ಪಾನೀರು ಚಚ್೯ ಬಾಗಿಲು ಮುರಿದು 10 ಕಾಣಿಕೆ ಡಬ್ಬಿಗಳ ಕಳವು

11:01 PM, Friday, April 3rd, 2020
Share
1 Star2 Stars3 Stars4 Stars5 Stars
(No Ratings Yet)
Loading...

church lootiಮಂಗಳೂರು  :  ಪಾನೀರು ಲೇಡಿ ಆಫ್ ಮರ್ಸಿ ಚರ್ಚಿನಲ್ಲಿ ಚಚ್೯ ಬಾಗಿಲು ಮುರಿದು ಕಾಣಿಕೆ ಡಬ್ಬಿಗಳ ಕಳವು ನಡೆಸಿದ ಕಳ್ಳರು ಲಾಕರ್ ಒಡೆದು, ಕಾಣಿಕೆ ಹಣವನ್ನು ದೋಚಿ 10 ಕ್ಕೂ ಅಧಿಕ ಖಾಣಿಕೆ ಡಬ್ಬಿಗಳನ್ನು ಕಳವುಗೈದಿದ್ದಾರೆ .

ಕೊಣಾಜೆ ಠಾಣಾ ವ್ಯಾಪ್ತಿಯ ನಿತ್ಯಾನಂದನಗರ ಎಂಎಸ್‌ಐಎಲ್ ವೈನ್ಸ್‌ಗೆ ನುಗ್ಗಿದ ಕಳ್ಳರು, ಪಾನೀರು ಚರ್ಚಿನಲ್ಲಿಯೂ ಕಳವು ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಪಾನೀರು ಅವರ್ ಲೇಡಿ ಆಫ್ ಮರ್ಸಿ ಚರ್ಚಿನ ಎದುರು ಭಾಗದ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಪರಮ ಪ್ರಸಾದ ಇರಿಸಿದ ಲಾಕರ್ ಮುರಿದಿದ್ದಾರೆ.

ಸ್ಥಳಕ್ಕೆ ಉಳ್ಳಾಲ ಠಾಣಾಧಿಕಾರಿ ಅನಿಲ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Paneer Church

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English