ಸುಳ್ಯ : ಕುಕ್ಕೆ ಸುಬ್ರಹ್ಮಣ್ಯದ ಅರ್ಚಕ ಶ್ರೀನಿವಾಸ್ ಶನಿವಾರ ಸಂಜೆಯ ಪೂಜೆಗಾಗಿ ಆದಿ ಸುಬ್ರಹ್ಮಣ್ಯಕ್ಕೆ ದೇವಳದ ಕೀ ಸಹಿತ ತೆರಳುತ್ತಿದ್ದ ವೇಳೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಯ ಶಂಕರ್ ಎನ್ನುವ ಕಾನ್ಸ್ ಟೇಬಲ್ ಅವರು ದಾರಿಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಅರ್ಚಕರನ್ನು ಬೈಯ್ದದಲ್ಲದೆ , ಅರ್ಚಕರು ತಾನು ಸಂಜೆಯ ಪೂಜೆಗಾಗಿ ಆದಿ ಸುಬ್ರಹ್ಮಣ್ಯಕ್ಕೆ ತೆರಳುತ್ತ ಇರುವುದಾಗಿ ದೇವಳದ ಕೀಯನ್ನ ತೋರಿಸಿ ಹೇಳಿದರೂ ಬಿಡದ ಈ ಪೋಲೀಸ್ ಸಿಬ್ಬಂದಿ ಅರ್ಚಕರ ಮೇಲೆ ತನ್ನ ಕೈಯಲ್ಲಿದ್ದ ಕೋಲಿನಿಂದ ಬಾಸುಂಡೆ ಏಳುವಂತೆ ಹಲ್ಲೆ ನಡೆಸಿರುತ್ತಾರೆ. ಜಿಲ್ಲೆಯ ಖ್ಯಾತ ದೇವಳದ ಮುಖ್ಯ ಅರ್ಚಕರು ತನ್ನ ದೈನಂದಿನ ಪೂಜೆ ನಡೆಸಲು ತೆರಳುವಾಗಲೂ ಈ ರೀತಿ ಅಮಾನುಷವಾಗಿ ಹಲ್ಲೆಗೈದ ಈ ಪೋಲೀಸ್ ಸಿಬ್ಬಂದಿಸ್ಥಳೀಯರೇ ಆಗಿದ್ದು ಗುರುತು ಇದ್ದರೂ ಈ ರೀತಿ ವರ್ತಿಸಿರುವ ಘಟನೆಯನ್ನ ವಿಪ್ರಸಂಘಟನೆ ಉಗ್ರವಾಗಿ ಖಂಡಿಸಿದೆ.
ಅನ್ಯಾಯವಾಗಿ ಹಲ್ಲೆ ನಡೆಸಿದ ಪೋಲೀಸ್ ಸಿಬ್ಬಂದಿಯನ್ನ ತಕ್ಷಣವೇ ಅಮಾನತು ಮಾಡಬೇಕಾಗಿ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಯವರನ್ನ ಮತ್ತು ಜಿಲ್ಲಾಧಿಕಾರಿಯವರಲ್ಲಿ ವಿಪ್ರ ಪರಿವಾರ ಆಗ್ರಹಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಪೇದೆ ಅಮಾನತು : ಸುಬ್ರಮಣ್ಯ ಪೊಲೀಸ್ ಠಾಣೆಯ ಸಿಬ್ಬಂದಿ ಶಂಕರ್ ಸಂಸಿ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರೊರ್ವರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿಗಳು ವರದಿ ಪಡೆದು ಪರಿಶೀಲಿಸಿದ್ದು ಮೇಲ್ನೋಟಕ್ಕೆ ಸದರಿ ಸಿಬ್ಬಂದಿಯ ದುರುವರ್ತನೆ ಕಂಡುಬಂದಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಸದರಿ ಪೊಲೀಸ್ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿರುತ್ತಾರೆ.
Click this button or press Ctrl+G to toggle between Kannada and English