ಮಂಗಳೂರು: ಪ್ರಧಾನ ಮಂತ್ರಿ ಕೋವಿಡ್-19 ನಿಯಂತ್ರಣ ಕರೆಗೆ ಜನ ಸಹಕಾರ ನೀಡಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಜಿಲ್ಲೆಯಲ್ಲಿ 1 ಪ್ರಕರಣ ಪಾಸಿಟಿವ್ ದೃಢವಾಗಿದೆ. ಪಾಸಿಟಿವ್ ಬಂದ ಯುವಕನಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತೇಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಅವರು ಮಂಗಳೂರಿನಲ್ಲಿ ಮಾತನಾಡುತ್ತಾ ಜಿಲ್ಲೆಯಲ್ಲಿ 104 ಸ್ಯಾಂಪಲ್ ನಲ್ಲಿ 1 ಮಾತ್ರ ದೃಡವಾಗಿದೆ. 31 ತಾರೀಕಿನವರೆಗೆ ಮತ್ತೆ ಇಂದಿನಂತೆ ಬಂದ್ ಮುಂದುವರಿಯಯತ್ತದೆ. ಆದರೆ ಹಾಲು ತರಕಾರಿ ದಿನಸಿ ಸಾಮಾನುಗಳು ಸಹಿತ ತುರ್ತು ಸೇವೆ ಮುಂದುವರಿಯುತ್ತದೆ. ವಿಮಾನದಲ್ಲಿದ್ದ 165 ಪ್ರಯಾಣಿಕರ ಪತ್ತೆ ಹಚ್ಚುವ ಕೆಲಸ ಆಗುತ್ತಿದೆ. ಅವರ ವಿಳಾಸ ಪತ್ತೆ ಹಚ್ಚುವ ಕೆಲಸ ಜಿಲ್ಲಾಡಳಿತ ನೋಡುತ್ತಿದೆ. ವಿದೇಶದಿಂದ ಬಂದ ಪ್ರಯಾಣಿಕರು ಸೂಚನೆ ಮೀರಿ ತಿರುಗಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
Click this button or press Ctrl+G to toggle between Kannada and English