ಕೊರೋನಾ ಹಾವಳಿ – ಜನನಿಬಿಡ ಪ್ರದೇಶಗಳಲ್ಲಿ ಇದೀಗ ಜಾನುವಾರು, ನವಿಲುಗಳು

10:56 PM, Thursday, April 2nd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

mumbai(ವರದಿ : ಈಶ್ವರ ಎಂ. ಐಲ್ ) ಮುಂಬಯಿ : ಕೊರೋನಾದಿಂದಾಗಿ ಲಾಕ್ ಡೌನ್ ಘೋಷಣೆಯಾಗಿದ್ದರೂ ಮುಂಬಯಿ ಪರಿಸರದಲ್ಲಿ ಹೊರಗೆ ಹೋಗುತ್ತಿರುವ ಡಾಕ್ಟರ್ ಗಳು, ನರ್ಶ್ ಗಳು, ಪೋಲೀಸರು ಮಾತ್ರವಲ್ಲದ ಅಗತ್ಯ ಸಾಮಾನುಗಳನ್ನು ಪೂರೈಸುವ ಜನರು ಹಾಗೂ ಕೆಲವು ಸರಕಾರಿ ನೌಕರರುಗಳು ಮಾತ್ರ ಕಾಣಬಹುದು.

ಆದರೆ ಮನೆಯಲ್ಲಿನ ದೈನಂದಿನ ಉಪಯೋಗಿಸುವ ಸಾಮಾಗ್ರಿಗಳು ಈಗಾಗಲೇ ಮುಗಿದಿದ್ದು ಕೆಲವರು ಮಾರು ಕಟ್ಟೆಗೆ ಹೋಗಲೇ ಬೆಕಾಗಿದ್ದು ಮುಂಬಯಿಯ ಕೆಲವು ತರಕಾರಿ ಮಾರುಕಟ್ಟೆಗಳು ಕೆಲವೊಮ್ಮೆ ತೆರೆದಿಟ್ಟಲ್ಲಿ ಜನರು ಅಂತರವನ್ನು ಲೆಕ್ಕಿಸದೆ ಒಂದೆಡೆ ಸೇರಿ ಖರೀದಿಸುದನ್ನು ಕಾಣಬಹುದು. ಸ್ವಲ್ಪ ಸಮಯದ ನಂತರ ಪೋಲೀಸರು ನಿಯಂತ್ರಣ ಗೊಳಿಸಬೇಕಾಗುತ್ತದೆ.

ಮಹಾನಗರದ ಬೋರಿವಲ್ಲಿ ಪೂರ್ವದ ಪ್ರಸಿದ್ದ ನೇಷನಲ್ ಪಾರ್ಕ ಹೆಚ್ಚಿನ ದಿನಗಳಲ್ಲಿ ಜನರಿಂದ ತುಂಬಿಕೊಂಡಿರುತ್ತಿದ್ದು ಇದೀಗ ಜನರಿಲ್ಲದೆ ಪ್ರಾಣಿಗಳು ಅಲ್ಲಿ ತಿರುಗಾಡುತ್ತಿದೆ.

ಇದಲ್ಲದೆ ಮಹಾನಗರದ ಇತರ ಕೆಲವೆಡೆ ರಸ್ತೆಗಳಲ್ಲಿ ಹಾಗೂ ವಾಹನಗಳ ಮೇಲೆ ನವಿಲುಗಳು ತಮ್ಮ ಸಮಯವನ್ನು ಕಳೆಯುತ್ತಿರುದನ್ನು ಕಾಣಬಹುದು.

mumbai

Mumbai

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English