ಬೆಂಗಳೂರು : ವೈರಸ್ ನಿಯಂತ್ರಣದಲ್ಲಿ ಸ್ಯಾನಿಟೈಸರ್ಸ್ ಮತ್ತು ಮಾಸ್ಕ್ ಗಳ ಪಾತ್ರ ಗಣನೀಯವಾಗಿದ್ದು, ಇದೇ ಕಾರಣಕ್ಕೆ ಸ್ಯಾನಿಟೈಸರ್ಸ್ ಮತ್ತು ಮಾಸ್ಕ್ ಗಳ ತಯಾರಿಕಾ ಸಂಸ್ಥೆಗಳು ಇವುಗಳ ತಯಾರಿಕೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಮಾಡಿವೆ.
ಇದಾಗ್ಯೂ ದೇಶದಲ್ಲಿ ಸ್ಯಾನಿಟೈಸರ್ಸ್ ಮತ್ತು ಮಾಸ್ಕ್ ಗಳ ಗಣನೀಯ ಕೊರತೆ ಕಾಣುತ್ತಿದೆ. ಇದೇ ಕಾರಣಕ್ಕೆ ದೇಶದ ಜೈಲುಗಳಲ್ಲಿರುವ ಲಕ್ಷಾಂತರ ಖೈದಿಗಳು ಇದೀಗ ಸ್ಯಾನಿಟೈಸರ್ಸ್ ಮತ್ತು ಮಾಸ್ಕ್ ಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಖೈದಿಗಳಿಂದ ಪ್ರತಿನಿತ್ಯ 15 ಸಾವಿರ ಮಾಸ್ಕ್ ಗಳ ತಯಾರಿಸಲಾಗುತ್ತಿದೆ. ಹೋಮ್ ಮೇಡ್ ಸ್ಯಾನಿಟೈಸರ್ಸ್ ಗಳ ತಯಾರಿಕೆ ಕೂಡ ಗಣನೀಯವಾಗಿ ಹೆಚ್ಚಳವಾಗಿದೆ.
Click this button or press Ctrl+G to toggle between Kannada and English