ಬೆಳ್ತಂಗಡಿಗೂ ಕಾಲಿಟ್ಟ ಕೋವಿಡ್ 19 ವೈರಸ್ : ದುಬಾಯಿಯಿಂದ ಹಿಂತಿರುಗಿದ ಯುವಕನಿಗೆ ಪಾಸಿಟಿವ್

11:31 PM, Friday, March 27th, 2020
Share
1 Star2 Stars3 Stars4 Stars5 Stars
(No Ratings Yet)
Loading...

Belthangadyಬೆಳ್ತಂಗಡಿ: ಕರಾಯ ಗ್ರಾಮದ 21 ವರ್ಷದ ಯುವಕನಲ್ಲಿ ಕೋವಿಡ್ 19 ವೈರಸ್ ಪಾಸಿಟಿವ್ ಆಗಿರುವುದು  ಪತ್ತೆಯಾಗಿದೆ. ಈ ಯುವಕ ಮಾರ್ಚ್ 21ರಂದು ದುಬಾಯಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಮತ್ತು ಆ ಬಳಿಕ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಮೂಲಕ ಕರಾಯದಲ್ಲಿರುವ ತನ್ನ ಮನೆಗೆ ಬಂದಿದ್ದ.

ಬಳಿಕ ಈ ಯುವಕನಲ್ಲಿ ಅನಾರೋಗ್ಯ ಕಾಣಿಸಿಕೊಂಡಿದ್ದ ಕಾರಣದಿಂದ ಮಾರ್ಚ್ 24ರಂದು ಪುತ್ತೂರಿನ ಆಸ್ಪತ್ರೆ ದಾಖಲುಗೊಂಡಿದ್ದ. ಈ ಸಂದರ್ಭದಲ್ಲಿ ಈತನ ಗಂಟಲು ಸ್ರಾವ ಮಾದರಿಯನ್ನು ತಪಾಸಣೆಗೆ ಕಳುಹಿಸಿಕೊಡಲಾಗಿತ್ತು. ಪ್ರಯೋಗಾಲಯ ಪರೀಕ್ಷೆಯ ವರದಿ ಇಂದು ಕೈಸೇರಿದ್ದು ಇದರಲ್ಲಿ ಈ ಯುವಕನಿಗೆ ಕೋವಿಡ್ 19 ಸೋಂಕು ಇರುವುದು ದೃಢಪಟ್ಟಿದೆ.

ಇದೀಗ ವೈರಸ್ ಸೋಂಕಿತ ಯುವಕನನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈತನ ಟ್ರಾವೆಲ್ ಹಿಸ್ಟರಿ ಮತ್ತು ಕಾಂಟ್ಯಾಕ್ಟ್ ಹಿಸ್ಟರಿಗಳನ್ನು ಕಂಡುಹಿಡಿಯಲಾಗುತ್ತಿದೆ. ಈ ಎಲ್ಲಾ ಮಾಹಿತಿಗಳನ್ನು ಜಿಲ್ಲಾ ಆರೋಗ್ಯ ಅಧಿಕಾರಿಯವರು ಇಂದು ತಮ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English