ಆಳ್ವಾಸ್ ನುಡಿಸಿರಿಗೆ ಮೆರುಗು ತಂದ ನಾಡಿನ ವಿವಿಧ ಕಲಾ ತಂಡಗಳ ಆಕರ್ಷಕ ಮೆರವಣಿಗೆ

5:14 PM, Friday, November 16th, 2012
Share
1 Star2 Stars3 Stars4 Stars5 Stars
(5 rating, 5 votes)
Loading...

nudisiri meravaniಮೂಡುಬಿದಿರೆ :ಆಳ್ವಾಸ್ ನುಡಿಸಿರಿ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿಯ ಉದ್ಘಾಟನಾ ಸಮಾರಂಭಕ್ಕೂ ಮೊದಲು ನಡೆದ ನಾಡಿನ ಹಲವಾರು ಕಲಾ ತಂಡಗಳನ್ನೊಳಗೊಂಡ ಮೆರವಣಿಗೆಯು ವಿಶೇಷ ಮೆರುಗಿನಿಂದ ಕೂಡಿತ್ತು. ಆಳ್ವಾಸ್ ನುಡಿಸಿರಿ ಮೆರವಣಿಗೆಯಲ್ಲಿ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಒಟ್ಟು19 ಕಲಾ ತಂಡಗಳು ಭಾಗವಹಿಸಿ ಪ್ರದರ್ಶನ ನೀಡಿದವು .ವಿದ್ಯಾಗಿರಿಯ ಆವರಣದ ಪ್ರವೇಶದ್ವಾರದ ಬಳಿಯಿಂದ ಪ್ರಾರಂಭವಾದ ಮೆರವಣಿಗೆ ರತ್ನಾಕರವರ್ಣಿ ವೇದಿಕೆಯತ್ತ ಸಾಗಿ ವಿವಿಧ ಅತ್ಯಾಕರ್ಷಕ ಕಲಾಪ್ರಕಾರಗಳಿಗೆ ಸಾಕ್ಷಿಯಾಯಿತು. ಪ್ರತಿವರ್ಷದಂತೆ ಈ ಬಾರಿಯೂ ವಿವಿಧೆಡೆಗಳಿಂದ ಕಲಾಭಿಮಾನಿಗಳು ಸೇರಿದ್ದರು.

nudisiri meravaniರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕಲಾವಿದರು ವಿವಿಧ ರೀತಿಯ ಆಕರ್ಷಕ ಉಡುಗೆ ತೊಟ್ಟು ಗಮನ ಸೆಳೆದರು. ಕೇರಳ ಚೆಂಡೆ, ಹುಲಿವೇಷ, ನಂದಿಧ್ವಜ ಕುಣಿತ, ಶಂಖ, ಜಾಗಟೆ, ಕೊಂಬು, ಚೆಂಡೆ, ಸತ್ತಿಗೆ, ಕೊರಗರ ಡೋಲು, ಡೊಳ್ಳುಕುಣಿತ, ಪೂಕಾವಡಿ, ಪೂಜಾಕುಣಿತ, ಕೊರಗರ ಗಜಮೇಳ, ಕಲಶ, ಹೊನ್ನಾವರ ಬ್ಯಾಂಡ್ಸೆಟ್, ನವಿಲು ನೃತ್ಯ, ಸ್ಯಾಕ್ಸಫೋನ್, ಪಲ್ಲಕ್ಕಿ ಇನ್ನೂ ಹಲವು ಕಲಾಪ್ರಕಾರಗಳನ್ನು ಒಳಗೊಂಡ ಮೆರವಣಿಗೆ ಜನರ ಮನಸೂರೆಗೊಂಡಿತು.

nudisiri meravaniಸಮ್ಮೇಳನಾಧ್ಯಕ್ಷರಾದ ಪದ್ಮ ಶ್ರೀ ನಾಡೋಜ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಮತ್ತು ಅವರ ಗ್ರಂಥಗಳನ್ನು ಪಲ್ಲಕ್ಕಿಯಲ್ಲಿ ತರಲಾಯಿತು. ಆಳ್ವಾಸ್ ನುಡಿಸಿರಿಯ ಸಮಾರಂಭಕ್ಕೆ ದಕ್ಷಿಣ ಕನ್ನಡ. ಉಡುಪಿ, ಕೇರಳ ಮೊದಲಾದ ಕಡೆಗಳಿಂದ ಜನಸಾಗರವೇ ಹರಿದು ಬಂದಿತ್ತು.

nudisiri meravani

nudisiri meravani

nudisiri meravani

nudisiri meravani

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English