ಮಂಗಳೂರು: ಮಂಗಳವಾರ ಜನತೆ ಅಗತ್ಯ ವಸ್ತು ಖರೀದಿಗೆ ಕೊರೋನಾ ವೈರಸ್ ಹರಡುವಿಕೆಯ ನಿಯಮ ಪಾಲಿಸದೇ, ಅಂತರ ಕಾಯ್ದುಕೊಳ್ಳದೆ ಕೇಂದ್ರ ಮಾರುಕಟ್ಟೆಯಲ್ಲಿ ಮುಗಿಬಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ದಿನಗಳ ಸಂಪೂರ್ಣ ಬಂದ್ ನಂತರ ಮಂಗಳವಾರ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಿದ್ದುದರ, ಪರಿಣಾಮ ಮಂಗಳವಾರ ಬೆಳ್ಳಂಬೆಳಗ್ಗೆ ಮನೆಯಿಂದ ಭಾರೀ ಸಂಖ್ಯೆಯಲ್ಲಿ ಜನರು ಹೊರಬರುತ್ತಿದ್ದಾರೆ. ದಿನಸಿ, ತರಕಾರಿ ಅಂಗಡಿಗಳ ಮುಂದೆ ಜನರು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡುಬಂದಿದೆ.
ಮಂಗಳೂರಿನ ಕೇಂದ್ರ ಮಾರುಕಟ್ಟೆ, ಮಲ್ಲಿಕಟ್ಟೆ ಮಾರ್ಕೆಟ್ ನಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ದಿನಸಿ ಸಾಮಗ್ರಿಗಳ, ಜೊತೆಗೆ ಮಾಂಸವನ್ನು ಖರೀದಿಸಲು ಮುಂದಾಗಿದ್ದರು. ಇದರಿಂದಾಗಿ ಭಾರೀ ಸಂಖ್ಯೆಯ ವಾಹನ ದಟ್ಟಣೆ ಮಂಗಳೂರು ನಗದರದೊಳಗೆ ಇಂದು ಬೆಳಗ್ಗ ಇತ್ತು.
Click this button or press Ctrl+G to toggle between Kannada and English