ಮಂಗಳೂರು : ಮಾರ್ಚ್ 30ರಿಂದ ಮನೆಗೆ ಬರುತ್ತೆ ದಿನಸಿ, ನಿಮ್ಮಅಪಾರ್ಟ್‌ಮೆಂಟ್‌ನಲ್ಲಿ ಅಗತ್ಯ ದಿನಸಿ ಚೀಟಿ ಅಂಟಿಸಿ

10:21 PM, Sunday, March 29th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Ajith Kumar Shanadyಮಂಗಳೂರು : ಮಾರ್ಚ್ 30  ರಿಂದ ನಗರದ 60 ವಾರ್ಡ್‌ನ ಮನೆಗಳಿಗೆ ದಿನಸಿ ಹಾಗೂ ತರಕಾರಿಯನ್ನು ಸರಬರಾಜು ಮಾಡಲು ಇಂದು ಮಂಗಳೂರು ಮಹಾ ನಗರ ಪಾಲಿಕೆಯಲ್ಲಿ ನಡೆದ ಸೂಪರ್‌ ಮಾರ್ಕೆಟ್‌, ದಿನಸಿ ಅಂಗಡಿ ಮಾಲಕರ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಸುಮಾರು 200 ಅಂಗಡಿಗಳ ಪಟ್ಟಿಯನ್ನು ಮಂಗಳೂರು ನಗರ ಪಾಲಿಕೆಯು ಬಿಡುಗಡೆ ಮಾಡಿದೆ.

ಮನಾಪದ ಆಯುಕ್ತ ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ ಮಾತನಾಡಿ ಅಪಾರ್ಟ್‌ಮೆಂಟ್‌ಗಳು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿರುವ ಎಲ್ಲಾ ಮನೆಗಳಿಗೆ ಬೇಕಾಗುವ ದಿನಸಿಯನ್ನು ಸಂಗ್ರಹ ಮಾಡಿ ಎಲ್ಲಾ ಮನೆಗಳಿಗೆ ಹಚ್ಚಬೇಕು. ಸೋಮವಾರದಿಂದ ಈ ಸರಬರಾಜು ಕಾರ್ಯ ಆರಂಭವಾಗಲಿದ್ದು ನಗರದ 60 ವಾರ್ಡ್‌ಗಳಿಗೆ ದಿನಸಿ ಸರಬರಾಜು ಮಾಡಲು 20 ಗುಂಪುಗಳನ್ನು ಮಾಡಲಾಗಿದೆ.

ಹಾಗೆಯೇ ಮನಪಾವು ನಗರದಲ್ಲಿರುವ ಬಡವರಿಗೆ, ಭಿಕ್ಷುಕರಿಗೆ ಹಾಗೂ ವಸತಿ ವ್ಯವಸ್ಥೆ ಇಲ್ಲದವರಿಗೆ ಆಹಾರ ಸರಬರಾಜು ಮಾಡುವ ನಿರ್ಧಾರವನ್ನೂ ಕೈಗೊಂಡಿದೆ.

ಈ ಕುರಿತಾಗಿ ಮಾತನಾಡಿದ ಮಂಗಳೂರು ನಗರ ಪಾಲಿಕೆಯ ಆಯುಕ್ತ ಶಾನಾಡಿ ಅಜಿತ್‌ ಕುಮಾರ್‌ ಹೆಗಡೆ, ರಸ್ತೆಯಲ್ಲೇ ಇರುವ ಹಲವು ಬಡ ಜನರಿಗೆ, ಭಿಕ್ಷುಕರಿಗೆ ಈಗ ಆಹಾರವಿಲ್ಲ. ಹಲವು ಸಂಘ ಸಂಸ್ಥೆಗಳು ಹಾಗೂ ಎನ್‌ಜಿಒ ಗಳು ನಮ್ಮೊಂದಿಗೆ ಕೈಜೋಡಿಸಲು ಮುಂದಾಗಿದೆ. ಹಾಗಾಗಿ ದಾನಿಗಳು ಹಾಗೂ ಸಂಘ, ಸಂಸ್ಥೆಗಳ ಸಹಕಾರದೊಂದಿಗೆ ನಾವು ಬಡವರಿಗೆ, ಭಿಕ್ಷುಕರಿಗೆ ಆಹಾರ ಸರಬರಾಜು ಮಾಡಲು ನಿರ್ಧಾರ ಮಾಡಿದ್ದೇವೆ. ಹಾಗೆಯೇ ನಾವು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ದಿನೇಶ್‌ ಕುಮಾರ್‌ ನೇತೃತ್ವದಲ್ಲಿ ಕೊರೊನಾ ಸಹಾಯವಾಣಿ ಕೇಂದ್ರವನ್ನು ಸ್ಥಾಪನೆ ಮಾಡಿದ್ದೇವೆ.

ದಿನಸಿ ಮೊದಲಾದ ಅಗತ್ಯ ವಸ್ತುಗಳನ್ನು ನೀಡಲು ಮುಂದಾಗುವವರು ಮನಪಾವನ್ನು ಸಂಪರ್ಕ ಮಾಡಬಹುದು. ಹಾಗೆಯೇ ಹೋಲ್‌ಸೇಲ್‌ ಉದ್ಯಮಿಗಳು ಕೂಡಾ ವಸ್ತುಗಳನ್ನು ನೀಡಬಹುದು. 20 ಗುಂಪುಗಳ ಮೂಲಕ ಅಗತ್ಯ ವಸ್ತುಗಳನ್ನು ಬಡವರಿಗೆ ಸರಬರಾಜು ಮಾಡುತ್ತೇವೆ. ಪ್ರತಿ ಗುಂಪು ಮೊದಲು ಅವರ ವಾರ್ಡ್‌‌ನಲ್ಲಿ ಸರಬರಾಜು ಮಾಡಿ ಆ ಬಳಿಕ ಇತರ ಪ್ರದೇಶಗಳಲ್ಲಿ ಸರಬರಾಜು ಮಾಡಲು ಪ್ರಯತ್ನಿಸುತ್ತಾರೆ ಎಂದು ತಿಳಿಸಿದ್ದಾರೆ.

image description

1 ಪ್ರತಿಕ್ರಿಯೆ - ಶೀರ್ಷಿಕೆ - ಮಂಗಳೂರು : ಮಾರ್ಚ್ 30ರಿಂದ ಮನೆಗೆ ಬರುತ್ತೆ ದಿನಸಿ, ನಿಮ್ಮಅಪಾರ್ಟ್‌ಮೆಂಟ್‌ನಲ್ಲಿ ಅಗತ್ಯ ದಿನಸಿ ಚೀಟಿ ಅಂಟಿಸಿ

  1. Needu, Mangalore%20%20hoigebazar

    ದಿನ nithya Kelsa madi jeevana nadesuvavara kasta hege yendhu nimage thilidirabahudhu namatgavara dinadha agathyagalu ಅಂದರೆ ahara padarthagalu siguvanthe madabeku ಈ rithi edali kelavarige siguthe ಈ rithiya ahara siguva veshaya kelavrige sigalla adha karana yelarigu ಸಿಗುತ್ಯೇ sikitha yembha vechara nivu kanukanisabeku edhe nana korikke…..dhanyavadhagalu …..,

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English