ಮಂಗಳೂರು : ಅಂಧಕಲಾವಿದೆ, ಖ್ಯಾತ ಹಾಡುಗಾರ್ತಿ ಕಸ್ತೂರಿಯವರಿಗೆ ಕರ್ನಾಟಕ ಸರಕಾರದಿಂದ ಪ್ರತಿಷ್ಠಿತ ಕಿತ್ತೂರು ರಾಣಿ ಪ್ರಶಸ್ತಿ ಪ್ರಾಪ್ತವಾದ ನೆಲೆಯಲ್ಲಿ ಇತ್ತೀಚಗೆ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ವತಿಯಿಂದ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪ್ರದೀಪ ಕುಮಾರ ಕಲ್ಕೂರರ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮವನ್ನು ನಡೆಸಲಾಯಿತು.
ಕಲ್ಕೂರರು ಮಾತಾಡಿ ಅಂಧ ಕಲಾವಿದೆಯ ಸಾಧನೆ ಅಸಾಮಾನ್ಯವಾದುದು, ಸುಶ್ರಾವ್ಯಕಂಠ ಮಾಧುರ್ಯದಿಂದ ಬಹಳಷ್ಟು ಜನಪ್ರಿಯತೆಗಳಿಸಿದ ಇವರಿಗೆ ಈ ಪ್ರಶಸ್ತಿ ಪ್ರತಿಭೆಗೆ ಸಂದ ಪುರಸ್ಕಾರವೆಂದು ಶ್ಲಾಘಿಸಿದರು. ಕಸ್ತೂರಿಯ ಸಾಧನೆಗೆ ಅವರತಾಯಿ ಪೂರ್ಣಿಮಾ ಕಾಮತರ ಶ್ರಮ ಅನುಪಮವಾದುದು ಎಂದು ಪ್ರಶಂಸಿದರು. ಫಲ,ಪುಷ್ಪ ಹಾಗೂ ಶ್ರೀ ಕೃಷ್ಣನ ಪ್ರತಿಮೆ ನೀಡಿ ಕಸ್ತೂರಿಯವರನ್ನು ಸನ್ಮಾನಿಸಲಾಯಿತು.
ಮಂಗಳೂರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ ವಿಜಯ ಲಕ್ಷ್ಮೀ ಶೆಟ್ಟಿ, ಕೋಶಾಧಿಕಾರಿ ಶ್ರೀಮತಿ ಪೂರ್ಣಿಮಾ ರಾವ್ ಪೇಜಾವರ, ಕಸ್ತೂರಿಯ ತಾಯಿ ಶ್ರೀಮತಿ ಪೂರ್ಣಿಮ ಕಾಮತ್,ನಿತ್ಯಾನಂದ ಕಾರಂತ ಪೊಳಲಿ, ಜನಾರ್ದನ ಹಂದೆ, ಯಶವಂತ ಬೋಳೂರು, ಗೆಳೆಯರ ಬಳಗ ತಾರಾನಾಥ ಹೊಳ್ಳ ಮೊದಲಾದವರು ಭಾಗವಹಿಸಿ ಕಸ್ತೂರಿಯವರನ್ನು ಹಾರ್ದಿಕವಾಗಿ ಅಭಿನಂದಿಸಿದರು.
Click this button or press Ctrl+G to toggle between Kannada and English