ಕೊರೊನಾ ತಡೆಗಟ್ಟಲು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸರ್ವ ವ್ಯವಸ್ಥೆ

12:27 PM, Wednesday, March 18th, 2020
Share
1 Star2 Stars3 Stars4 Stars5 Stars
(No Ratings Yet)
Loading...

sindhu

ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದುವರೆಗೆ 29,053 ಜನರು ಹಾಗೂ ನವಮಂಗಳೂರು ಬಂದರಿನಲ್ಲಿ 5,543 ಜನರನ್ನು ತಪಾಸಣೆ ಮಾಡಲಾಗಿದೆ.

ದ.ಕ. ಜಿಲ್ಲೆಯಲ್ಲಿ ಕೊರೊನಾ ಶಂಕಿತರ ಮೇಲೆ ನಿಗಾ ವಹಿಸಲು ವೆನ್ಲಾಕ್ ನಲ್ಲಿ ನಿಗಾವಣಾ (ಕ್ವಾರಂಟೈನ್‌) ವಾರ್ಡ್‌ 10 ಹಾಗೂ ಪ್ರತ್ಯೇಕತಾ (ಐಸೋಲೇಶನ್‌) 6 ವಾರ್ಡ್‌ ಮಾಡಲಾಗಿದೆ. ತಾಲೂಕುಗಳಲ್ಲಿರುವ ನಿಗಾ ವಾರ್ಡ್‌ನಲ್ಲಿ 167, ಪ್ರತ್ಯೇಕತಾ ವಾರ್ಡ್‌ಗಳಾಗಿ 120ನ್ನು ಸಿದ್ಧಪಡಿಸಲಾಗಿದೆ. ಇಎಸ್‌ಐ ಆಸ್ಪತ್ರೆಯಲ್ಲಿ 100 ಬೆಡ್‌ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗಿನ 46 ಮಾದರಿ ಟೆಸ್ಟ್‌ ನಡೆಸಲಾಗಿದ್ದು, ಇದರಲ್ಲಿ 36 ಟೆಸ್ಟ್‌ನ ವರದಿ ಬಂದಿದ್ದು, ಎಲ್ಲ ನೆಗೆಟಿವ್‌ ಆಗಿವೆ. ಸಂಶಯಿತ ಪ್ರಕರಣಗಳಾಗಿ ಜಿಲ್ಲೆಯಲ್ಲಿ 115 ಜನರ ಮೇಲೆ ತಜ್ಞ ವೈದ್ಯರಿಂದ ನಿರಂತರ ನಿಗಾ ಇರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ ತಿಳಿಸಿದರು.

ಜಿಲ್ಲೆಯಲ್ಲಿ ಕೊರೊನಾ ಹರಡದಂತೆ ತಡೆಗಟ್ಟಲು ಈಗಾಗಲೇ ಜಿಲ್ಲಾ ಘಟಕದಿಂದ ಸ್ಪಂದನಾ ವ್ಯವಸ್ಥೆ-ಕೋವಿಡ್‌ 19 ತಂಡವನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ರಚಿಸಲಾಗಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಘಟಕದಲ್ಲಿ ವೈದ್ಯರು, ಸಿಬಂದಿಯ ತಂಡ ದಿನದ 24 ಗಂಟೆಯೂ ಕಾರ್ಯಾಚರಿಸುತ್ತಿದೆ. ವಿದೇಶದಿಂದ ಆಗಮಿಸುವ ವಿದೇಶೀ/ಭಾರತೀಯ ಪ್ರಜೆಗಳ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರಿಗೆ 1077 ಟೋಲ್‌ಫ್ರೀ ಸಹಾಯವಾಣಿ ವ್ಯವಸ್ಥೆ ಮಾಡಲಾಗಿದೆ ಎಂದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English