ಮಂಗಳೂರು : ಎಪ್ರಿಲ್ 2ರಂದು ಮರ್ಯಾದ ಪುರುಷೋತ್ತಮ ಪ್ರಭು ಶ್ರೀ ರಾಮಚಂದ್ರನ ಜನ್ಮ ದಿನವಾದ ರಾಮನವಮಿಯಂದು ತಮ್ಮ ತಮ್ಮ ಮನೆಗಳಲ್ಲಿ ಮನೆಯವರೆಲ್ಲರೂ ಸೇರಿ ದೀಪಾಲಂಕಾರದೊಂದಿಗೆ ಸಂಜೆ 7 ಘಂಟೆಗೆ “ಶ್ರೀ ರಾಮ ಜಯ ರಾಮ ಜಯ ಜಯ ರಾಮ” ಎಂಬ ವಿಜಯ ಮಹಾಮಂತ್ರವನ್ನು 108 ಬಾರಿ ಜಪಿಸಿ, ಶ್ರೀ ರಾಮನವಮಿಯವನ್ನು ಆಚರಿಸಲು ಪೂಜ್ಯ ಸಾಧು ಸಂತರು ವಿಶ್ವಹಿಂದೂ ಪರಿಷತ್ ಮುಖಾಂತರ ಕರೆ ನೀಡಿದ್ದಾರೆ.
ಅಂದು ಶ್ರೀರಾಮನ ಭಾವಚಿತ್ರದ ಮುಂದೆ ಕುಳಿತು ಭಜನೆಯೊಂದಿಗೆ ವಿಜಯ ಮಹಾಮಂತ್ರವನ್ನು ಪಠಿಸುವುದರ ಮೂಲಕ ವಿಶ್ವದಲ್ಲಿ ಪಸರಿಸಿರುವ ಕೊರೋನ ಮಹಾ ರೋಗ ಭೀತಿಯಿಂದ ಮುಕ್ತಗೊಳಿಸಿ ಸರ್ವರಿಗೂ ಸುಖಶಾಂತಿ ಯನ್ನು ಕರುಣಿಸುವಂತೆ ಶ್ರೀದೇವರಲ್ಲಿ ಪ್ರಾರ್ಥಿಸುವಂತೆ ವಿಶ್ವ ಹಿಂದು ಪರಿಷತ್ ಸಮಸ್ತ ಹಿಂದು ಬಂಧುಗಳಲ್ಲಿ ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದೆ.
Click this button or press Ctrl+G to toggle between Kannada and English