ ಮೊಬೈಲೇ ನಮ್ಮ ಜೀವನವಾಗಿದೆ ಮಕ್ಕಳಿಗೆ ಮಾತ್ರ ಮೊಬೈಲ್ ನೋಡಬಾರದು ಎನ್ನುವ ಮಾತೆ ಎಂದಿರೋ ತಾವು ಮಾತ್ರ ಮೊಬೈಲ್ನ ಜಗತ್ತಲ್ಲಿ ಸೇರಿಕೊಂಡಿರುತ್ತವೆ ಹಾಗಾಗಬಾರದು.ನಾವು ಇನ್ನೊಬ್ಬರಿಗೆ ಒಂದು ಬೆರಳನ್ನು ತೋರಿಸುತ್ತಿರುವಾಗ ಮೂರು ಬೆರಳುಗಳು ನಮ್ಮನ್ನು ತೋರಿಸುತ್ತಿರುದನ್ನು ನಾವು ಅರಿತುಕೊಳ್ಳಬೇಕು. ನಾವು ಮಹಿಳೆಯರು ಒಂದಾಗಿ ಒಂದು ಶಕ್ತಿಯಾಗಿ ನಡೆದಲ್ಲಿ ಯಾರಿಂದಲೂ ನಮ್ಮನ್ನು ತಡೆಯಲು ಅಸಾದ್ಯ. ಯವುದೇ ಮಹಿಳೆಯ ಯಶಸ್ವಿನ ಹಿಂದೆ ಮಹಿಳೆ ಇರುದಿಲ್ಲ. ನಮ್ಮಲ್ಲೇ ಪರಿವರ್ತನೆಯಾಗಲಿ. ನಾವೆಲ್ಲ ಮಹಿಳೆಯರು ಒಂದಾಗಿ ಸೇರಿ ಒಂದು ಏಣಿಯಂತೆ ಕೈಗೆ ಕೈ ಕೊಟ್ಟು ಮಹಿಳೆಯರನ್ನು ಮೇಲಕ್ಕೆ ತರುವ ಪ್ರಯತ್ನ ಮಾಡೋಣ.

ಮಹಿಳೆಯರಿಗೆ ಮನೆ ತುಂಬ ಪ್ರೀತಿ – ರಂಜನಿ ಸುಧಾಕರ್ ಹೆಗಡೆ (ಕಾರ್ಯಾಧ್ಯಕ್ಷರು – ಬಂಟರ ಸಂಘ ಮುಂಬಯಿಯ ಮಹಿಳಾ ವಿಭಾಗ)
ನಾರಿ ಉತ್ಸವವು ಮಹಿಳೆಯರಿಗೆ ಒಂದು ಸಂಬ್ರಮದ ಕ್ಷಣ. ಕಾಲ ಬದಲಾದಂತೆ ಪುರುಷರಲ್ಲಿ ಬದಲಾವಣೆಯಾಗುತ್ತಿದೆ. ಮೊದಲು ಮಹಿಳೆಯರಿಗೆ ಅಷ್ಟು ಸ್ವತಂತ್ರ ಇರಲಿಲ್ಲ. ಈಗ ಮಹಿಳೆಯರಿಗೆ ಸ್ವತಂತ್ರ ಇದೆ. ಮಹಿಳೆಯರು ಉದ್ಯೋಗವಾಗಲೀ ಯವುದೇ ಕ್ಷೇತ್ರದಲ್ಲಿ ದುಡಿದರೂ ಅಲ್ಲಿ ಆಕೆ ಸಾಧನೆಯನ್ನು ಮಾಡುತ್ತಾಳೆ. ಇದು ಪುರುಷರ ಪ್ರೋತ್ಸಾಹದಿಂದ ಸಾಧ್ಯ. ನಮ್ಮ ಯಾವುದೇ ಕಾರ್ಯದಲ್ಲಿ ಪುರುಷರ ಪ್ರೋತ್ಸಾಹ ಅತೀ ಅಗತ್ಯ. ಮಹಿಳೆಯರಿಗೆ ಮನೆ ಎಂದರೆ ತುಂಬಾ ಪ್ರೀತಿ. ಮನೆಯು ಉತ್ತಮವಾಗಿರಬೇಕು. ಸಂಸಾರವು ಉತ್ತಮವಾಗಿರಬೇಕು ಎಂಬ ಚಿಂತನೆ ಮಹಿಳೆಯಲ್ಲಿದೆ.

ಹೆಣ್ಣು ಮಕ್ಕಳು ಬೆಲೆಬಾಳುವ ಆಸ್ತಿ – ಶೋಭಾ ಶಂಕರ್ ಶೆಟ್ಟಿ ( ಮಾಜಿ ಅಧ್ಯಕ್ಷ ಲಯನ್ಸ್ ಕ್ಲಬ್ ಆಫ್ ಮುಂಬಯಿ ವಿಜಯ ನಗರ)

ನಾವಿಂದು ನಾರಿ ಉತ್ಸವವನ್ನು ಮಾಡುತ್ತಿದ್ದೇವೆ ಯಾಕೆಂದರೆ ನಾವು ನಮ್ಮ ಹೆಣ್ಣು ಮಕ್ಕಳನ್ನು ಅವರು ಹುಟ್ಟಿದಂದಿನಿಂದ ಬೆಲೆಬಾಳುವ ಆಸ್ತಿಯಾಗಿ ನೋಡುತ್ತಿದ್ದೇವೆ. ನಾವು ಪ್ರತೀ ಮಾರ್ಚ್ 8 ರಂದು ಜಾಗತಿಕ ಮಹಿಳಾ ದಿನಾಚರಣೆಯನ್ನು ಮಾಡುತ್ತಿರುವುದರೊಂದಿಗೆ ನಮ್ಮ ಮಹಿಳೆಯರ ವಿವಿಧ ಕ್ಷೇತ್ರದಲ್ಲಿನ ಸಾಧನೆಗಳನ್ನು ಗುರುತಿಸುತ್ತಿದ್ದೇವೆ. ಇದೀಗ ಸಮಾಜದಲ್ಲಿ ಉತ್ತಮ ಪರಿವರ್ತನೆಯಾಗುದರೊಂದಿಗೆ ಹೆಣ್ಣು ಮಕ್ಕಳ ಮಹತ್ವವನ್ನು ಗುರುತಿಸುತ್ತೇವೆ. ಶಾಲಾ ಕಾಲೇಜುಗಳಲ್ಲಿ ಮಹಿಳಾ ದಿನಾಚರಣೆಯನ್ನು ಮಾಡುದರೊಂದಿಗೆ ಮಹಿಳೆಯರನ್ನು ಗೌರವಿಸುತ್ತೇವೆ. ನಮ್ಮ ಮನೆ, ಸಮಾಜ ಹಾಗೂ ದೇಶಕ್ಕೆ ಮಹಿಳೆರು ಹಾಗೂ ಪುರುಷರು ಸಮಾನ ಕೊಡುಗೆಯಿದೆ.

ಸನ್ಮಾನಿತರ ನುಡಿ:
ಅರ್ಥಪೂರ್ಣವಾಗಿ ನಾರಿ ಉತ್ಸವವನ್ನು ಆಚರಿಸಿಕೊಂಡು ಮಾಜಿ ಕಾರ್ಯ ಅಧ್ಯಕ್ಷರನ್ನು ನೆನಪಿಸಿ ಸನ್ಮಾನಿಸಿ ರುವುದು ಬಹಳ ಅಭಿಮಾನ ತಂದಿದೆ ಈ ಪರಂಪರೆ ಮುಂದುವರಿಯಲಿ. ಮಾಜಿ ಕಾರ್ಯಾಧ್ಯಕ್ಷ ಬಾಂಬೆ ಬಂಡ್ ಸ್ಟೇಷ ಮಹಿಳಾ ವಿಭಾಗ ಹೇಮ ಎಸ್ ಶೆಟ್ಟಿ ಹೇಳಿದರು.

ನನ್ನ ಜೀವನಪರ್ಯಂತ ನೆನಪಿಸುವಂತಹ ಈ ಸನ್ಮಾನ ಮಹಿಳೆಯರಲ್ಲಿ ಬಹಳಷ್ಟು ಪ್ರತಿಭೆಗಳು ಇದೆ ಅದಕ್ಕೆ ಇಂತಹ ಕಾರ್ಯಕ್ರಮಗಳು ವೇದಿಕೆಯಾಗಲಿ ಆಗಿದೆ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಬೆಳೆದು ನಿಂತಿವೆ ಎನ್ನುವುದು ಸತ್ಯ ಆದರೆ ನಮ್ಮ ಅಸ್ತಿತ್ವವನ್ನು ಎಂದು ಬಿಡಬಾರದು ಅಸೋಸಿಯೇಷನ್ ಮಹಿಳಾ ವಿಭಾಗಕ್ಕೆ ಮತ್ತೆ ಜೀವಕಳೆ ಬಂದಂತಾಗಿದೆ. ಮಾಜಿ ಕಾರ್ಯಧ್ಯಕ್ಷರು ಬಾಂಬೆ ಅಸೋಸಿಯೇಷನ್ ಮಹಿಳಾ ವಿಭಾಗ ಹೀರ ಆರ್ ಶೆಟ್ಟಿ  ಹೇಳಿದರು.

ಮಹಿಳಾ ವಿಭಾದವರು ಆಯೋಜಿಸಿದ ಈ ನಾರೀ ಉತ್ಸವ ಅರ್ಥಪೂರ್ಣವಾಗಿದೆ. ಕಾರ್ಯಾಧ್ಯಕ್ಷೆ ಲತಾ ಜಿ. ಶೆಟ್ಟಿಯವರು ಎಲ್ಲರನ್ನು ಒಂದುಗೂಡಿಸಿ ಉತ್ತಮವಾದ ಕಾರ್ಯಕ್ರಮಗಳನ್ನು ನೀಡುತ್ತಿದ್ದು ಅವರ ಸಮರ್ಥ ನಾಯಕತ್ವದ ಅರಿವು ಆಗುತ್ತಿದೆ. ಇದೇ ರೀತಿ ಇವರ ಅವಧಿಯಲ್ಲಿ ಇಂತಹ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿರಲಿ ಎಂದು ಶುಭ ಹಾರೈಸುತ್ತೇನೆ. ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷರು ಶೈಲಜಾ ಅಶೋಕ್ ಶೆಟ್ಟಿ ಹೇಳಿದರು.

ನನ್ನನ್ನು ಇಲ್ಲಿಗೆ ಕರೆದು ಸನ್ಮಾನಿಸಿದಕ್ಕೆ ಬೋಂಬೆ ಬಂಟ್ಸ ನ ಎಲ್ಲರಿಗೂ ಧನ್ಯವಾದಗಳು. ನಾನು ಕೆಲವು ವರ್ಷ ಮಹಿಳಾ ವಿಭಾಗದಲ್ಲಿ ಕೆಲಸ ಮಾಡಿದ್ದು ಪುರುಷರು ನಮಗೆ ಬಹಳ ಪ್ರೋತ್ಸಾಹ ನೀಡಿದ್ದನ್ನು ಇಲ್ಲಿ ನೆನಪಿಸಬೇಕಾಗುತ್ತದೆ. ವಿಶ್ವಸಂಸ್ಥೆ ಮಾರ್ಚ್ 8ರಂದು ವಿಶ್ವ ಮಹಿಳಾ ದಿನವನ್ನು ಆಚರಿಸಲು ಘೋಷಿಸಿದೆ. ನ್ಯೂಯೋರ್ಕಿನ ಮಹಿಳೆಯೊಬ್ಬಳು ಕಾರ್ಮಿಕರನ್ನು ಸೇರಿಸಿ ಸಮಾನ ವೇತನ ಹಾಗೂ ಎಂಟು ಗಂಟೆಯಕೆಲಸಕ್ಕಾಗಿ ತಿಂಗಳುಗಟ್ಟೆಲೆ ಹೋರಾಟ ನಡೆಸಿ ಗೆಲುವು ಸಾಧಿಸಿದ ಈ ದಿನವನ್ನು ಮಹಿಳಾ ದಿನವೆಂದು ಆಚರಿಸಲಾಗುತ್ತದೆ. ಈ ದಿನವನ್ನು ವಿವಿದೆಡೆ ಆಚರಿಸಿ ಮಹಿಳೆಯರನ್ನು ಒಂದು ಗೂಡಿಸಿ ಮಹಿಳೆಯರಿಗೆ ಸೂಕ್ತ ವೇದಿಕೆಯನ್ನು ನೀಡಲಾಗುತ್ತದೆ.ಮಾಜಿ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್, ಮುಂಬಯಿ ಸುಶೀಲಾ ಸಿ. ಶೆಟ್ಟಿ ಹೇಳಿದರು.

ಪ್ರತೀಯೊಂದು ಮಹಿಳೆಯಲ್ಲಿ ಅವರದ್ದೇ ಆದ ಪ್ರತಿಭೆ ಹಾಗೂ ಶಕ್ತಿಯಿದೆ. ನಾವು ಇನ್ನೊಬ್ಬರನ್ನು ಸುದಾರಿಸುವ ಮೊದಲು ನಾವು ನಮ್ಮನ್ನು ಸುದಾರಿಸಬೇಕಾಗಿದೆ. ನಾವು ಮೊದಲು ನಮ್ಮನ್ನು ಪ್ರೀತಿಸಬೇಕು. ಕೆಲಸಕ್ಕೆ ಹೋಗುವ ಮಹಿಳೆಯಾಗಲಿ ಮನೆಯಲ್ಲಿ ರುವ ಮಹಿಳೆಗೂ ತುಂಬಾ ಜವಾಬ್ಧಾರಿ ಇದೆ. ಈಗಿನ ವೈರಸ್ಸು ಬರದಂತೆ ತಡೆಯುವ ಶಕ್ತಿ ನಮಗಿರಲಿ. ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷರು ಅರುಷಾ ಶೆಟ್ಟಿ ಹೇಳಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English