ಯುವಕರಿಗಾಗಿ ವೆಂಟಿಲೇಟರ್ ಬಿಟ್ಟುಕೊಟ್ಟು ಪ್ರಾಣ ಬಿಟ್ಟ 90 ವರ್ಷದ ಅಜ್ಜಿ

8:23 PM, Sunday, April 5th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

corona90ಬೆಲ್ಜಿಯಂ : ಕೊರೋನಾ ವೈರಸ್  ಬಳಲುತ್ತಿದ್ದ ವೃದ್ಧೆಯೊಬ್ಬರು ಕೊರೋನಾದಿಂದ ಬಳಲುತ್ತಿದ್ದ ಯುವಕರಿಗಾಗಿ ವೆಂಟಿಲೇಟರ್ ಬಿಟ್ಟುಕೊಂಡು ಪ್ರಾಣ ಬಿಟ್ಟು ಅಪೂರ್ವ ತ್ಯಾಗ ಮೆರೆದಿರುವ ಘಟನೆ ಬೆಲ್ಜಿಯಂನಲ್ಲಿ ನಡೆದಿದೆ.

ಐಸೋಲೇಷನ್ ವಾರ್ಡ್ ನಲ್ಲಿ 90 ವರ್ಷದ ವೃದ್ಧೆಯೊಬ್ಬರು, ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಆಕೆಗೆ ವೆಂಟಿಲೇಟರ್ ಅಳವಡಿಸಲು ಮುಂದಾಗಿದ್ದಾರೆ. ಇದನ್ನು ಕಂಡ ವೃದ್ದೆ ನನಗೆ ವೆಂಟಿಲೇಟರ್ ಬಳಸುವುದು ಬೇಡ. ನಾನು ಈಗಾಗಲೇ ಅತ್ಯುತ್ತಮ ಜೀವನ ಅನುಭವಿಸಿದ್ದೇನೆ. ದೇಶದ ಯುವ ಕೊರೋನಾ ಪೀಡಿತರಿಗೆ ವೆಂಟಿಲೇಟರ್ ಬಳಸಿ ಎಂದು ಹೇಳಿದ್ದಾರೆ.

ನನಗೆ ಕೃತಕ ಉಸಿರಾಟ ಕಲ್ಪಿಸುವ ವೆಂಟಿಲೇಟರ್ ಬಳಕೆ ಬೇಡ. ನನ್ನ ಬದಲಿಗೆ ಯುವ ಕೊರೋನಾ ರೋಗಿಗಳಿಗೆ ಬಳಕೆ ಮಾಡಿ ಎಂದು ವೈದ್ಯರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದಾದ ಕೆಲವೇ ಗಂಟೆಗಳ ಬಳಿಕ ಅಜ್ಜಿ ಕೊನೆಯುಸಿರೆಳೆದಿದ್ದಾರೆ. ಅಜ್ಜಿಯ ಈ ಅಪೂರ್ವ ತ್ಯಾಗಕ್ಕೆ ವಿಶ್ವದಾದ್ಯಂತ ಭಾರೀ ಪ್ರಶಂಸೆಗಳು ವ್ಯಕ್ತವಾಗತೊಡಗಿವೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English