ವಾರ್ ರೂಮ್ ನಲ್ಲಿ ಫುಡ್ ಕಿಟ್ ಇಲ್ಲ, ಫೋನಲ್ಲಿ ಆರ್ಡರ್ ಮಾಡಿದರೆ ಊಟ ಮಾತ್ರ

12:46 AM, Wednesday, April 1st, 2020
Share
1 Star2 Stars3 Stars4 Stars5 Stars
(No Ratings Yet)
Loading...

Foodkitಮಂಗಳೂರು : ಕೇವಲ ದಿನಸಿ ಅಂಗಡಿಗಳು ತೆರೆದರೆ, ಖರೀದಿಗೆ ಬರುವವರಲ್ಲಿ ದುಡ್ಡು ಎಲ್ಲಿಂದ ಬರುತ್ತದೆ. ಮಧ್ಯಮ ವರ್ಗದ ಇತರ ವ್ಯಾಪಾರಿಗಳು, ಸಣ್ಣ ಉದ್ಯಮದ ಮಾಲೀಕರು ದುಡ್ಡು ಎಲ್ಲಿಂದ ತರಬೇಕು. ದಿನಸಿ ವ್ಯಾಪಾರಿಗಳು ಭರ್ಜರಿ ಹಣ ಮಾಡುತ್ತಾರೆ. ಅತ್ತ ನಳಿನ್ ಕುಮಾರ್ ಕಟೀಲ್ ರವರ ವಾರ್ ರೂಮ್ ನಲ್ಲಿ ಒಂದು ತಿಂಗಳ ಆಹಾರ ಪೊಟ್ಟಣ ಘೋಷಿಸಿದ ದಿನವೇ ಖಾಲಿಯಾಗಿದೆ. ಅಲ್ಲಿನ ಸಿಬ್ಬಂದಿಗಳಲ್ಲಿ ಕೇಳಿದರೆ ಆಹಾರ ಪೊಟ್ಟಣ ಇಲ್ಲ.ನೀವು ಊಟ ಬೇಕಾದರೆ ಫೋನಲ್ಲಿ ಆರ್ಡರ್ ಮಾಡಿ ನಾವು ಮಧ್ಯಾಹ್ನ ಮತ್ತು ರಾತ್ರಿ ಮನೆಗೆ ತಲುಪಿಸುತ್ತೇವೆ ಎನ್ನುತ್ತಾರೆ ಎಂದು ಹೇಳಿದ್ದಾರೆ.

ರಾಜ್ಯ ಅಥವಾ ಕೇಂದ್ರ ಸರಕಾರ ಆದಾಯವಿಲ್ಲದ ವ್ಯಾಪಾರಸ್ಥರ, ಸಂಬಳ ಸಿಗದ ಉದ್ಯೋಗಿಗಳ ಖಾತೆಗೆ ಲಾಕ್ ಡೌನ್ ಮುಗಿಯುವ ವರೆಗೆ ಖಾತೆಗೆ ಕನಿಷ್ಠ ಹದಿನೈದು ಸಾವಿರ ಹಾಕಿದಲ್ಲಿಕುಟುಂಬದ ಎಲ್ಲರೂ ಸ್ವಲ್ಪಮಟ್ಟಿಗಾದರೂ ನಿಟ್ಟುಸಿರು ಬಿಡಬಹುದು. ಇನ್ನು ಕರ್ನಾಟಕದಲ್ಲಿ ಪ್ರಸ್ತುತ ಸೋಂಕಿತರ ಸಂಖ್ಯೆ 101ಕ್ಕೆ ಏರಿಕೆಯಾಗಿದ್ದು, ಗರ್ಭಿಣಿ ಸೇರಿ 88 ಮಂದಿಗೆ ಐಸೋಲೇಷನ್ ವಾರ್ಡ್ ನಲ್ಲಿ ಇಬ್ಬರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಒಂದೇ ದಿನ ರಾಜ್ಯದಲ್ಲಿ 43 ಶಂಕಿತರು ಪತ್ತೆಯಾಗಿದ್ದು, 37,261 ಸೋಂಕಿತರ  ಕ್ವಾರಂಟೈನ್ ಪೂರ್ಣಗೊಂಡಿದೆ. ಇನ್ನು 25,382 ಮಂದಿ ಹೋಮ್ ಕ್ವಾರಂಟೇನ್‍ನಲ್ಲಿ ಇದ್ದು, ಇವರೆಲ್ಲರ ಕೈಗೆ ಸೀಲ್ ಹಾಕಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಮಂಗಳವಾರ ಮತ್ತೊಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಕೇಂದ್ರ ಮಾರುಕಟ್ಟೆಯಲ್ಲಿ ಜನತೆ ಅಗತ್ಯ ವಸ್ತು ಖರೀದಿಗೆ ಕೊರೋನಾ ವೈರಸ್ ಹರಡುವಿಕೆಯ ನಿಯಮ ಪಾಲಿಸದೇ, ಅಂತರ ಕಾಯ್ದುಕೊಳ್ಳದೆ ಕುರಿ ಮಂದೆಯಂತೆ ಮುಗಿ ಬೀಳುತ್ತಿದ್ದರು.

 

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English