ದ.ಕ. ಜಿಲ್ಲೆಯ ಮೊದಲ ಕೊರೊನಾ ಪ್ರಕರಣದ ಯುವಕ, ಡಿಸ್ಚಾರ್ಜ್ ಆಗಿ ಮನೆಗೆ  

10:44 PM, Monday, April 6th, 2020
Share
1 Star2 Stars3 Stars4 Stars5 Stars
(No Ratings Yet)
Loading...

Corona ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಪ್ರಥಮ ಕರೋನಾ ಪ್ರಕರಣ ವರದಿಯಾಗಿದ್ದ ಭಟ್ಕಳದ ಯುವಕ ಸಂಪೂರ್ಣಗುಣಮುಖನಾಗಿ ಸೋಮವಾರ ಮುಂಜಾನೆ ತನ್ನ ಊರಿಗೆ ತೆರಳಿದರು.

ವಿದೇಶದಲ್ಲಿ ಉದ್ಯೋಗದಲ್ಲಿದ್ದ ಈ ಯುವಕನು ಮಾರ್ಚ್ 19 ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದನು. ಅಲ್ಲಿತಪಾಸಣೆ ಸಂದರ್ಭರೋಗ ಲಕ್ಷಣಗಳಿರುವುದು ಪತ್ತೆಯಾದ ಹಿನ್ನೆಲೆಯಲ್ಲಿಅಲ್ಲಿಂದಲೇ ಆಂಬುಲೆನ್ಸ್  ನಲ್ಲಿ  ವೆನ್‌ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯುವಕನ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿ, ಮಾ.22 ರಂದು ಕರೋನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು.

ಬಳಿಕ ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಪ್ರತ್ಯೇಕ ಐಸೋಲೇಷನ್ ವಾರ್ಡ್ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ನಂತರ ವ್ಯಕ್ತಿಯ ಆರೋಗ್ಯದಲ್ಲಿ ದಿನೇದಿನೇ ಚೇತರಿಕೆ ಕಂಡುಬಂದಿದ್ದು , ಸಂಪೂರ್ಣ ಗುಣಮುಖನಾಗಿ ಸೋಮವಾರ ಬೆಳಿಗ್ಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ, ಭಟ್ಕಳಕ್ಕೆ ತೆರಳಿದ ಯುವಕನು, ಸದ್ಯ ಮನೆಯಲ್ಲಿಯೂ ಪ್ರತ್ಯೇಕವಾಗಿ ಇರಲಿದ್ದಾರೆ.

ಜಿಲ್ಲೆಯ ಪ್ರಥಮ ಪ್ರಕರಣ ಇದಾಗಿದ್ದರಿಂದ ಜಿಲ್ಲಾಡಳಿತವು ಸಾಕಷ್ಟು ಮುಂಜಾಗರೂಕತಾ ಕ್ರಮಗಳನ್ನು ತಕ್ಷಣದಿಂದಲೇ ಕೈಗೊAಡಿತು.ಅದರಲ್ಲೂ ವೆನ್‌ಲಾಕ್‌ಆಸ್ಪತ್ರೆಗೆ ಇದೊಂದು ಸವಾಲಿನ ಪ್ರಕರಣವಾಗಿತ್ತು.ರೋಗಿಯನ್ನು ಸಂಪೂರ್ಣವಾಗಿ ಪ್ರತ್ಯೇಕವಾಗಿಡುವುದರೊಂದಿಗೆ ರೋಗಕ್ಕೆ ಚಿಕಿತ್ಸೆ ನೀಡುವುದೂ ಕೂಡಾ ಮಹತ್ವದ್ದಾಗಿತ್ತು. ಈ ನಿಟ್ಟಿನಲ್ಲಿ ವೆನ್‌ಲಾಕ್‌ ಅಧೀಕ್ಷಕರು, ವೈದ್ಯರು, ನರ್ಸ್ ಹಾಗೂ ಸಿಬ್ಬಂದಿಗಳು ತಮ್ಮ ಪೂರ್ಣ ಸೇವೆಯನ್ನು ಮೀಸಲಿಟ್ಟು, ಅಂತಿಮವಾಗಿ ರೋಗಿಯನ್ನು ಗುಣಮುಖ ಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಮೂಲಕ, ಜಗತ್ತನ್ನೇ ನಲುಗಿಸಿರುವ ಕರೋನಾ ಸಾಂಕ್ರಾಮಿಕ ಕಾಯಿಲೆ ವಿರುದ್ಧ ವೆನ್‌ಲಾಕ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಮೊದಲ ಯಶಸ್ಸುದೊರಕಿದೆ.

ಬೆಳ್ಳಂಬೆಳಿಗ್ಗೆ ಊರಿನತ್ತ: ಕರೋನಾದಿಂದ ಗುಣಮುಖನಾದ ಭಟ್ಕಳದ 22 ರ ಹರೆಯದ ಈ ಯುವಕನು, ಸೋಮವಾರ ಬೆಳಿಗ್ಗೆ ತನ್ನಊರಿನತ್ತ ತೆರಳಿದನು. ಹೋಗುವಾಗ, ಯುವಕನು ಇಷ್ಟು ದಿನ ವೆನ್‌ಲಾಕ್‌ನಲ್ಲಿತನಗೆಚಿಕಿತ್ಸೆ ನೀಡಿ, ಎಲ್ಲಾಅಗತ್ಯ ಸೌಲಭ್ಯಗಳನ್ನು ಒದಗಿಸಿದ ವೆನ್‌ಲಾಕ್ ವೈದ್ಯರಿಗೆ, ಸಿಬ್ಬಂದಿಗಳಿಗೆ ಗೌರವಿಸಿದನು. ಹಾಗೆಯೇ ವೈದ್ಯರ ಬಳಿ ಭಾವುಕನಾಗಿ ನಿಂತನು.

ದುಬೈಯಲ್ಲಿ ಕಳೆದ 2 ವರ್ಷಗಳಿಂದ ಬ್ರಾಂಡೆಡ್ ವಾಚ್ ವ್ಯಾಪಾರ ಮಾಡುತ್ತಿದ್ದ ಈ ಯುವಕನು, ವೆನ್‌ಲಾಕ್‌ನಲ್ಲಿ ನನಗೆ ಉತ್ತಮಗುಣ ಮಟ್ಟದಚಿಕಿತ್ಸೆ ನೀಡಲಾಗಿದೆ. ತನ್ನನ್ನು ಬಹಳ ಪ್ರೀತಿಯಿಂದ ಇಲ್ಲಿ ಕಾಣಲಾಯಿತು. ಯಾವುದೇ ಸಮಸ್ಯೆಯಾಗದಂತೆ ಇಷ್ಟು ದಿನ ನೋಡಿಕೊಳ್ಳಲಾಗಿದೆ. ತಿನ್ನಲು ಉತ್ತಮ ಆಹಾರವನ್ನೂ ನೀಡಲಾಗಿದೆ ಎಂದುತನ್ನ ಸಂತೋಷ ಹಂಚಿ ಕೊಂಡನು.

ನನಗೆ ಈ ರೋಗ ಹೇಗೆ ಬಂತು ಎಂಬ ನಿಖರ ಕಾರಣ ತಿಳಿದಿಲ್ಲ ಎಂದು ಸ್ಪಷ್ಟಪಡಿಸುತ್ತಾ, ಪಾಸಿಟಿವ್ ದೃಢಪಟ್ಟನಂತರ, ನಾನೇ ಎಲ್ಲರಿಂದಲೂ ಸಂಪೂರ್ಣ ಅಂತರ ಕಾಯ್ದು ಕೊಂಡೆ ಎಂದು  ಯುವಕ ಹೇಳಿದರು.ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಕರೋನಾ ಬಗ್ಗೆ ಸಾಕಷ್ಟು ಭಯಭೀತಿ ಮೂಡಿಸುವಂತೆ ಮಾಡಲಾಗುತ್ತಿದೆಎಂದು ಆ ಯುವಕನುಅಸಮಾಧಾನ ವ್ಯಕ್ತಪಡಿಸಿದನು.

ಕರೋನಾ ವೈರಸ್ ನಮ್ಮದೇಹ ಪ್ರವೇಶಿಸುವುದು ಗೊತ್ತಾಗುವಾಗ ಹಲವು ದಿನಗಳು ಕಳೆದಿರುತ್ತದೆ.ನಮ್ಮಓಡಾಟ ನಿಯಂತ್ರಿಸುವುದು ಪ್ರಾಮುಖ್ಯವಾಗಿದೆ.ಈ ನಿಟ್ಟಿನಲ್ಲಿ ಲಾಕ್‌ಡೌನ್ ಸರಕಾರದ ದಿಟ್ಟಹೆಜ್ಜೆಯಾಗಿದ್ದು, ಸರಕಾರದ ನಿರ್ದೇಶನದಂತೆಎಲ್ಲರೂ ಮನೆಯೊಳಗೆ ಇರುವುದು ಅಗತ್ಯವಾಗಿದೆ. ನಾನು ವಿಮಾನನಿಲ್ದಾಣದಿಂದಲೇ ನೇರವಾಗಿಆಸ್ಪತ್ರೆಗೆದಾಖಲಾಗಿದ್ದರಿಂದ, ಊರಿಗೆ ತೆರಳಿ ಬಳಿಕ ಕುಟುಂಬಸ್ಥರಿಗೆ, ಊರಿನವರಿಗೆರೋಗ ಹರಡುವುದುತಪ್ಪಿತು.ಇದಕ್ಕಾಗಿ ಜಿಲ್ಲಾಡಳಿತಕ್ಕೆ ತಾನು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದುಎಂದುಯುವಕ ಹೇಳಿದನು.

ಕರೋನಾರೋಗಕ್ಕೆ ಹೆದರುವಅಗತ್ಯವಿಲ್ಲ. ಆತ್ಮವಿಶ್ವಾಸ ಮುಖ್ಯವಾಗಿದೆ.ರೋಗಿಯು ಪ್ರತ್ಯೇಕವಾಗಿರುವುದುಅಗತ್ಯ. ಒಬ್ಬಂಟಿಯಾಗಿರುವುದಕ್ಕೆ ಹೆದರುವ ಅಗತ್ಯವಿಲ್ಲ. ಯಾವುದೇ ಕಾರಣಕ್ಕೂಆತ್ಮವಿಶ್ವಾಸ ಕಳೆದುಕೊಳ್ಳಬಾರದು, ಸೋಂಕಿನ ವಿರುದ್ಧ ಹೋರಾಡಲು ನಮ್ಮಲ್ಲಿ ಧೈರ್ಯ ಮುಖ್ಯವಾಗಿದೆಎಂದರು.

ವೈದ್ಯರಚಿಕಿತ್ಸೆ, ದೇವರಅನುಗ್ರಹದಿಂದ ಇದೀಗ ತನ್ನಆರೋಗ್ಯ ಸಾಮಾನ್ಯ ಸ್ಥಿತಿಗೆ ಬಂದಿದೆ.ವೆನ್‌ಲಾಕ್‌ಆಸ್ಪತ್ರೆಯವೈದ್ಯರ, ಸಿಬ್ಬಂದಿಗಳ ನಿರಂತರಆರೈಕೆ ಪರಿಣಾಮತಾನುಗುಣಮುಖನಾಗುವಂತಾಯಿತು ಎಂದು  ಸೋಂಕನ್ನುಗೆದ್ದು ಬಂದ ಬಗ್ಗೆಅವರು ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English