ಮೂಡಬಿದಿರೆ :ದೇಶದ ನಾನಾ ಭಾಗಗಳಿಂದ ಬಂದು ಆಳ್ವಾಸ್ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಾಗಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ತಮ್ಮ ತಮ್ಮ ಊರಿನ ಕಲೆಗಳನ್ನು ಆಳ್ವಾಸ್ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಿತ್ತರಿಸಿದರು. ಆಳ್ವಾಸ್ ನುಡಿಸಿರಿ ಘಟಕದ ಉದ್ಘಾಟನಾ ಸಮಾರಂಭದ ಆನಂತರ ನಡೆದ ಆಳ್ವಾಸ್ ಸಾಂಸ್ಕೃತಿಕ ಕಾರ್ಯಕ್ರಮ ಕಲಾ ರಸಿಕರನ್ನು ರೋಮಾಂಚನಗೊಳಿಸಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ನೃತ್ಯ ವೈಭವದ ಮೂಲಕ ನೋಡುಗರ ಗಮನವನ್ನು ಸೆಳೆದರು. ಸುಳ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಪುರಭವನ ತುಂಬಿ ತುಳುಕಿತು. ಕೆಲವರು ಹಿಂಭಾಗದಲ್ಲಿ ನಿಂತುಕೊಂದು ನೋಡುವುದು ಅನಿವಾರ್ಯವಾಯಿತು.
ಮಣಿಪುರಿ ರಾಸಲೀಲಾ, ಶ್ರೀಲಂಕಾದ ನವಿಲು ನೃತ್ಯ, ಕಥಕ್ ಸಮ್ಮೊಹನಾ ಪಶ್ಚಿಮ ಬಂಗಾಲದ ಪುರಲಿಯಾ ಛಾವೊ ಸಿಂಹನೃತ್ಯ, ಆಂಧ್ರಪ್ರದೇಶದ ಬಂಜಾರ ದೃತ್ಯ, ಮಣಿಪುರಿ ದೋಲ್ ಚಲಮ್, ಮಹಾರಾಷ್ಟ್ರ ಲಂಬಾಣಿ ನೃತ್ಯಗಳು ಒಂದನ್ನೊಂದು ಮೀರಿಸುವಂತಿತ್ತು. ಸ್ಟಿಕ್ ಡ್ಯಾನ್ಸ್ ರೋಮಾಂಚನಗೊಳಿಸಿತು. ರಾಜ್ಯದ ನಾನಾ ಕಡೆಯ ಜನಪದ ಸಂಗೀತದ ಝೇಂಕಾರ ಕಾರ್ಯಕ್ರಮದ ಆರಂಭಕ್ಕೆ ಪುಳಕ ನೀಡಿತು. ಮೋಹಿನಿಯಟ್ಟಂ, ಭರತನಾಟ್ಯನವಗ್ರಹ ನೋಡುಗರನ್ನು ಮೋಡಿ ಮಾಡಿತು. ತೆಂಕಿನ ಹನುಮ ಒಡ್ಡೋಲಗ ಯಕ್ಷಗಾನ ಕುತೂಹಲ ಮೂಡಿಸಿದರೆ, ಬಡಗಿನ ಶೃಂಗಾರ ವೈಭವ ಮಾನಿನಿಯರ ನೃತ್ಯ ಕೊರಿಯಾಗ್ರಫಿ ಮೋಹಿಸುವಂತೆ ಮಾಡಿತು.
ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ.ಮೋಹನ್ ಆಳ್ವ ಮತ್ತು ಸಂಸ್ಥೆಯ ರಂಗ ನಿರ್ದೇಶಕ ಜೀವನ್ ರಾಂ ಸುಳ್ಯ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
Click this button or press Ctrl+G to toggle between Kannada and English