ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ತುರ್ತು ನೇಮಕಾತಿ, ಅರ್ಜಿ ಆಹ್ವಾನ

4:32 PM, Friday, April 3rd, 2020
Share
1 Star2 Stars3 Stars4 Stars5 Stars
(No Ratings Yet)
Loading...

health jobsಮಂಗಳೂರು : ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರಕರಣಗಳನ್ನು ಸಮರ್ಪಕವಾಗಿ ನಿಭಾಯಿಸಲು ವೈದ್ಯಕೀಯ ಸೇವೆಗಳನ್ನು ಒದಗಿಸಲು ಅಗತ್ಯವಿರುವ ಈ ಕೆಳಗೆ ನಮೂದಿಸಿದ ಹುದ್ದೆಗಳನ್ನು ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ತಾತ್ಕಾಲಿಕವಾಗಿ 6 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ಏಪ್ರಿಲ್07 ರಂದು ಬೆಳಿಗ್ಗೆ 10.00 ಗಂಟೆಗೆ ಮಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಇಲ್ಲಿ ನೇರ ಸಂದರ್ಶನಕ್ಕೆ ನಡೆಯಲಿದೆ.

ಹುದ್ದೆಯ ವಿವರ ಇಂತಿವೆ :- ವೈದ್ಯರು/ತಜ್ಞರು – 10 ಹುದ್ದೆಗಳು ವೇತನ ; 60 ಸಾವಿರ, ವಿದ್ಯಾರ್ಹತೆ ; MBBS/ ಯಾವುದೆ ತಜ್ಞತೆ (ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಆಗಿರಬೇಕು), ಶುಶ್ರೂಷಕರು – 20 ಹುದ್ದೆಗಳು ವೇತನ ; 20 ಸಾವಿರ, ವಿದ್ಯಾರ್ಹತೆ ; ಕರ್ನಾಟಕ ಸರ್ಕಾರದಿಂದ ನೋಂದಾಯಿತ ಸಂಸ್ಥೆಗಳಿಂದ GNM/ BSC Nursing ಪದವಿ ಪಡೆದಿರಬೇಕು, ಪ್ರಯೋಗ ಶಾಲಾ ತಜ್ಞರು – 5 ಹುದ್ದೆಗಳು ವೇತನ ; 15 ಸಾವಿರ, ವಿದ್ಯಾರ್ಹತೆ; ಕರ್ನಾಟಕ ಅರೆವೈದ್ಯಕೀಯ ಮಂಡಳಿಯಿಂದ 2 ಅಥವಾ 3 ವರ್ಷಗಳ ಕಿ.ವೈ.ಪ್ರ.ಶಾ ತಂತ್ರಜ್ಞರ ತರಬೇತಿ (DLMT) ತೇರ್ಗಡೆ ಹೊಂದಿದ ಪ್ರಮಾಣ ಪತ್ರ ಪಡೆದಿರಬೇಕು, ಗ್ರೂಪ್ ಡಿ – 10 ಹುದ್ದೆಗಳು ವೇತನ ; 12 ಸಾವಿರ, ವಿದ್ಯಾರ್ಹತೆ : SSLC ತೇರ್ಗಡೆಯಾಗಿರಬೇಕು.
ಅರ್ಜಿ ಸಲ್ಲಿಸಲು ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲಾ ಅಂಕಪಟ್ಟಿಗಳ ಮೂಲ ಪ್ರತಿಗಳು ಹೊಂದಿರಬೇಕು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಮಂಗಳೂರು ಅಥವಾ ದೂರವಾಣಿ ಸಂಖ್ಯೆ : 0824-2423672 ಸಂಪರ್ಕಿಸಿ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English