ಬಂಟ್ವಾಳ : ಮಾಜಿ ಸಚಿವ ಬಿ. ರಮಾನಾಥ ರೈ ವೈಯಕ್ತಿಕ ಖರ್ಚಿನಲ್ಲಿ ಬಡವರಿಗೆ ಹಾಗೂ ಸಂಕಷ್ಟದಲ್ಲಿ ಜೀವನ ನಡೆಸುವ ನಾಗರಿಕರಿಗೆ ಅಕ್ಕಿ ಮತ್ತು ದಿನ ಬಳಕೆಯ ಸಾಮಗ್ರಿಗಳನ್ನು ಹಸ್ತಾಂತರಿಸಿದ್ದಾರೆ.
ಬಂಟ್ವಾಳ ವಿಧಾನ ಸಭಾ ಕ್ಷೇತ್ರದ 44 ಪಂಚಾಯತ್ ಮತ್ತು 27 ಪುರಸಭಾ ವಾರ್ಡ್ಗಳಿಗೆ ಕಾಂಗ್ರೆಸ್ ಕಾರ್ಯಕರ್ತರ ಸಹಕಾರದಿಂದ ಆಹಾರ ಸಾಮಗ್ರಿ ಹಸ್ತಾಂತರಿಸಿದ್ದಾರೆ.
ಸೋಮವಾರ ಈ ಕಾರ್ಯಕ್ಕೆ ಸ್ವತಃ ಬಿ. ರಮಾನಾಥ ರೈ ಚಾಲನೆ ನೀಡಿದರು. ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English