ಇಟಲಿ : ಮಹಾಮಾರಿ ಕೊರೋನಾ ವೈರಸ್ ಇಟಲಿ ದೇಶದಲ್ಲಿ ಅಟ್ಟಹಾಸ ಮುಂದುವರಿಸಿದೆ. ಬುಧವಾರ ಒಂದೇ ದಿನ ಇಟಲಿಯಲ್ಲಿ ಬರೋಬ್ಬರಿ 475 ಜನರು ಈ ವೈರಸ್ಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 3,000 ಗಡಿ ತಲುಪಿದೆ.
ಜನವರಿ ಅಂತ್ಯಕ್ಕೆ ಕೊರೋನಾ ವೈರಸ್ ಚೀನಾದಲ್ಲಿ ತನ್ನ ಪ್ರಭಾವ ಬೀರಲು ಆರಂಭಿಸಿತ್ತು. ಮೊದಲು 30 ಜನರು ಮೃತಪಟ್ಟಿದ್ದರು. ಈ ಸಂಖ್ಯೆ ಈಗ 3,245ಕ್ಕೆ ಏರಿಕೆ ಆಗಿದೆ. ನಂತರ ಈ ವೈರಸ್ ಇಟಲಿಗೂ ಹಬ್ಬಿದ್ದು, ಈ ಮಹಾಮಾರಿ ವೈರಸ್ನಿಂದ ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚುತ್ತಲೆ ಇದೆ.
ಬುಧವಾರ ಒಂದೇ ದಿನ 4,207 ಹೊಸ ಪ್ರಕರಣ ದಾಖಲಾಗಿವೆ. ಈ ಮೂಲಕ ಸೋಂಕು ತಗುಲಿದವರ ಸಂಖ್ಯೆ 35,000ಕ್ಕೆ ಏರಿಕೆ ಆಗಿದೆ. ಇದು ಇಟಲಿ ಜನತೆಯಲ್ಲಿ ಆತಂಕ ಹೆಚ್ಚಿಸಿದೆ. ಈ ದೇಶದಲ್ಲಿ ಮಾಸ್ಕ್ಗಳ ಕೊರತೆ ಎದುರಾಗಿದೆ. ಅಲ್ಲದೆ, ಕೆಲವೇ ದಿನಗಳಲ್ಲಿ ಸಾವಿನ ಸಂಖ್ಯೆಯಲ್ಲಿ ಚೀನಾವನ್ನು ಇಟಲಿ ಹಿಂದಿಕ್ಕುವ ಸಾಧ್ಯತೆ ಇದೆ.
ಇನ್ನು, ಚೀನಾದಲ್ಲಿ ಸಾವಿನ ಸಂಖ್ಯೆ ನಿಯಂತ್ರಣಕ್ಕೆ ಬಂದಿದೆ. ದಿನಕ್ಕೆ 10-15 ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸಾವಿನ ಸಂಖ್ಯೆಯಲ್ಲೂ ಗಣನೀಯ ಇಳಿಕೆ ಕಂಡಿದೆ. ಇನ್ನು, ಜರ್ಮನಿ, ಫ್ರಾನ್ಸ್ ಹೊಸ ಪ್ರಕರಣಗಳ ಸಂಖ್ಯೆ 700ರ ಗಡಿ ದಾಟಿದೆ.
ಇಟಲಿಯಲ್ಲಿ ಏಪ್ರಿಲ್ 5ರಿಂದ ಈಸ್ಟರ್ ವಾರವನ್ನು ಆಚರಣೆ ಮಾಡಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಕೊರೋನಾ ವೈರಸ್ ಹಿನ್ನಲೆಯಲ್ಲಿ ಈ ಆಚರಣೆಯನ್ನು ರದ್ದು ಮಾಡಲಾಗಿದೆ. ಇಟಲಿಯಲ್ಲಿ ಕೊರೋನಾ ವೈರಸ್ ಬಾಧಿತ ರೊಗಿಗಳಿಗೆ ಚಿಕಿತ್ಸೆ ನೀಡಲು ಸಂಪನ್ಮೂಲ ಸಾಕಾಗುತ್ತಿಲ್ಲ. ಅಲ್ಲಿಯ ಆರೋಗ್ಯ ವ್ಯವಸ್ಥೆ ಬಹುತೇಕ ಕುಸಿದಿದೆ. ಮುಗಿಬೀಳುತ್ತಿರುವ ಕೊರೋನಾ ಶಂಕಿತರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಟಲಿ ಸರ್ಕಾರ ಒಂದು ನಿರ್ದಯ ನಿರ್ಧಾರ ತೆಗೆದುಕೊಂಡಿದೆ. 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಕೊರೋನಾ ಚಿಕಿತ್ಸೆ ನೀಡುವುದನ್ನು ನಿಲ್ಲಿಸಿದೆ. ಆ ಸಂಪನ್ಮೂಲವನ್ನು ಬೇರೆ ಪ್ರಾಯದ ರೋಗಿಗಳಿಗೆ ಬಳಸಲು ನಿರ್ಧರಿಸಿದೆ.
Click this button or press Ctrl+G to toggle between Kannada and English