ನವದೆಹಲಿ : ಆರೋಗ್ಯವಂತರೂ ಮಾಸ್ಕ್ ಧರಿಸಬೇಕು ಎನ್ನುವ ಸೂಚನೆಯನ್ನು ಆರೋಗ್ಯ ಸಚಿವಾಲಯ ಹೊರಡಿಸಿದೆ.
ಮನೆಯಲ್ಲಿ ಮಾಡಲ್ಪಟ್ಟ (ಬೇಸಿಕ್), ಉಸಿರಾಟಕ್ಕೆ ಯೋಗ್ಯವಾಗುವಂತೆ ತಯಾರಿಸಿದ ಮಾಸ್ಕ್ ಅನ್ನು ಸೋಂಕಿನ ಲಕ್ಷಣಗಳಿಲ್ಲದ, ಆರೋಗ್ಯವಂತ ಜನರೂ ಧರಿಸಬೇಕು ಎಂದು ತಿಳಿಸಿದೆ.
ಆದರೆ, ಇಂಥ ಗೃಹ ನಿರ್ಮಿತ ಮಾಸ್ಕ್ ಗಳನ್ನು ಕೋವಿಡ್ 19 ವೈರಸ್ ಸೋಂಕಿತರು, ವೈದ್ಯಕೀಯ ಸೇವೆಯಲ್ಲಿರುವವರು ಧರಿಸುವಂತಿಲ್ಲ. ಅವರು ಪಿಪಿಇ ಸುರಕ್ಷಾ ಉಡುಪಿನೊಂದಿಗೆ, ಎನ್- 95 ಮಾಸ್ಕ್ ಅನ್ನು ಧರಿಸಿ, ಸುರಕ್ಷಾ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯ ಎಂದು ಸಚಿವಾಲಯ ಹೇಳಿದೆ.
ಗೃಹ ನಿರ್ಮಿತ, ಬಟ್ಟೆಯಿಂದ ತಯಾರಿ ಸಲ್ಪಟ್ಟ, ಉಸಿರಾಟಕ್ಕೆ ಕಿರಿಕಿರಿ ನೀಡದಂಥ 2 ಮಾಸ್ಕ್ ಗಳನ್ನು ಹೊಂದಿರಬೇಕು. ಮಾಸ್ಕ್ ಅನ್ನು ಮುಟ್ಟುವ ಮುನ್ನ, ಕೈಗಳನ್ನು ಚೆನ್ನಾಗಿ ಸೋಪಿನಿಂದ ತೊಳೆದಿರಬೇಕು. ಸೋಪನ್ನು ಬಳಸಿ, ಬಿಸಿನೀರಿನಲ್ಲಿ ಮಾಸ್ಕ್ ಅನ್ನು ತೊಳೆಯಬೇಕು. ಮೂಗು ಮತ್ತು ಬಾಯಿಯನ್ನು ಮರೆಮಾಡುವ ಇಂಥ ಮಾಸ್ಕ್ ಗಳು, ಸರಳವಾಗಿ ಕಟ್ಟುವಂತಿರಬೇಕು. ಒಬ್ಬರ ಮಾಸ್ಕ್ ಅನ್ನು ಇನ್ನೊಬ್ಬರು ಧರಿಸುವುದು ನಿಷಿದ್ಧ. ಕುಟುಂಬದ ಪ್ರತಿಯೊಬ್ಬರೂ ತಮ್ಮದೇ ಮಾಸ್ಕ್ ಅನ್ನು ಹೊಂದಿರುವುದು ಕಡ್ಡಾಯ.
Click this button or press Ctrl+G to toggle between Kannada and English