ಮಂಗಳೂರು: ನಿರ್ಗತಿಕರು, ಕೂಲಿ ಕಾರ್ಮಿಕರು ಊಟವಿಲ್ಲದೇ ಪರದಾಡುತ್ತಿರುವವರಿಗೆ ಸಹಾಯವಾಗುವಂತೆ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಆಯ್ದ ಎ ದರ್ಜೆ ದೇವಸ್ಥಾನಗಳಿಂದ ಊಟ ಉಪಹಾರ ಸರಬರಾಜು ಮಾಡುವಂತೆ ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಯಾವ ಪ್ರದೇಶದಲ್ಲಿ ಇಂತಹ ಸಂಕಷ್ಟಕ್ಕೆ ಒಳಗಾದವರು ಇದ್ದಾರೋ ಅವರಿಗೆ ಉಪಹಾರ ಮತ್ತು ಊಟವನ್ನು ಸಿದ್ದಪಡಿಸಿ , ಪ್ರಾದೇಶಿಕವಾರು ಸಂದರ್ಭಕ್ಕನುಗುಣವಾಗಿ ಪ್ಯಾಕೇಟ್ ಗಳ ಮೂಲಕ ಅಥವಾ ಸ್ಥಳೀಯ ಜಿಲ್ಲಾಡಳಿತ ನಿರ್ಧರಿಸಿದಂತೆ ಆಹಾರ ವಿತರಿಸಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ.
Click this button or press Ctrl+G to toggle between Kannada and English