ಬೆಂಗಳೂರು : ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸಿ ದೇಶ ದ್ರೋಹದ ಕೆಲಸ ಮಾಡಿ ಬಂಧನಕ್ಕೊಳಗಾಗಿದ್ದ ಆರ್ದ್ರಾಗೆ ಕೋರ್ಟ್ ಷರತ್ತು ಬದ್ದ ಜಾಮೀನು ನೀಡಿದೆ.
ಬೆಂಗಳೂರು ಟೌನ್ ಹಾಲ್ ಮುಂದೆ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸಿ ದೇಶದೊಳಗೆ ಪಾಕಿಸ್ತಾನದ ಪರ ಒಲವು ತೋರಿಸಿದ್ದಳು.
ಆರ್ದ್ರಾಗೆ ಬೆಂಗಳೂರು 56ನೇ ಸೆಷನ್ಸ್ ಕೋರ್ಟ್ ಜಾಮೀನು ಮಂಜುರು ಮಾಡಿದೆ. ನ್ಯಾಯಾಧೀಶ ನಾರಾಯಣ ಪ್ರಸಾದ್ ಹಲವು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದ್ದಾರೆ.
ಸಿಎ ಎ ವಿರುದ್ಧ ನಡೆದಿದ್ದ ಪ್ರತಿಭಟನೆಯಲ್ಲಿ ಬಂಧಿಸಲ್ಪಟ್ಟ ಅಮೂಲ್ಯ ಲಿಯೋನ ಸ್ನೇಹಿತೆ ಆರ್ದ್ರಾ ಟೌನ್ ಹಾಲ್ ಮುಂದೆ ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸಿದ್ದಳು.ಪರಿಸ್ಥಿತಿ ಉದ್ವಿಗ್ನವಾಗಿದ್ದ ಕಾರಣ ಪೋಲೀಸರು ಆಕೆಯನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಿದ್ದರು.
ಜೈಲಿನಲ್ಲಿದ್ದ ಆರ್ದ್ರಾ ಕೋರ್ಟ್ ಗೆ ತೆರಳಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಳು.
Click this button or press Ctrl+G to toggle between Kannada and English