`ವಿದ್ಯಾರ್ಥಿ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರ ಪಾತ್ರ’ ಕಾರ್ಯಗಾರ

4:36 PM, Monday, September 27th, 2010
Share
1 Star2 Stars3 Stars4 Stars5 Stars
(No Ratings Yet)
Loading...

ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರ ಪಾತ್ರ ಕಾರ್ಯಗಾರಮಂಗಳೂರು: ರಾಮಕೃಷ್ಣ ಮಠದ, ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಸೆಪ್ಟಂಬರ್ 27 ರಿಂದ 28 ರ ವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಯುವ ಶಿಕ್ಷಕರ ಕಾರ್ಯಗಾರವನ್ನು ಡಾ. ವಿಶ್ವನಾಥ್ ಉದ್ಘಾಟಿಸಿದರು.
ಉದ್ಘಾಟನಾ ಬಳಿಕ ಮಾತನಾಡಿದ ಅವರು ದೇಶದ ಪ್ರಗತಿ ಆಗಬೇಕಿರುವುದು ಶಿಕ್ಷಕರಿಂದಲೇ ಅದಕ್ಕಾಗಿ ಇಂದಿನಿಂದಲೇ ತಯಾರಿ ಹೊಂದಬೇಕು. ಕೇವಲ ಮಾತೃ ಭಾಷೆಯಲ್ಲಿ ಮಾತ್ರ ಪಾಂಡಿತ್ಯ ಹೊಂದದೆ ಇತರ ಭಾಷೆಗಳಲ್ಲಿಯೂ ಹಿಡಿತವನ್ನು ಹೊಂದಿ ಯಾವುದೇ ಸನ್ನಿವೇಶಗಳನ್ನು ಎದುರಿಸುವ ಮನೋಭಾವ ಹೊಂದಿರಬೇಕು ಎಂದು ಅವರು ಹೇಳಿದರು.

ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರ ಪಾತ್ರ' ಕಾರ್ಯಗಾರ
ಸ್ವಾಮಿ ಜಿತಕಾಮಾನಂದಜೀಯವರು `ಉತ್ತಮ ಶಿಕ್ಷಕ’ ಎನ್ನುವ ವಿಷಯದಲ್ಲಿ ವಿಚಾರಗೋಷ್ಠಿಯನ್ನು ನಡೆಸಿದರು. ಧನಾತ್ಮಕ ಚಿಂತನೆಗಳಿಂದ ಶಿಕ್ಷಕ ಉತ್ತಮ ಭೋದಕನಾಗಲು ಸಾಧ್ಯ, ಶಿಕ್ಷಕ ವೃತ್ತಿಯಲ್ಲಿರುವವರು ತಾನು ಶಿಕ್ಷಕ ಎಂದು ಹೇಳಿಕೊಳ್ಳಲು ಹೆಮ್ಮೆ ಪಡಬೇಕು, ಶಿಕ್ಷಕ ಎಂಬ ಕೀಳರಿಮೆ ಇರಬಾರದು ಎಂದು ಸ್ವಾಮಿ ಜಿತಕಾಮಾನಂದಜೀಯವರು ಹೇಳಿದರು.

ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರ ಪಾತ್ರ' ಕಾರ್ಯಗಾರ
ವ್ಯಕ್ತಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾನೆ ಎನ್ನುವುದು ಮುಖ್ಯವಲ್ಲ, ಆತ ಅಲಂಕರಿಸಿದ ಆ ಹುದ್ದೆ ಅವನು ಪಡೆದ ಶಿಕ್ಷಣದಿಂದ ಎನ್ನುವ ನೆನಪು ಆತನಿಗಿರಬೇಕು. ವ್ಯಕ್ತಿಯ ವ್ಯಕ್ತಿತ್ವವನ್ನು ಹೊರ ತರುವುದು ಶಿಕ್ಷಕರ ಧರ್ಮ, ಶಿಕ್ಷಕ ವೃತ್ತಿ ಪವಿತ್ರವಾದುದು ಇದನ್ನು ಗೌರವಿಸಬೇಕು ಎಂದು ಅವರು ಹೇಳಿದರು.

ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರ ಪಾತ್ರ' ಕಾರ್ಯಗಾರ
ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಯಲಿದೆ, ಇಂದು ಮಧ್ಯಾಹ್ನ ನಡೆಯುವ ವಿಚಾರಗೋಷ್ಠಿಯಲ್ಲಿ ವಿಶ್ವನಾಥ್ ಮಾತನಾಡಲಿದ್ದಾರೆ, ಸಂಜೆ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ನಡೆಯಲಿದೆ, ಸುಜೀರ್ ಪ್ರಭಾಕರ್ ಪುಸ್ತಕ ವಿತರಣೆ ನೆರವೇರಿಸಲಿದ್ದಾರೆ ಎಂದು ಮಠದ ಪ್ರಕಟನೆ ತಿಳಿಸಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English